00141. ಕಚ’ಗುಳಿಗೆ’

00141. ಕಚ’ಗುಳಿಗೆ’

ಸುಮ್ಮನಿರಲಾರದೆ ತೀಡಿದ ಪದಗಳು ಗೀಚಿದ ಸಾಲಾದಾಗ ಬಂದ ಲಹರಿಯ ತುಣುಕುಗಳು. ಚುಟುಕವೊ, ಮಿನಿಗವನವೊ, ಹನಿಗವನವೊ ಎಂದೆಲ್ಲ ತಲೆ ಕೆಡಿಸಿಕೊಳ್ಳದೆ ಇಲ್ಲಿ ಡಾಕ್ಟರು ಕೊಟ್ಟ ಮಾತ್ರೆಯ ಹಾಗೆ ಒಟ್ಟಿಗೆ ಗುಂಪಿನಲ್ಲಿ ಹಾಕಿದ್ದೇನೆ, ಲಘು ಹಾಸ್ಯ ಮುಗುಳ್ನಗಿಸುವ ಕಚ’ಗುಳಿಗೆ’ಯಾದೀತೆಂಬ ಆಶಯದಲ್ಲಿ – ಏನಿಲ್ಲದಿದ್ದರೂ ಟೈಂಪಾಸ್ ಲೆಕ್ಕದಲ್ಲದರೂ ನೋಡಬಹುದೆಂದುಕೊಂಡು 🙂

01. ಹಣದ ಋಣ
____________
ಇಟ್ಟುಕೊಳ್ಳಬಾರದು
ಸಾಲದ ಋಣ
ತಿರುಗಿಸಿ ಕೊಟ್ಟುಬಿಡೋಣ
ಅಂದರೆ –
ಹುಟ್ಟುತ್ತಿಲ್ಲವೆ
ಹೊಸ
ಸಾಲದ ಹಣ !

02. ಕ್ರೆಡಿಟ್ಟು ಕಾರ್ಡು ನೀತಿ ಸೂಕ್ತಿ
_________________________
ಮತ್ತೆ
ಕೇಳಲಾಗದಷ್ಟು
ಪರಿಸ್ಥಿತಿ
ದಾರುಣ,
ಕಂಠ ಪೂರ್ತಿ
ತಿಂದು
ಆಗುವತನಕ
ನಿತ್ರಾಣ,
“ಸಾಲ
ಮಾಡಿಕೊಂಡೆ
ತಿನ್ನೋಣ” !

03. ಜಾಣತನ
____________
ಚಿನ್ನದ ಬೆಲೆ
ಬಿದ್ದಾ-ಗೆಲ್ಲ
ಮುದ್ದಿಸುತ್ತಾಳೆ
ನನ್ನ ಗಲ್ಲ !!

04. ದುರಾಸೆ
____________
ಗಂಡು
ಪ್ರಬುದ್ಧ
ಹೆಣ್ಣು
ಪ್ರಬುದ್ಧ
ವರದಕ್ಷಿಣೆ ಪಟ್ಟಿ
ಯಾಕಿನ್ನೂ ಉದ್ದ?

05. ವಿ’ದಾನ’
________________
ಮೈದಾನದಲಿ
ಚಿಕ್ಕವರಾಡೊ
ಆಟ
ಹೊರಾಂಗಣ ಕ್ರೀಡೆ;
ಮೈ’ದಾನ’ದಲಿ
ದೊಡ್ಡವರಾಡೊ
ಆಟ
‘ಒಳಾಂಗಣ’ ಕ್ರೀಡೆ 🙂

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s