00145. ಕಚ’ಗುಳಿಗೆ’ – 03

ಕಚ’ಗುಳಿಗೆ’-೦೩

ಗುಳಿಗೆಗಳ ಕಾಟ ಈ ಒತ್ತಡದ ಜೀವನದಲ್ಲಿ ಬೇಡದಿದ್ದರೂ ಬಿಡದಾ ಭೂತ. ಬಿಪಿಗೊ, ಥೈರಾಯಿಡ್ಡಿಗೊ, ಟೆಂಕ್ಷನ್ನಿಗೊ, ತಲೊನೋವಿಗೊ, ನೆಗಡಿಗೊ, ಜ್ವರಕ್ಕೊ – ಒಟ್ಟಾರೆ ಮಾತ್ರೆ ನುಂಗುತ್ತಲೆ ಇರಬೇಕು, ಕಾಸು ಕೊಟ್ಟು. ಕೆಲವನ್ನು ತಡೆಯಲಾಗದಿದ್ದರೂ ಸಹನೀಯವಾಗಿಸುವಂತೆ ಮಾಡುವ ಕಾಸಿಲ್ಲದ ಗುಳಿಗೆಗಳೆಂದರೆ ನಗೆಯ ಟಾನಿಕ್ ಮಾತ್ರ. ನಗೆ ಬಿರುಮಳೆಯಾದರೂ ಸರಿ, ಮುಗುಳ್ನಗೆಯಾದರೂ ಸರಿ, ತುಸು ಒತ್ತಡದಿಂದ ಬಿಡುಗಡೆ ಮಾಡಿ ಮುದಗೊಳಿಸುವುದು ಮಾತ್ರ ನಿಜ. ಕೆಲಸದ ಒತ್ತಡ, ಬಿಡುವಿಲ್ಲದ ಓಡಾಟ, ಚಿಂತೆ, ಚಿಂತನೆಗಳಿಗೆಲ್ಲ ಪ್ರಥಮ ಚಿಕಿತ್ಸೆಯೂ ನಗುವೆ; ಆನಂತರ ಮಿಕ್ಕಿದ್ದು.

ಬಿದ್ದು ಬಿದ್ದು ನಗಿಸಲಲ್ಲದಿದ್ದರೂ, ಬಿಕ್ಕಿಬಿಕ್ಕಿ ಅಳಿಸದ ಮೆಲು ಹಾಸ್ಯದ ತೆಳು ಹಾಳೆಯಾಗಿ ಕಚ’ಗುಳಿಗೆ’ಗೆ ಮತ್ತಷ್ಟು ಗುಳಿಗೆ ಸೇರಿಸುವ ಯತ್ನ ಈ ಕಂತಿನಲ್ಲಿ. ವಾರಾಂತ್ಯದ ನಿರಾಳತೆಯ ಜತೆ ಒಂದಷ್ಟು ಬಿಡಿ ನಗೆಯ ಕಿಡಿ ಸಿಡಿಸಲೆಂಬ ಆಶಯದೊಂದಿಗೆ ಈ ಕಚ’ಗುಳಿಗೆ’ – ೦೩ 🙂

೦೧. ಉರುಳು
______________

ದೇಗುಲದ ಸುತ್ತ ಜನ
ಹಾಕುತ್ತಾರೆ
ಒದ್ದೆಯಲೆ
‘ಉರುಳು’
ಮಾಡಿದ ಪಾಪಗಳು
ಆಗದಿರಲೆಂದು
ಕುತ್ತಿಗೆಗೆ
‘ಉರುಳು’ !

೦೨. ಪ್ಲೀಸ್ ಹೇಳ್ಬೇಡಿ!
________________

ಸಂಗಾತಿ
ಇನ್ನೊಬ್ಬಳಿರುವ
ಸಂಗತಿ,
ಸಂಗಾತಿಗೆ
ಗೊತ್ತಾಗಬಾರದ
ಸಂಗತಿ !

೦೩. ಸಂದಿಗ ್ದ
_________

ಹೆಂಡತಿ ತಮ್ಮ
‘ಸಾಲಾ’
ವಾಪಸ್ಸೆ ಕೊಡ
ಕೈಸಾಲ 😦

೦೪. ಅಳಿಯನ ಮಾತು
________________

ನಿಜಕೂ
ನೀವೆ
ನನ್ನ ಬಲ 🙂
ಹೀಗೆ ಸದಾ
ಕೊಡುತಿರಿ –
ಹಣಕಾಸಿನ
ಬೆಂಬಲ !!

೦೫. ಪ್ರಗತಿ
____________

ಈಗ
ದೊಡ್ಡ
ಸ್ಟೇಟಸ್ಸು
ಸಣ್ಣವರಿಗು..
– ಫೇಸು
ಬುಕ್ಕಿನ ಲಾಗು 🙂

೦೬. ವರದಾ
_____________

ಒಡೆದರೂ ದೇವರಿಗೆ
ನೂರೆಂಟು ಕಾಯಿ
ವರ ಕೊಡದೆ ನಗುವ –
ಇನ್ನು ಸ್ವಲ್ಪ ಕಾಯಿ !

೦೭. ಯಾವುದು ಕಷ್ಟ ?
_____________________

ಬಟ್ಟೆ
ಮಾಡಿದರೆ
ಸಾಲದು
ಮಡಿ,
ಒಣಗಿಸಲು
ಹತ್ತಬೇಕು
ನಾಕೆ ‘ಮಹಡಿ’!

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

2 thoughts on “00145. ಕಚ’ಗುಳಿಗೆ’ – 03”

 1. ನನಗನ್ನಿಸಿದ ಹಾಗೆ ಇವು ೩ ಬರೀ ಗುಳಿಗೆಗಳಲ್ಲ.ಇದರಲ್ಲಿ injection , syrup ಎಲ್ಲವು ಇದೆ. 🙂

  ಗಾತ್ರದಲ್ಲಿ ಮೊಟಕು
  ಮೆತ್ತನೆಯ ಕುಟುಕು
  ಹುಳಿ-ಸಿಹಿಯ ಗುಟುಕು
  ಹಾಗಿದೆ ಈ ಚುಟುಕು.

  Like

  1. ಧನ್ಯವಾದಗಳು ಭಾವನಾ, ಬರಿ ನಗುವಿನ ಸೈಡು ಎಫೆಕ್ಟ್ ಮಾತ್ರ ಇರುವ ಆಶಯದೊಂದಿಗೆ ಹುಟ್ಟಿದ ಚುಟುಕಗಳು. ಅದನ್ನು ನಿಮ್ಮ ಚುಟುಕದಲ್ಲಿ ಮೆಲುವಾಗಿ ಮೊಟಕಿ, ಕುಟುಕಿದ ಬಗೆ ಸೊಗಸಾಗಿದೆ!
   ಧನ್ಯವಾದಗಳೊಂದಿಗೆ
   ನಾಗೇಶ ಮೈಸೂರು

   Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s