00148. ಕಚ’ಗುಳಿಗೆ’ – ೦೪

00148. ಕಚ’ಗುಳಿಗೆ’ – ೦೪
ಈ ಬಾರಿಯ ಸಂಕ್ರಾಂತಿ ಒಂದು ರೀತಿ ಎರಡು ದಿನಗಳ ನಡುವೆ ಕಾಲಿಟ್ಟಂತಿದೆ. ಹೀಗಾಗಿ ಕೆಲವು ಕಡೆ ನಿನ್ನೆ ರಜೆಯಾದರೆ ಇನ್ನು ಕೆಲವೆಡೆ ಇಂದು. ನಮಗೇನು ರಜೆಯಿರದಿದ್ದರೂ ಪೊಂಗಲ್ ಆಚರಣೆಯ ಸಂಭ್ರಮ ನಿನ್ನೆಯೆಲ್ಲಾ ಗಲಗಲಿಸುತ್ತಿತ್ತು. ಏನಾದರಾಗಲಿ ಸಂಕ್ರಾಂತಿ ದಾಟಿ ಹೋಗುವ ಮೊದಲು ಇನ್ನೊಂದಷ್ಟು ಕಚಗುಳಿಗೆ ಸೇರಿಸೋಣವೆಂದು ಹೊಸೆದ ಅರ್ಜೆಂಟ್ ಎಳ್ಳು ಬೆಲ್ಲಗಳಿವು -ಒಂದೆರಡು ಮಾತ್ರ ನಿನ್ನೆ ಹೊಸೆದದ್ದು ಸೇರಿಕೊಂಡಿವೆ. ಹೊಸ ಗುಳಿಗೆಗಳು ಮಿಕ್ಕುಳಿದ ಸಂಕ್ರಾಂತಿಯ ನವಿರು ಕಚಗುಳಿ ಕೊಡಲೆಂದು ಆಶಿಸುತ್ತಾ, ಇಗೋ ಕಚ’ಗುಳಿಗೆ’ – ೦೪ 🙂

೦೧. ಬುದ್ದಿವಂತರು ಯಾರು?
________________

ನಮ್ಮ ಜನ
ಸೂಕ್ಷ್ಮ ಮತಿಗಳು
ಏನೆಲ್ಲಾ
ಕಂಡು ಹಿಡಿಯುತ್ತಾರೆ !
ಹೊರಗಿನ ಜನ
ತೀಕ್ಷ್ಣಮತಿಗಳು
ನಮ್ಮ ಜನರನ್ನೆ
ಕೊಂಡು ಕೊಳ್ಳುತ್ತಾರೆ !!

೦೨. ಯಾರ ‘ಪರ’ ?
_________________

ಅಮೇರಿಕ ಈಗ ಸ್ವಲ್ಪ
‘ಪರವಾಗಿಲ್ಲ’ ;
ಪೂರ್ತಿ ಪಾಕಿಸ್ತಾನದ
‘ಪರ’ವಾಗಿಲ್ಲ !

೦೩.ಕು’ತರ್ಕಾ
___________

ನಿಜವಾದ
ಪ್ರೀತಿಗದೇನಂತಾ
‘ತರ್ಕಾ’ ರೀ ?
ಕೇಳೊ ಮೊದಲೆ
ಸರಸರ
ಹೆಚ್ಚಿಕೊಟ್ಟರೆ
ಸಾಕು
‘ತರಕಾರಿ’ !

೦೪. ವ್ಯಂಗ್ಯ
__________

ಕಿವಿಯಾಗಿದ್ರೇನು
ಹಿತ್ತಾಳೆ
ಕಿವಿಯೋಲೆ ಮಾತ್ರ
ಬಂಗಾರದಲ್ಲೆ !

೦೫. ಹದ್ದು ಬಸ್ತು
____________

ಹೆಂಡತಿಯರು
ಗಂಡಂದಿರನ್ನು
‘ಬ್ಲಾಕ್ ಮೇಲಿಸೋ’
ರೀತಿ..
‘ನಿಮಗೆ
ನನ್ಮೇಲಿದ್ರೆ
ನಿಜವಾದ ಪ್ರೀತಿ…!’

೦೬. Double Chin!
_______________

ಚಿನ್ನು ಚಿನ್ನು ತಿನ್ನು
ಅನ್ನುತ್ತ
ಮುದ್ದು ಮಾಡುತ್ತಾಳೆ
ಮಗನನ್ನು ;
‘ಚಿನ್ನು ಡಬ್ಬಲ್ ಚಿನ್ನು’
ಅನ್ನುತ್ತ
ಚೆನ್ನಾಗೆ ತಿವಿಯುತ್ತಾಳೆ
ಅಪ್ಪನನ್ನು !!

೦೭. ತುಂಟಾಟ
___________

ಸದಾ
ಹಾಸಿದ್ದರೂ
‘ಹಾಸಿಗೆ’
ಹಗಲಲ್ಲಿ
ನಾ ‘ಸಿಗೆ’ !

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s