00124. ಈ ಕೆಮ್ಮೊಣಕೆಮ್ಮು…

ಚಳಿ, ಮಳೆ, ಗಾಳಿಯಿರಲಿ, ಬಿರುಸಿನ ಬಿಸಿಲಿರಲಿ ಯಾವುದಾದರೂ ನೆಪದಿಂದ ಬಂದು ಎಲ್ಲರನ್ನು ಒಂದಲ್ಲ ಒಂದು ತರ ಬಂದು ಕಾಡುವ ನೆಂಟರು – ಜ್ವರ, ಕೆಮ್ಮು, ನೆಗಡಿ, ಶೀತಗಳ ಸರದಾರರು. ಆಧುನಿಕವೊ, ಸಾಂಪ್ರದಾಯಿಕವೊ – ಯಾವ ಔಷದಿ ತೆಗೆದುಕೊಂಡರೂ ತಮಗೆ ಸಾಕೆನಿಸುವಷ್ಟು ಕಾಡಿದ್ದಷ್ಟೆ ಅಲ್ಲದೆ, ಹೋದ ಮೇಲೂ ಒಣ ಕೆಮ್ಮಿನಂತಹ ಕುರುಹನ್ನು ಹಿಂದೆ ಬಿಟ್ಟು, ಮತ್ತೆ ಬರುವ ಗುರುತು ಹಾಕಿ ಹೋಗುವ ಮಹಾನ್ ಕಪಿ ಶ್ರೇಷ್ಠರು. ಬಲಹೀನರಿಂದ ಹಿಡಿದು ಬಲಾಢ್ಯರಿಗು ಅಲುಗಾಡಿಸಿ ಹೋಗುವ ಈ ಆಯಾಚಿತ ಬಂಧುಗಳನ್ನು ಬರದಂತೆ ತಡೆಯುವುದೆ ಕ್ಷೇಮಕರವಾದರೂ, ನಮ್ಮ ಮನೆಗೆ ಬಂದಷ್ಟೆ ಸಲೀಸಾಗಿ ನೆರೆಹೊರೆಯವರನ್ನು ಆರಾಮವಾಗಿ ತಗಲಿಕೊಳ್ಳುವ ಸಂತ ಗುಣದಿಂದಾಗಿ ನಮ್ಮೆಲ್ಲ ರಕ್ಷಣಾ ಕೋಟೆಯಲ್ಲಿ ಹೇಗೊ ಒಂದು ತೂತು ಕೊರೆದು ಒಳನುಗ್ಗಿಬಿಡುತ್ತವೆ. ಬಂದ ಮೇಲೆ, ಕನಿಷ್ಠ ಒಂದು ಸಣ್ಣ ಗುರುತಾದರೂ ಮಾಡದೆ ಹೋದರೆ ಅವಕ್ಕೆಲ್ಲಿ ಸಮಾಧಾನ? ಅದರಲ್ಲಿಯೂ ಅವಕ್ಕೆ ಬೇಕಾದ ಸೂಕ್ತ ವಾತಾವರಣವಿದ್ದರಂತೂ ವೈದ್ಯರ ಅಂಗಡಿಯ ಮುಂದೆ ಸಾಲಾಗದೆ ವಿಧಿಯಿಲ್ಲ. ಆ ದಿನಗಳಲ್ಲಿ ಕಾಡುವ ಕೆಮ್ಮು – ಒಣಕೆಮ್ಮಿನ ಸಣ್ಣ ‘ವಿಶ್ವ ರೂಪ’ ಈ ಪುಟ್ಟ ‘ಕೆಮ್ಮಮ್ಮ..’ ಕವನ. ಈಗಲೂ ಕೆಮ್ಮುತ್ತಿದ್ದವರಿಗೆ ಸಂತಾಪ ಸೂಚಕವಾಗಿ ಹಾಗೂ ಕೆಮ್ಮದೆ ಆರಾಮವಾಗಿರುವವರಿಗೆ ಹುಷಾರಾಗಿರುವಂತೆ ಎಚ್ಚರಿಕೆಯ ಗಂಟೆಯಾಗಿಸಲು…’ಆಲ್ ದಿ ಬೆಸ್ಟ್ ಆಫ್ ಕೆಮ್..’ 🙂

ಈ ಕೆಮ್ಮೊಣಕೆಮ್ಮು…
________________

ಗಂಟಲೊಳಗೆ ಸೇರಿ ಹೆಗ್ಗಣ
ಗೂರಲೊ ದಮ್ಮೆಲ್ಲ ಮಿಶ್ರಣ
ಉಸಿರೆಳೆಸೆಳೆಸಿ ಗಂಟಲೆಬ್ಬಿ
ಉಸಿರಾಡಲೆ ತ್ರಾಸವೆ ದಬ್ಬಿ ||

ಗೊರಗೊರ ನಳಿಗೆಯ ರೂಪ
ಒಣಗಿ ಒರಟಾದ ಗತಿ ಶಾಪ
ನೀರ್ಕುಡಿ ಕುಡಿದು ದಿನವಿಡಿ
ನೀರಾಗಿದ್ದರು ತಪ್ಪ ಗಡಿಬಿಡಿ ||

ಹತ್ತಿರ ನೆಂಟ ನೆಗಡಿ ತುಂಟ
ಸೋರುತ ಜಾರುತಾ ಭಂಟ
ಕರವಸ್ತ್ರ ಪರವಸ್ತ್ರ ಮಲೀನ
ಕಟ್ಟಿದ ಮೂಗಲ್ಲೆಲ್ಲ ವಿಲೀನ ||

ತಿನ್ನಲು ಬಿಡದಾ ಧಾಂಧಲೆ
ಚಿಕಿತ್ಸೆಗಳೆಲ್ಲ ಬರಿ ಸವಕಲೆ
ಜೀವನಾಶಕ ಪ್ರತಾಪ ಭಲೆ
ಆಮೇಲೊಣಕೆಮ್ಮೆ ನರಳಲೆ ||

ಜ್ವರನೆಗಡಿ ಕೆಮ್ಮಾಗಿಸೌಷಧಿ
ಕೆಮ್ಮು ಬದಲಾಯಿಸಿನೆಗಡಿ
ಹೇಗೊ ಹೋಗುವ ಪರಿವಿಡಿ
ಅರಿಶಿನ ಮೆಣಸಿನ್ಹಾಲ ಕುಡಿ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
(Sampada 17.11.2013)

Advertisements

2 thoughts on “00124. ಈ ಕೆಮ್ಮೊಣಕೆಮ್ಮು…”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s