00143. ಕಚ’ಗುಳಿಗೆ’ – 02

00143. ಕಚ’ಗುಳಿಗೆ’ – 02
_________________

ಈ ಬಾರಿಯ ಲಹರಿ ಯಾಕೊ ಹೆಚ್ಚು ಹೆಚ್ಚು ಒಡವೆಗಳ ಸುತ್ತಲೆ ಸುತ್ತುತ್ತಿತ್ತು. ಅದಕ್ಕೆ ದೃಷ್ಟಿ ಬೊಟ್ಟಾಗಿರಲೆಂದು ಮೊದಲನೆಯದನ್ನು ಬೇರೆಯದಾಗಿಸಿ ಮಿಕ್ಕಿದ್ದೆಲ್ಲ ಬೆಳ್ಳಿ ಬಂಗಾರವಾಗಿಯೆ ಇರಿಸಿದೆ. ಸರಳವಾದ ಪದಗಳಲ್ಲಿ, ತುಸು ಪದಗಳಲ್ಲಿ ತಾಕಲಾಡಿಸಿದ ಸಾಲುಗಳಷ್ಟೆ ಇಲ್ಲಿ ಬಂಡವಾಳವಾದರೂ, ಒಡವೆಯ ಮೇಲಿನ ಹೆಣ್ಣಿನ ಅಪರಿಮಿತ ಮೋಹವನ್ನು ಲಘುವಾಗಿ ಛೇಡಿಸುವ ಪುಟ್ಟ ಲಹರಿಗಳಿವು. ಅಂತೆಯೆ ಸದಾ ದೀಪದ ಸುತ್ತಲ ಪತಂಗದ ಹಾಗೆ ಪ್ರೀತಿ, ಪ್ರೇಮದ ತಪನೆಯಲ್ಲೆ ಯಾತನೆ ಪಡುವ ಗಂಡುಗಳ ದೌರ್ಬಲ್ಯಕ್ಕು ಕನ್ನಡಿ ಹಿಡಿಯುವ ಹವಣಿಕೆ. ಪರಸ್ಪರರ ಬೇಡಿಕೆಗಳ ಸಮಾಗಮ ಬಿಂದು ಸರಿ ಜತೆಗೂಡಿದರೆ ಅದ್ಭುತ ಪ್ರೇಮ ಕಾವ್ಯ; ಕಾಲೆಳೆದುಕೊಂಡು ಮೂಲೆ ಸೇರಿದರೆ ದುರಂತ ಕಾವ್ಯ. ಎರಡರ ನಡುವಿನ ಎಡವಟ್ಟಾದರೆ, ಪ್ರೀತಿ ಪ್ರೇಮದ ಸರಕನ್ನು ಬೆಳ್ಳಿ ಬಂಗಾರದ ಮೂಲಕ ವಿನಿಮಯ ಮಾಡಿಕೊಳ್ಳಬಹುದಾದ ‘ಹೊಂದಾಣಿಕೆಯ ಬಾಳು’ !

ಮತ್ತೊಂದು ಟೈಮ್ಪಾಸ್ ಕಚ’ಗುಳಿಗೆ’ – ಪದ ಲಾಸ್ಯ 🙂

01. ಪಾಪ…
__________________

ಪ್ರೇಮದೆ
ಮೇಲೆದ್ದರೆ ಜಾಣ
ಜಾರಿ ಬಿದ್ದರೆ ಕೋಣ
ಬಿದ್ದೂ ಮೇಲೇಳದಿದ್ದರೆ ?
(ಪಾಪ…)
ಅವಳ ಜತೆಗೇ
ಕಲ್ಯಾಣ!

02. ದುಬಾರಿ ಬೆಲೆ
______________

ಅವಳಪ್ಪುಗೆ
ಬಿಸಿ
ಚುಂಬನದ
ಬೆಲೆ
ಕೈಗೊಂದೊಂದೆ
ಬಂಗಾರದ
ಬಳೆ !

03. ತಮ್ಮಾ, ತುಸು ಎಚ್ಚರ!
____________________

ಕುಡಿನೋಟ
ಕಣ್ಮಿಂಚು
ಮುಗುಳ್ನಗೆ
ಸಿಹಿ ಮಾತಿನ ದರ,
ಬೆರಳುಗಳಿಗೆ
ಭಾರಿ
ಚಿನ್ನದ ಉಂಗುರ !

04. ಶ್ಯಾನೆ ಹೆಣ್ಣು
____________

ನಾ
ಪ್ರೀತಿಗೆ
ದಕ್ಕಬೇಕಿದ್ದರೆ
ಹುಡುಗ,
ತಂದು ಮಡುಗೊ
ಬೆಳ್ಳಿ ಬಂಗಾರದ ಕಡಗ !

05. ಉಳಿತಾಯ ಖಾತೆ
__________________

ಮಾತು ಬೆಳ್ಳಿ
ಮೌನ ಬಂಗಾರ
ಪಾಲಿಸಿದರೆ ಅಕ್ಷರಶಃ
ನಾವುಳಿಸಬಹುದು –
ಸಾವಿರಾರು
ಡಾಲರ !

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

2 thoughts on “00143. ಕಚ’ಗುಳಿಗೆ’ – 02”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s