00132. ಅಂಗಜನ ಅಂಗದ ಸದ್ದು …

ಬೆಳದಿಂಗಳಿನ ಸಖಿಯಿಲ್ಲದ ಏಕಾಂತದ ರಾತ್ರಿಯೊಂದರಲ್ಲಿ ವಿರಹಿಯೊಬ್ಬ ಕಿಟಕಿಯಿಂದ ಕಾಣುವ ನಭ ವೈಭವವನು ನೋಡಿ ಆಸ್ವಾದಿಸುತ್ತಲೆ, ಕಾರ್ಮೋಡಗಳ ಆಲಿಂಗನ ಸದ್ದಿನಲಿ ವಿರಹಿಗಳ ಪ್ರಣಯದ ತಾದಾತ್ಮ್ಯತೆಯನ್ನು ಕಾಣುತ್ತಾ, ಹುಚ್ಚೆದ್ದಂತೆ ಮಳೆಯಾಗುವ ಹೊತ್ತು, ಮನಕೂ ಹುಚ್ಚಿಡಿಸಿ ರಚ್ಚೆಯಾಡಿಸುತ ಕಾಡುವ ಬಗೆಯನ್ನು, ಅಂಗಜನ ಕೆದಕನ್ನು, ಪ್ರಣಯಿನಿಯಿರದೆ ಕೇಳಲಾಗದ ಅಂಗದದ ಸದ್ದಿರದ ಸ್ಥಿತಿಯನ್ನು ಚಿತ್ರಿಸುವ ಕವನ.

ಅಂಗಜನ ಅಂಗದ ಸದ್ದು …
__________________________

ನಡುರಾತ್ರಿ ಕಳೆದು ಎಲ್ಲೆಡೆ ನಿದ್ದೆಯ ಸದ್ದು
ತಾರಾಲೋಕದಿ ಬೆಳದಿಂಗಳು ಸರಹದ್ದು
ಏಕಾಕಿ ಮಲಗಿ ಏಕಾಂತ ಮಂಚದ ಮೇಲೆ
ತಾಡಿಸಿತ ಅಂಗಜ ಅಂಗದ ಸದ್ದಿನ ತಾಳೆ ||

ಹಚ್ಚ ಅರಳೆಯ ಸೀರೆ ನಳ ನಳಿಸೊ ನೀರೆ
ಸೆರಗಂಚಲಿ ಥಳ ಕಪ್ಪು ಮಿನುಗುವ ತಾರೆ
ಉಲ್ಕೆ ನೀಹಾರಿಕೆ ಹಬ್ಬ ವಿಸ್ತಾರದ ಗಬ್ಬ
ಸಾಗರವೆ ಸಡಗರವೆ ದೂರ ಕಾಣದ ದಿಬ್ಬ ||

ಕಿಟಕಿಯೊಳಿಂದ ಕಟಕಿಯಾಡುವ ಭರ್ತ್ಯ
ಕೋಲು ಬೆಳಕು ಓರೆ ಒರೆಗಚ್ಚುವ ಧಾರ್ಷ್ಟ್ಯ
ತಂಪು ಕಿರಣಕೆ ಮಾತ್ರ ಸ್ಪರ್ಶ ತನು ಪಾತ್ರೆ
ನಿಗಿ ಕೆಂಡ ಬಯಕೆ ಸಖಿ ಜತೆಗಿಲ್ಲದ ರಾತ್ರೆ ||

ಬೆವರೊಡೆದ ಹೊತ್ತು ಬಯಕೆಗೊ ಸೆಕೆಗೊ
ಮುಗಿಲಲೊಗ್ಗೂಡಿತ್ತು ಕರಿ ಮೇಘ ಭವಕೊ
ಸಿಂಪಡಿಸಿ ಸಿಂಚನ ಹನಿಹನಿ ದನಿ ಭುವನ
ಹುಚ್ಚೆಬ್ಬಿಸಿ ಅಂಗಜನಂಗದ ಸದ್ದಿನ ಕವನ ||

ಕಪ್ಪಿಡಿದು ಕಾರ್ಮೋಡ ಹೆಪ್ಪಿಡಿದು ತಾಡ
ಹುಚ್ಚಿಡಿದ ಕಪ್ಪುಬಿಳಿ ಮೋಡದ ಕರತಾಡ
ಮಾತುಗ ಜಾಣ್ಮೆ ಮಾತಾಟ ಬಲ್ಮೆ ಗುಡುಗೆ
ಕೋಲ್ಮಿಂಚ ಕರವಾಳ ಸಿಡಿಲಾಗಿಸಿ ನಡುಗೆ ||

——————————————————————–
ನಾಗೇಶ ಮೈಸೂರು, ೨೬. ಆಗಸ್ಟು. ೨೦೧೨, ಸಿಂಗಾಪುರ
——————————————————————–
ಅಂಗಜ = ಮನ್ಮಥ, ಕಾಮ
ಅಂಗದ = ತೋಳ್ಬಂದಿ, ತೋಳು ಬಳೆ
ಮಾತುಗ = ವಾಗ್ಮೀ
ಮಾತಾಟ = ಸರಸವಾದ ಮಾತುಕಥೆ
ಕರವಾಳ = ಕತ್ತಿ
ಕರತಾಡ – ಅನ್ನು ಕೈ ಮಿಲಾಯಿಸುವಿಕೆ, ತೀಡುವಿಕೆ, ಕರಸ್ಪರ್ಶ (ಕರತಾಡನದಂತೆ) ಅನ್ನುವ ಅರ್ಥದಲ್ಲಿ ಬಳಸಿದ್ದೇನೆ.

ಗುಂಪು / ವಿಂಗಡಣೆ: ವಿರಹ, ಮಳೆ, ಆಗಸ, ಅಂಗಜ, ಅಂಗದ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s