00149. ಸಂಕ್ರಾಂತಿಯ ಕಚ’ಗುಳಿಗೆ’

00149. ಸಂಕ್ರಾಂತಿಯ ಕಚ’ಗುಳಿಗೆ’

೦೧. ಹೋಲಿಕೆ
_________

ಅವಳ
ಕೆನ್ನೆಯ ಗುಳಿ
ಸಂಕ್ರಾಂತಿಗಿಟ್ಟ
ಕಚಗುಳಿ !

೦೨. ಶಾಪಿಂಗ್ ಪಟ್ಟಿ
______________

ಕಬ್ಬು ಎಳ್ಳು ಬೆಲ್ಲ
ಎಲ್ಲಾ ಸರಿ..
ನಡುವಲಿ
ಬಂತೇಕೆ
ಹಬ್ಬದ ಸ್ಯಾರಿ?

೦೩. ಸಂಕ್ರಾಂತಿ ‘ಗೊಳೋ’
________________

ಸಂಕ್ರಾಂತಿ
ಸೂರ್ಯಾ
ಸುತ್ತುವನು
ಉತ್ತರಾಯಣ ಗೋಳ ;
ಹರೆಯದ
ಹುಡುಗಿಯರಿಗೆ
ಸುತ್ತ ಸುತ್ತುವ
ಹುಡುಗರದೆ ‘ಗೋಳ’ ||

೦೪. ಸಂಶಯಾತ್ಮಾ…
_______________

ಎಳ್ಳಿನ
ಮೈ ಬಣ್ಣದ
ಚೆಲುವೆ
ತಿದ್ದಿ ತೀಡಿದ
ಅಪ್ಸರೆ ಮೊಗವೆ
ನೀನೆ
ಸಂಕ್ರಾಂತಿ ದೇವಿ
ಮೂರ್ತರೂಪ 🙂
“ಅದೆಲ್ಲಾ ಇರಲಿ ಬಿಡು
ಮೊದಲೀಗ ಹೇಳಿಬಿಡು
ನೀ ಹೋಲಿಸಿದ ಎಳ್ಳು
ಕಪ್ಪಾ, ಬಿಳುಪಾ?!”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s