00151. ಮನೆ ಮನೆ ಜಗಳ, ಗುಟ್ಟಾಗಿರದಲ್ಲ

00151. ಮನೆ ಮನೆ ಜಗಳ, ಗುಟ್ಟಾಗಿರದಲ್ಲ !

ಜಗಳವಿರದ ಮನೆ ಮನಗಳಾದರೂ ಯಾವುದಿದೆ? ಎಲ್ಲಾ ಒಂದಲ್ಲಾ ಒಂದು ಬಾರಿ ಸಿಟ್ಟಿನೆ ಕೈಗೆ ಬುದ್ಧಿ ಕೊಟ್ಟು ಅದರ ಅವಕೃಪೆಗೆ ಪಾತ್ರರಾದವರೆ. ಕಾರಣಗಳೇನೆ ಇದ್ದರೂ ಸಿಟ್ಟು ಬಂದಾಗ ಮಾತ್ರ ಅವರ ಮಾಮೂಲಿನ ವ್ಯಕ್ತಿತ್ವವೆ ಮರೆತುಹೋಗಿ ಒಳಗಿನ ಅವಿತಿದ್ದ ವ್ಯಕ್ತಿತ್ವದ ಅನಾವರಣವಾಗುವುದು, ಸಾಧಾರಣವಾಗಿ ಕಾಣುವ ಪ್ರಕ್ರಿಯೆ.

ಜಗಳ ಒಂದು ರೀತಿ ಸರ್ವ ವ್ಯಾಪಿ, ಸರ್ವಾಂತರ್ಯಾಮಿ ಎಂದೆ ಹೇಳಬಹುದು. ಕಾಲ ದೇಶಗಳ ಆಯಾಮಗಳೆಲ್ಲವನ್ನು ಮೀರಿದ ಈ ಕೇಡಿಗನನ್ನು ಬ್ರಹ್ಮದ ಅಸ್ತಿತ್ವಕ್ಜೆ ಧಾರಾಳವಾಗಿ ಹೋಲಿಸಬಹುದು – ಆಕಾರವಿರುವವನು – ಇಲ್ಲದವನು, ಕಾಣುವವನು – ಕಾಣದವನು, ಸ್ವಯಂಪ್ರಕಾಶನು…ಇತ್ಯಾದಿ ಬ್ರಹ್ಮ ಗುಣಗಳೆಲ್ಲವನ್ನು ಆರಾಮವಾಗಿ ಆರೋಪಿಸಿಬಿಡಬಹುದು ಜಗಳವೆಂಬ ಈ ಮಹನೀಯನಿಗೆ. ಅದೂ ಬರಿ ವ್ಯಕ್ತಿ ವ್ಯಕ್ತಿಗಳ ಜಗಳ ಮಾತ್ರವೆ ಆಗಬೇಕೆಂದೇನಿಲ್ಲ. ದೇಶಗಳ ಮಧ್ಯೆ, ರಾಜ್ಯಗಳ ನಡುವೆ, ಊರುಗಳ ಮಧ್ಯೆ – ಹೀಗೆ ಎಲ್ಲಿ ಬೇಕೆಂದರಲ್ಲಿ, ಯಾವಾಗ ಬೇಕೆಂದರಾವಾಗ ಪ್ರತ್ಯಕ್ಷವಾಗಿ ಕಾಡುವ ಅಪಾರ ಮಾಯ ಶಕ್ತಿಯ ಮಹನೀಯ. ಕಾರಣವಿರಲಿ, ಬಿಡಲಿ ಕೊನೆಗೆ ಪಿಳ್ಳೆ ನೆವ ಹುಡುಕಿಯಾದರೂ ಕಂಗೆಡಿಸುವ ಜೀಯ.

ಇನ್ನು ಮನೆಗಳಲ್ಲಿ ಜಗಳವಾಡಿಕೊಂಡೆ ಬೆಳೆಯುವ ಮಕ್ಕಳಿಗೆ ಯಾರೂ ಹೇಳಿಕೊಡದೆ ತಮಗೆ ತಾವೆ ಕಲಿಯುವ ಏಕೈಕ ವಿದ್ಯೆಯೆಂದರೆ ಜಗಳವೆ ಇರಬೇಕೆಂದು ಕಾಣುತ್ತದೆ. ಆಟವಾಡಲೊ, ಇಂತದ್ದೆ ಊಟದ ತಟ್ಟೆ ಬೆಕೆಂದೊ, ಆಟದಲ್ಲಿ ಮೋಸ ಮಾಡಿದ್ದಕ್ಕೊ – ಕೊನೆಗೆ ವಿನಾಕಾರಣ ಕೂಡ ಇದು ಸಂಭವಿಸಬಹುದು. ಇನ್ನು ಸೋದರ, ಸೋದರಿಯರ ಜತೆ, ಅಪ್ಪ, ಅಮ್ಮ, ಹತ್ತಿರದ ಬಂಧುಗಳ ಜತೆ ಯಾವುದಾದರೊಂದು ಕಾರಣಕ್ಕೆ ಮುನಿಸು, ಜಗಳಾಟ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವೆ ಸರಿ. ಆ ಹೊತ್ತಿನಲ್ಲಿ ಅವರ ಮನೆ ಕಾರ್ಯಕ್ಕೆ ಇವರು , ಇವರದ್ದಕ್ಕೆ ಅವರು ಬರುವಂತಿಲ್ಲ, ಹೋಗುವಂತಿಲ್ಲ. ಬೇರೆಯವರ ಮದುವೆಯಲ್ಲೊ ಮುಂಜಿಯಲ್ಲೊ ಕಂಡರೂ ಮುಖ ತಿರುಗಿಸಿ ನಡೆವ ಧುರ್ಯೋಧನ ಛಲ. ಅದೇ ರಾಜಿಯಾದಾಗ ಏನು ನಡೆಯದವರಂತೆ ಹೆಗಲ ಮೇಲೆ ಕೈಹಾಕಿ ನಡೆಯುವ ಅತಿಶಯದ ಕಾಲ!

ಇನ್ನು ಗಂಡ ಹೆಂಡಿರ ಜಗಳದ ವಿಷಯಕ್ಕೆ ಬಂದರಂತೂ ಮಾತಾಡುವಂತಿಲ್ಲ. ಇಬ್ಬರೂ ಪರಸ್ಪರ ಚೆನ್ನಾಗಿ ತಿಳಿದವರಾದ ಕಾರಣ, ಇಬ್ಬರು ಪರಸ್ಪರರ ಸೀಕ್ರೇಟ್ ಹಿಡಿದು ಚೆನ್ನಾಗಿ ದಬಾಯಿಸಿ ಜಾಡಿಸಬಹುದು ನೋಡಿ! ಅವರುಗಳು ಕಚ್ಚಾಡುವಾಗ ನೋಡಿಕೊಂಡು ಮಜಾ ಪಡೆಯುವ ಮಕ್ಕಳು , ಪ್ರಳಯ ಕಾಲದಲ್ಲಿ ಸಾಕ್ಷೀಭೂತಳಾಗಿ ವೀಕ್ಷಿಸುವ ಶಕ್ತಿಮಾತೆಯಷ್ಟೆ ನಿರ್ಲಿಪ್ತರೆನ್ನಲು ಅಡ್ಡಿಯಿಲ್ಲ. ಎಷ್ಟೋ ಸಾರಿ ಅವರೆ ಹುರಿದುಂಬಿಸಿ ಕಿಡಿ ಹಾರುವುದನ್ನು ನೋಡಿ ಆನಂದ ಪಡುವುದು ಉಂಟು. ಅಂತೆಯೆ ಎಷ್ಟೆ ಗುಟ್ಟಾಗಿ ಜಗಳ ಆಡಬೇಕೆಂದರು ಹೇಗೊ ಕಿಟಕಿ, ಗೋಡೆ ದಾಟಿ ವಠಾರಗಳ ಲೋಕಲ್ ಆಕಾಶವಾಣಿ ಹರಟೆ ವಾರ್ತೆಗಳಾಗಿ ಮಿಂಚಿನ ವೇಗದಲ್ಲಿ ಸಂಚರಿಸುವುದು ಸುಳ್ಳಲ್ಲ.

ಅಂತ ಮನೆ ಜಗಳದ ತುಣುಕನ್ನು ನೆನಪಿಸಲೊಂದು ಪುಟ್ಟ ಕವನ, ಈ ಕೆಳಗೆ 🙂

ಮನೆ ಮನೆ ಜಗಳ, ಗುಟ್ಟಾಗಿರದಲ್ಲ
_________________________

ಯಾರಪ್ಪನ ಮನೆ ಸೊತ್ತು
ಮನೆ ಮನೆ ಜಗಳ ?
ನಮ್ಮ ಮನೆಯಲೂ ಉಂಟು
ನಮಗೂ ಬಡಿದಾಡಿ ಗೊತ್ತುಂಟು ||

ಮೊದಲು ಹಾಕುವೆವು ಕಿಟಕಿ
ಜನರಾಡದಂತೆ ಕಟಕಿ
ದನಿ ಏರಿಸುವ ಮೊದಲೆ ಜತನ
ಬರೆವ ಮುನ್ನ ಮಹಾ ಭಾರತವನ್ನ ||

ತರ್ಕ ವಿತರ್ಕಗಳೆಲ್ಲ ಧ್ವಂಸ
ಹಂಸ ಕ್ಷೀರ ನೋಡುವ ವಂಶ
ಮಾತಲೆ ಜುಟ್ಟೆಳೆಯುತ ಪರಸ್ಪರ
ನಿಜಕೂ ದಿನ ಒಟ್ಟಾಗಿರುವುದು ಇವರಾ? ||

ಹುಡುಕಾಡಿದ ಚರಿತ್ರೆಯ ಆಳ
ವರ್ಷಾಂತರದೆಲ್ಲಾ ಭೂ’ಗೋಳ’
ಒಂದೊಂದಾಗಿ ಬಿಡಿಸುತ ಜಾತಕ
ಅವರ ಗುಟ್ಟಿವರಿಗೆ ಕರತಲಾಮಲಕ ||

ವಂಶಾವಳಿ ಸಂತತಿಗೆಲ್ಲ ಸಾಲುಸಾಲಲಿ
ಅವರಪ್ಪಾ ಅಮ್ಮ ಇಬ್ಬರ ಬಾಯಲಿ
ಅಕ್ಕ ತಂಗಿ ಅಣ್ಣ ತಮ್ಮ ಬಂಧು ಪ್ರೇಮ
ಮಾತೆ ಆಡಿಸದಿದ್ದರೂ ಉಕ್ಕುತ ನಿರ್ನಾಮ ||

ಸಾಕ್ಷೀಭೂತ ಮೂಕ ಪ್ರೇಕ್ಷಕ ಮಕ್ಕಳು
ಪಾಪ, ಯಾರ ಕಡೆ ವಾದಿಸಬೇಕೆಂದರಿಯರು
ಚಾಣಕ್ಷ್ಯ ಮೌನವ್ರತ ಹಿಡಿಯೆ ಕೆಲವರು
ಬೆಂಕಿಯಲಿ ಗಳ ಹಿರಿದು ಖುಷಿ ಪಡುವ ದೈತ್ಯರು ||

ಅಂತೂ ಮುಗಿಯದ ನಿರಂತರ ಅನಂತ
ಬೈಗುಳ ಬರಲಿ ಬಿಡಲಿ ಅಭಿನಯ ಚಿತ್ತ
ಕೊನೆಗೊಮ್ಮೆ ಮುಗಿಸಲೆ ಬೇಕಾದ ಅನಿವಾರ್ಯ
ಗಂಗಾ ಯಮುನೆ ಕಣ್ಣಲಿ, ಗೋಳಾಟದಲಿ ಭಾರ್ಯಾ ||

ವಿಚಿತ್ರವೆಂದರೆ ಸುದ್ದಿ ಗೋಡೆ ದಾಟೊ ಬುದ್ಧಿ
ಬೆಳಗಿಗು ಮೊದಲೆ ಊರೆಲ್ಲ ಹರಡಿದ ಲದ್ದಿ
ಯಾರನು ಬೈಯಲಿ ತೂತು ಗೋಡೆಯಲಿರುವಾಗ
ಕಾವಲಿ ತೂತಿನ ದೋಸೆ, ತೂತಿನ ಇಡ್ಲಿ ಆದಾಗ ||

————————————————————————————
ನಾಗೇಶ ಮೈಸೂರು, ಸಿಂಗಪುರ
————————————————————————————-

jagaLavirada mane managaLaadaruu yaavudide? ellaa oMdallaa oMdu baari siTTine kaige buddhi koTTu adara avakRpege paatraraadavare. kaaraNagaLEne iddaruu siTTu baMdaaga maatra avara maamuulina vyaktitvave maretuhOgi oLagina avitidda vyaktitvada anaavaraNavaaguvudu, saadhaaraNavaagi kaaNuva prakriye.

jagaLa oMdu riiti sarva vyaapi, sarvaaMtaryaami eMde hELabahudu. kaala dESagaLa aayaamagaLellavannu miirida ii kEDiganannu brahmada astitvakje dhaaraaLavaagi hOlisabahudu – aakaaraviruvavanu – illadavanu, kaaNuvavanu – kaaNadavanu, svayaMprakaaSanu…ityaadi brahma guNagaLellavannu aaraamavaagi aarOpisibiDabahudu jagaLaveMba ii mahaniiyanige. aduu bari vyakti vyaktigaLa jagaLa maatrave aagabEkeMdEnilla. dESagaLa madhye, raajyagaLa naDuve, uurugaLa madhye – hiige elli bEkeMdaralli, yaavaaga bEkeMdaraavaaga pratyakSHavaagi kaaDuva apaara maaya Saktiya mahaniiya. kaaraNavirali, biDali konege piLLe neva huDukiyaadaruu kaMgeDisuva jiiya.

innu manegaLalli jagaLavaaDikoMDe beLeyuva makkaLige yaaruu hELikoDade tamage taave kaliyuva Ekaika vidyeyeMdare jagaLave irabEkeMdu kaaNuttade. aaTavaaDalo, iMtadde uuTada taTTe bekeMdo, aaTadalli mOsa maaDiddakko – konege vinaakaaraNa kuuDa idu saMbhavisabahudu. innu sOdara, sOdariyara jate, appa, amma, hattirada baMdhugaLa jate yaavudaadaroMdu kaaraNakke munisu, jagaLaaTa namma saMskRtiya avibhaajya aMgave sari. aa hottinalli avara mane kaaryakke ivaru , ivaraddakke avaru baruvaMtilla, hOguvaMtilla. bEreyavara maduveyallo muMjiyallo kaMDaruu mukha tirugisi naDeva dhuryOdhana Cala. adE raajiyaadaaga Enu naDeyadavaraMte hegala mEle kaihaaki naDeyuva atiSayada kaala!

innu gaMDa heMDira jagaLada viSHayakke baMdaraMtuu maataaDuvaMtilla. ibbaruu paraspara cennaagi tiLidavaraada kaaraNa, ibbaru parasparara siikrET hiDidu cennaagi dabaayisi jaaDisabahudu nODi! avarugaLu kachchaaDuvaaga nODikoMDu majaa paDeyuva makkaLu , praLaya kaaladalli saakSHiibhuutaLaagi viikSHisuva SaktimaateyaSHTe nirliptarennalu aDDiyilla. eSHTO saari avare huriduMbisi kiDi haaruvudannu nODi aanaMda paDuvudu uMTu. aMteye eSHTe guTTaagi jagaLa aaDabEkeMdaru hEgo kiTaki, gODe daaTi vaThaaragaLa lOkal aakaaSavaaNi haraTe vaartegaLaagi miMcina vEgadalli saMcarisuvudu suLLalla.

aMta mane jagaLada tuNikanu nenapisaloMdu puTTa kavana, ii keLage 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s