00120. ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ?

ಪಾರ್ಥರ ‘ಥುಸ್ ಪಟಾಕಿ’ ಓದ್ತಾ ಹಳೆಯ ಪಟಾಕಿ ಹೊಡೆಯುತ್ತಿದ್ದ ದಿನಗಳೆಲ್ಲ ನೆನಪಾದವು. ಅದರಲ್ಲೂ ‘ಟುಸ್ ಪಟಾಕಿ’ಯಾದರೆ ತರುತ್ತಿದ್ದ, ಅವಮಾನ, ಕೀಳರಿಮೆ, ಸಿಟ್ಟು, ರೋಷ, ಅಸಹಾಯಕತೆ ಎಲ್ಲಾ ನೆನಪಾಯಿತು. ಹಾಗೆಯೆ ರಸ್ತೆಯಲ್ಲೆ ಹಚ್ಚುವಾಗ ಓಡಾಡುವವರ ಪಾಡು, ಹಚ್ಚಿದ ಪಟಾಕಿಯ ಜತೆಯೆ ಹುಡುಗಾಟವಾಡುವ ತುಡುಗು ಹುಡುಗರ ಭಂಡ ಧೈರ್ಯ, ಹಚ್ಚಲು ಹೆದರುತ್ತಲೆ ಹಚ್ಚಿದ್ದೇವೆಂದುಕೊಂಡು ಕಿಡಿ ಅಂಟಿಕೊಳ್ಳುವ ಮೊದಲೆ ಓಡಿ ಬರುವ ಪುಕ್ಕಲಿನ ಚಿಣ್ಣರು, ಆ ಹೆದರಿಕೆಯನ್ನು ಮೆಟ್ಟಿದಾಗ ಕಲಿಕೆಯಾಗಿ ಬದಲಾಗುವ ಸೊಗಡು – ಎಲ್ಲಾ ನೆನಪಾಗಿ ತುಣುಕುಗಳಾಗಿ ಹೊರಬಿದ್ದದ್ದು ಈ ಕೆಳಗಿನ ಕವನವಾಗಿ. ಮಕ್ಕಳದೆಂದು ಹೇಳಬಹುದೊ ಇಲ್ಲವೊ – ಮಕ್ಕಳು ಮತ್ತು ಪಟಾಕಿಯ ಕುರಿತ ದೀಪಾವಳಿ ಚಿತ್ರಣವೆಂಬುದಂತೂ ನಿಜ. ಮತ್ತೆ ದೀಪಾವಳಿ – ಬಲಿಪಾಡ್ಯಮಿಯ ಶುಭಾಶಯಗಳೊಂದಿಗೆ ತಮ್ಮ ಮನರಂಜನೆಗೆ 🙂
.
ಸ್ಪೂರ್ತಿಗೆ ಕಾರಣರಾದ ಪಾರ್ಥರಿಗೆ ದೀಪಾವಳಿ ಶುಭಾಶಯದೊಂದಿಗೆ ‘ಥ್ಯಾಂಕ್ಸು’ 🙂
.
– ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
.
.
ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ?
_____________________________
.
ಟುಸ್ ಪಟಾಕಿ ನೋಡೊಲೆ
ಬುಸ್ಬುಸ್ಸಂತ್ಲೆ ಬಿದ್ದೋದ್ವಲೆ
ಕಚಡಾ ಮಾಲು ಕೊಟ್ಟವ್ನಲ್ಲ
ಹಳೆ ಸ್ಟಾಕ್ತಂದು ಕೆಟ್ಟೋದ್ನಲ್ಲ ||
.
ಹಿಡ್ಕೊಂಡೆ ಚಡ್ಡಿ ಗಂಧದಕಡ್ಡಿ
ರಸ್ತೆಲಿಟ್ಟ ಕೈಕಾಲು ಎರಡಡಿ
ಆನೆ ಪಟಾಕಿ ಹಚ್ಚೋಡಿ ಬಾಕಿ
ಬೆನ್ಹಾಕಿ ಕಣ್ಮುಚ್ಚಿ ಕಿವಿಗ್ಬೆರಳಾಕಿ ||
.
‘ಜುಂಜುಂ’ ಅದುರಿ ಮೈಯೆಲ್ಲ
ಸರಿ ಇನ್ನೇನು ಸಿಡಿಯುತ್ತೆಲ್ಲಾ
ಬಿಗಿ ಕಣ್ಮುಚ್ಚಿದ್ರು, ಎದೆ ಡವಡವ
‘ಢಂ’ ಅನ್ನೋದ್ಯಾವಾಗ್ಲೊ ಶಿವಶಿವ ||
.
ಗಳ್ಗಳಿಗೆ ನಿಮಿಷ ಇಲ್ಲ ತಾನೆ ಮೋಸ
ಯಾಕೊ ಸಿಡಿಯೊ ಹಂಗೆ ಕಾಣ್ತಿಲ್ಲ ಖಾಸ
ಓಡಾಡೊ ಜನ್ರೆಲ್ಲ ನಿಂತವ್ರೆ ಕಿವಿ ಮುಚ್ತಾ
ಸಿಡಿಯೊ ಬಡ್ಡಿಮಗ್ನೆ , ಕೊಟ್ಟಿಲ್ವಾ ಕಾಸ? ||
.
ಯಾಕೊ ಅನುಮಾನ ಸದ್ದಿಲ್ಲ ಸುಸ್ತ
ತರಬಾರದಾಗಿತ್ತಲ್ಲಿ ಸಿಕ್ತೂಂತ ಸಸ್ತಾ
ಬೀದಿಲ್ಹೋಗೊವ್ರು ಅಂದ್ರೆ ‘ಟುಸ್ ಪಟಾಕಿ’
ನಕ್ಕೊಂಡ್ ದಾಟ್ಕೊಂಡೋದ್ರೆ ಅವ್ಮಾನ ಜಾಸ್ತಿ ||
.
ಹತ್ರ ಹೋಗೋಕೂ ಭಯ, ಸಿಡಿದ್ಬಿಟ್ರೆ ಕಷ್ಟ
ಹೆಜ್ಜೆಜ್ಜೆ ಇಡ್ತಾ ಹೋಗ್ತ ಸರದ ಹತ್ರ ದಿಟ್ಟ
ಕಾಲಲ್ಜಾಡಿಸಿ ಆಡಿಸಿ ಕಿಡಿಯೆ ಕಾಣ್ತಿಲ್ವಲ್ಲಾ
ಅಯ್ಯೊ ಶಿವನೆ, ಬತ್ತಿನೆ ಹತ್ಕೊಂಡಿಲ್ವಲ್ಲ ! ||
.
ಈ ಸಾರಿ ಧೈರ್ಯ ದೂರ್ದಿಂದ್ಲೆ ಶೌರ್ಯ
ಕಿಡಿ ಕಾರೊತನಕ ಅಲ್ಲೆ ನಿಂತಿದ್ದ ಆರ್ಯ
ಬತ್ತಿ ದಾಟಿದ್ ಕತ್ತಿ, ಕಿಡಿಯೆಲ್ಲಾಕಡೆಗ್ಹತ್ತಿ
ಬಿದ್ನೊ ಎದ್ನೊ ಓಡಿ, ಸಿಕ್ಕಿದ್ಮೂಲೆಗ್ ನುಗ್ತಿ ||
.
ಯಾಕೊ ಇನ್ನು ಕ್ಯಾಣ, ತಿಂತಿದೆಯಲ್ಲ ಪ್ರಾಣ
ನಾಳೆಯಿಂದ್ಲೆ ನನ್ನ ‘ಟುಸ್ಪಟಾಕಿ’ ಅಂತಾರಣ್ಣ
ಮಾನ ಉಳ್ಸೊ ಮಗನೆ, ಇಷ್ಟಾದ್ರೂ ಸದ್ದು
ಮಾಡ್ಕೊಂಡು ನೆಗೆದ್ಬೀಳು, ಒಳ್ಗಿಲ್ವಾ ಮದ್ದು? ||
.
ಕಣ್ತುಂಬಾ ನೀರು, ನೆರೆ-ಹೊರೆ ಸದ್ದೆ ಜೋರು
ದಾರಿಲ್ಹೋಗೊರ್ ಧೈರ್ಯ, ಒದ್ಕೊಂಡೆ ಹೋದ್ರು
ಕೀಟಲೆ ರಾಜ ಗೊತ್ತ, ಕಿಂಡಾಲ್ ಮಾಡ್ತ ಒದ್ದ
ಢಂಢಂ ಸಿಡಿದೆ ಬಿಡ್ತ, ಮಗ ಓಡ್ದಾ ಎದ್ದ್ ಬಿದ್ದಾ ||
.
ಸದ್ಯ ನಾನಾಗ್ಲಿಲ್ಲ, ಟುಸ್ಪಟಾಕಿ ಪದವಿಗ್ ತುತ್ತು
ತಡವಾಗೆ ಸಿಡಿದ್ರೂನು, ಸರಿಯಾಗ್ಗೂಸ ಕೊಡ್ತು
ಕಾಲ್ಗಾಕ್ಕೊಂಡವನೀಗ ಬ್ಯಾಂಡೇಜು, ಕುಂಟ್ತಾ
ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ? ||
.
.
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s