00001 – ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ!

ಬ್ಲಾಗಿನ ಮೊದಲಂಕಣ – ಮನದಿಂಗಿತಗಳ ಸ್ವಗತ!

ಮನದಲಿರುವ ತುಡಿತ, ಮಿಡಿತ, ಕಡಿತಗಳೆಲ್ಲ ಹೊರಬರಲು ಬರಹವ್ಹೇಗೆ ದಾರಿಯಾಗುವುದೊ, ಹಾಗೆ ಅದನ್ನು ಹೊರ ಜಗತ್ತಿಗೆ ಮುಟ್ಟಿಸಲು ಅಷ್ಟೆ ಪರಿಣಾಮಕಾರಿ ಸಾಧನಗಳು ಅತ್ಯಗತ್ಯ. ಹಿಂದೆ ಮತ್ತು ಈಗಲೂ ಪತ್ರಿಕೆಗಳು, ಪುಸ್ತಕಗಳು ಆ ಕಾರ್ಯವನ್ನು ಚೊಕ್ಕಟವಾಗಿ ನಿರ್ವಹಿಸುತ್ತಾ ಬಂದಿವೆ. ಅದರ ಹೊಸ ಅಯಾಮವಾಗಿ ತೆರೆದುಕೊಂಡ ತಾಂತ್ರಿಕತೆಯ ಅವಿಷ್ಕಾರಗಳು, ಮಾಹಿತಿ ಮತ್ತು ಸಂವಹನ ಜಗದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿ, ಜನಮನಗಣಗಳು ಸಂವಾದಿಸುವ ವಿಧಾನದಲ್ಲೆ ಮೂಲಭೂತ ಬದಲಾವಣೆ ತರುವತ್ತ ದಾಪುಗಾಲಿಕ್ಕುತ್ತಿವೆ. ಯಾರು ಇದರಿಂದ ಹೊರತಾಗುತ್ತಾರೊ ಅವರೆ ಈ ಬದಲಾವಣೆಯ ಕ್ರಾಂತಿಯಲ್ಲಿ ಪಾಲುದಾರರಾಗುವ ಸುವರ್ಣಾವಕಾಶದಿಂದ ವಂಚಿತರಾಗಬೇಕಾಗುತ್ತದೆ. ಬದಲಾಗಿ ಇದನ್ನಪ್ಪಿದವರಿಗೆ ಹೊಸ ಮಾಧ್ಯಮ, ದಾರಿಗಳು ಗೋಚರವಾಗಿ ಹೊಸತಿನ ಹೊಸ ಜಗತ್ತೆ ತೆರೆದುಕೊಳ್ಳಬಹುದು. 

ಅಂಥ ಸಮೂಹ ಸಂವಹನದ ಮಾಧ್ಯಮವಾಗಿ ತೆರೆದುಕೊಂಡ ನೂರಾರು ಬಾಗಿಲುಗಳಲ್ಲಿ ಒಂದು – ಈ ಬ್ಲಾಗ್ ಅಂಕಣಗಳು. ಸೈದ್ದಾಂತಿಕವಾಗಿ ಇದರ ಆಳಗಲ ಅಪರಿಮಿತ – ಪ್ರತಿಯೊಬ್ಬನೂ ಪ್ರತಿಯೊಬ್ಬನನ್ನು ಮುಟ್ಟಬಲ್ಲ ಸಾಮರ್ಥ್ಯವನ್ನೊದಗಿಸಿಕೊಡಬಲ್ಲ ದೈತ್ಯ. ದೇಶ, ಕಾಲ, ಅವಕಾಶಗಳ ಪರಿಮಿತಿ ಎಲ್ಲೆ ಮೀರಿಸಿ ಎಲ್ಲೆಡೆಗು ತಲುಪಿಸಬಲ್ಲ ಜಾದುಗಾರ. ಅಂತೆಯೆ, ಪ್ರತಿಯೊಬ್ಬನಿಗೂ ತಲುಪಿದ್ದನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ, ನಿರಾಕರಿಸುವ, ರವಾನಿಸುವ ಸ್ವೇಚ್ಚೆ – ಸ್ವಾತ್ಯಂತ್ರವನ್ನೂ ನೀಡುವ ಹರಿಕಾರ. ಏನಿಲ್ಲದಿದ್ದರು ಕೊನೆಗೆ, ಮನದಿಂಗಿತಗಳನ್ಹೊರಹಾಕಬಯಸುವ ಚಡಪಡಿಕೆಗೆ ದಾರಿ ಮಾಡಿ ಮನ ನಿರಾಳ ಮಾಡುವ ಮನೋವೈದ್ಯ. ಯಾರು ನೋಡಲಿ – ಬಿಡಲಿ, ಓದಲಿ – ಬಿಡಲಿ, ತನ್ನ ಎದೆಭಾರವಿಳಿಸುವ ಮಾಧ್ಯಮವಾಗಿದ್ದರೆ ಸಾಕೆನ್ನುವವನಿಗೂ ಇದು ಸೈ. 

ಅಂಥ ಒಂದು ಬ್ಲಾಗಿನಂಕಣದ ನನ್ನ ಮೊದಲ ಬರಹವಿದು. ಏನಿದರ ಹಿಂದಿನುದ್ದೇಶ? ನಿಜಕ್ಕೂ ಯಾವುದೆ ಗುರಿ ಉದ್ದೇಶವಿರದೆ ಬರಿ ಮನದನಿಸಿಕೆಗಳಿಗೆ ಬರಹದ ರೂಪಕೊಡುವ ಕಿರು ಆಶಯದೊಂದಿಗೆ ಬರೆಯುತ್ತಿದ್ದೇನೆ. ಲಹರಿಯ ವಿಹರಿ ಹರಿದು ಸ್ವಾದಾಸ್ವಾದನೆಗರ್ಹ ಬರಹಗಳಾಗಿ ಹೊರಬಿದ್ದರೆ, ಓದಿದವರು ಖುಷಿಯಿಂದ ಮೆಚ್ಚಿದರೆ  ಅಥವ ಟೀಕಿಸಿ ಲೋಪದೋಷಗಳ ಅರಿವಾಗಿಸಿದರೆ ಸಂತಸ. ಆ ಪ್ರಕ್ರಿಯೆಯಲ್ಲೆ ಬಹುಶಃ ನಾನೂ ಬೆಳೆದು ನನ್ನ ಸ್ತರವನ್ನೆತ್ತರದ ನೆಲೆಗೊಯ್ಯಲು ಸಾಧ್ಯವಾದೀತು.

ನೋಡುವ,ಇದು ಎಲ್ಲಿಯತನಕ ಸಾಗೀತೆಂದು!

ಮನದಿಂಗಿತ ಸ್ವಗತ
______________

ನಾನ್ಹುಡುಕೆ ನನ್ನಾಶಯ, ಬರೆಯಲೇನಿದೆ ವಿಷಯ
ತಲೆ ಕೆರೆದೂ ಖಾಲಿ, ಬರಿ ಬರೆವ ಖಯಾಲಿ!

ಡೈರಿ ಬರೆದಂತೆ ಬ್ಲಾಗು, ಬಯಲಿಗಿಟ್ಟ ಭಾವನೆಗು
ಬರುವರೆ ಗಿರಾಕಿ ಹುಡುಕಿ, ಸಂಶಯಗಳದೇ ಗಿರಕಿ!

ಮನ ಬಂದಂತೆ ಗೀಚಿ, ಮಾನದ್ದೆಲ್ಲ ಮರೆಮಾಚಿ
ಮನದೊಳಗೇ ಮೊಗಚಿ, ಕೊನೆಗೂ ಬೆಳಕ ದೋಚಿ!

ಬಿಟ್ಟೀತೆ ಛಿ!ಛಿ! ಭಾವ, ನಿರಾಳತೆಯಾಗಿ ಸಹಜ
ಉರುಳೀತೆ ನಿಲ್ಲದಲೆಗೆ, ನಾನೀಗೇರಿದಾ ಜಹಜ!

ಬ್ಲಾಗಂತೇ ಸೋಗಂತೆ, ಮನದಿಂಗಿತ ಸ್ವಗತ
ಕಾಳ್ಹಾಕಿಡಲ್ಹವಣಿಕೆಗೆ, ಮೆಚ್ಚು ಬೆಚ್ಚುತೆ ಗಣಿತ!

(ನಾಗೇಶ ಮೈಸೂರು)

20130328-175956.jpg

14 thoughts on “00001 – ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ!”

    1. ಧನ್ಯವಾದ ಶ್ರೀಧರ್, ಕೆಲವು ಆಗಾಗ ಸಂಪದದಲ್ಲು ಇಣುಕುತ್ತಿರುತ್ತವೆ. ನಿಮ್ಮ ಮತ್ತು ಶ್ರೀಧರಬಂಡ್ರಿ ಯವರ ಹಾಗೆ ಗಹನವಾದ ವಿಷಯಗಳನ್ನು ಬರೆಯುವ ಪಾಂಡಿತ್ಯ ನನಗಿಲ್ಲವಾಗಿ, ತೋಚಿದ್ದನ್ನು ಗೀಚುವೆ – ಆದಷ್ಟು ಸರಳವಾಗಿ. ಸಮಯವಾದಾಗ ನಿಮ್ಮ ಅನಿಸಿಕೆಯನ್ನು ಮುಕ್ತವಾಗಿ ತಿಳಿಸಿ, ಬರಹಗಾರರಾಗಿ ಬೆಳೆಯಲು ಸಹಾಯಕವಾಗುತ್ತದೆ 🙂

      Like

  1. ಬರೆವ ಖಯಾಲಿ, ಭಾವನೆಗಳ ಬಯಲಿಗಿಡುವ ಉದ್ದೇಶಕ್ಕೆ ಗಿರಾಕಿಗಳ ಚಿಂತೆ ಬೇಡ. ಬಾರದಿದ್ದರೆ ಅವರಿಗೇ ನಷ್ಟ……..ಹೀಗೇ ಮುಂದುವರೆಯಲಿ ನಿಮ್ಮ ಮನದಿಂಗಿತಗಳ ಸ್ವಗತ…

    Liked by 1 person

    1. ಇನ್ನು ಗಿರಾಕಿಗಳಿಲ್ಲವೆಂಬ ಚಿಂತೆ ಮಾಡುವುದಿಲ್ಲ ಬಿಡಿ. ಬರಲಿ ಬಿಡಲಿ, ಬರೆವ ಖಯಾಲಿ ಹೊರಡಿಸುತ್ತಲೆ ಇರುತ್ತದೆ ತನ್ನ ಮನೋರಥದ ಸ್ವಗತ, ಆಗುವಂತೆ ಅಗಣಿತ 😊👍🙏

      Like

    1. Thanks a lot Prakash – the first ones are always close to heart – however childish and naive that are 🙂

      Though not yet reached your level of maturity and reach ( and I saw you already have 3 books to your credit – congratulations on that part! 👍👏🏻), the pure drive to write for passion is keeping me pushing till now. When I started, I never imagined it would come this far. Now it seems like my constant ‘selfie’ reflecting ‘myself’ on a parallel track 😊

      Liked by 1 person

      1. Very true! First posts are always favorites! 🙂

        Haa! I started blogging recently (around 1.5 years ago). Thank you for the wishes. 🙂 They mean a lot. Writing has become part of my life now.

        I can understand that. Writing sure opens up a lot of doors and windows. I am petty sure that you will have at-least 99999 posts (Such a pre-planned numbering scheme!). I will definitely come back frequently and read as much as i can. Yayy! I am all smiles.. 🙂

        Liked by 1 person

        1. Planning never hurts – as Long as you have ‘leading’ zero’s on your side 😀 . And 99999 is a tall order since the designated age span seems to be too short for that.. But keeping that as the goal at least should help to be down to earth – whenever you see the GAP !

          I never attempted on reach till recently. So there are some lessons I should learn from your experience and make it better 😊

          Liked by 1 person

Leave a reply to Prakash Hegade ಪ್ರತ್ಯುತ್ತರವನ್ನು ರದ್ದುಮಾಡಿ