00152. ಕಚ’ಗುಳಿಗೆ’ – ೦೫

00152. ಕಚ’ಗುಳಿಗೆ’ – ೦೫
_____________________

ಕಚಗುಳಿಗೆಗೆ ಕೆಲವು ಪುರುಷ ಛೇಡನೆಯ ಚುಟುಕಗಳನ್ನು ಸೇರಿಸಲೆಂದು ಯತ್ನಿಸಿದಾಗ ಹೊರಬಿದ್ದ ಪುಟಾಣಿಗಳಿವು. ಯಥಾ ರೀತಿ ದೃಷ್ಟಿಬೊಟ್ಟಿಗೆಂದು ಕೊನೆಯಲ್ಲಿ ಬೇರೆಯ ಚುಟುಕ ಸೇರಿದೆ. ಮೆಲುವಾಗಿ ಕಚಗುಳಿ ಇಡಬಹುದೆಂಬ ಆಶಯದಲ್ಲಿ ತಮ್ಮ ಮುಂದೆ ಮತ್ತೊಂದು ಪುಟ್ಟ ‘ಟೈಮ್ಪಾಸ್’ 🙂

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

೦೧. ಶರಣಾಗತಿ !
____________

ಹೆಂಡತಿ
ಮಾಡಿಡುತ್ತಿದ್ದರೆ
ರುಚಿಕಟ್ಟಾದ
ಅಡಿಗೆ,
ದುಸರಾ
ಮಾತಿಲ್ಲದೆ
ಪತಿರಾಯ
ಪಾದ’ದಡಿಗೆ’ !

೦೨. ಗಂಡೋದರ
__________

ನೋಡಿದರೆ
ಸಾಕು
ಗಂಡಸರ ಹೊಟ್ಟೆ,
ನೆನಪಾಗುವುದು
ಪರಲೋಕದ
ಹಾರುವ
ತಟ್ಟೆ !

೦೩. ಗಂಡು ‘ಭೂಗೋಳ’
_______________

ಗರ್ಭಿಣಿಯರ ಹೊಟ್ಟೆ –
ಪ್ರಸವ ನಂತರ
ಸಮತಟ್ಟ ;
ಗಂಡಸರ ಹೊಟ್ಟೆ
ಗರ್ಭ ಧರಿಸದೆಯೂ
ಕಿರು ಬೆಟ್ಟ ||

೦೪. ನೆನಪಿನ ಶಕ್ತಿ !
____________

ಕೇಳಿದ್ದು
ತಂದುಕೊಡುವ
ಗಂಡಸರಲ್ಲಿ
ಬಲು ಕಮ್ಮಿ;
ಬೇಕೆಂದು
ಲಿಸ್ಟು ಕೊಡುವ
ಹೆಂಗಸರಲಿ
ಜಾಸ್ತಿ ||

೦೫. ಕುತ್ತಿಗೆ ‘ಮಾಯ’
______________

ಬಿಡು ಪ್ರಿಯೆ
ನಿನಗೇಕೆ
ಕುತ್ತಿಗೆಗೆ ಸರ
ಈಗಲ್ಲುಳಿದಿರುವುದು
ಬರೀ
ಕತ್ತಿಲ್ಲದ ಶಿರ !

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s