00212. ಬರಹಗಾರನ ಬಡಾಯಿ

00212. ಬರಹಗಾರನ ಬಡಾಯಿ
______________________

ಸಣ್ಣ ಕಥೆ ಬರೆಯ ಹೊರಟು, ಎರಡು ಮೂರು ಕಂತಲ್ಲಿ ಮುಗಿಸೋಣವೆಂದು ನಿರ್ಧರಿಸಿ, ಕೊನೆಗೆ ನೀಳ್ಗತೆಯಾಗಿಸಾದರೂ ಮುಗಿಸೋಣವೆಂದು ನಿರ್ಧರಿಸಿ ಮುನ್ನುಗ್ಗಿದವನಿಗೆ ಅವೆಲ್ಲವನ್ನು ಅಣಕಿಸುವಂತೆ ಮಿನಿ ಕಾದಂಬರಿ, ಕಾದಂಬರಿಯಾಗಿ ಕೊನೆಗೆ ಸಹೃದಯೀ ಸಂಪದಿಗರೊಬ್ಬರು ಹೇಳಿದಂತೆ ಗ್ರಂಥ, ಮಹಾನ್ ಗ್ರಂಥವಾಗ ಹೊರಟ (ಗಾತ್ರದಲ್ಲಿ, ಗುಣಮಟ್ಟದಲ್ಲಲ್ಲ!) ಪರಿಭ್ರಮಣ ಸ್ಥಿತಿಯ ಕಥಾನಕದ ಕಥೆ ಇದು – ಕವಿತೆಯ ರೂಪದಲ್ಲಿ 🙂 ಪ್ಲಾನಿಂಗಿನ ನಿಖರತೆಗೆ ಇದು ಒಂದು ‘ಉತ್ತಮ’ ಉದಾಹರಣೆಯಾಗುವ ಎಲ್ಲಾ ಅರ್ಹತೆ ಹೊಂದಿದಂತೆ ಕಾಣುತ್ತದೆ ಮಾತ್ರವಲ್ಲ ಟೀವಿ ಧಾರವಾಹಿಗಳಲ್ಲಿ ಚಿಕ್ಕ ಕಥೆಗಳನ್ನು ದೊಡ್ಡ ಹಿಗ್ಗಿಸುವ ಕಲೆ ಹೇಗೆಂದು ಗೊತ್ತಿರದವರಿಗೆ ಅದನ್ನು ಹೇಗೆ ಮಾಡಬಹುದೆಂಬ ಉದಾಹರಣೆಯೂ ಆಗುತ್ತದೊ ಏನೊ? ಅದೇನೆ ಇರಲಿ ಆ ಕಥಾನಕದ ಸರಳ ಕವಿತೆಯನ್ನು ಇಲ್ಲಿ ಓದಿ ಆನಂದಿಸಿ 🙂

ಬರಹಗಾರನ ಬಡಾಯಿ , ಬರಹಗಾರ, ಬಡಾಯಿ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nagesha mysore, nageshamysore, nagesha

ಬರಹಗಾರನ ಬಡಾಯಿ
______________________

ಇಲ್ಲಾವನೊ ವಕ್ರದಂತ
ಅಂದುಕೊಂಡು ತಾನೆ ಸಂತ
ಕಥೆಯನೊಂದ ಬರೆಯ ಹೊರಟ
ಹುಡುಗಾಟ ತೆವಲು ಬರಿ ಒರಟೊರಟ ||

ಕೊಚ್ಚಿಕೊಂಡನಂತೆ ಸಣ್ಣಕಥೆ
ಮಿತಿ ಮೀರುತೆ ಬೆಳೆಯಿತಂತೆ
ಸಣ್ಣಕಥೆ ತಪ್ಪು, ಭಾಗವಾಗಿಸಿ ಒಪ್ಪು
ಕೈ ಮೀರಿದ ಹೊತ್ತು, ನೀಳ್ಗಥೆಯಾಗಿ ಬೆಪ್ಪು ||

ನೀಳವಾದರು ಕಥೆ ತೋಳು
ಮೆಚ್ಚುವರೆಂದು ಸಹೃದಯಿಗಳು
ಬೆಳೆಯಿತಂತೆ ನೋಡು, ಕಬಂಧ ಬಾಹು
ಮಿನಿ ಕಾದಂಬರಿಯಾಗಿಸಲಿದೆಯೆ ಹರಹು ||

ಮಿನಿ ಮಿಡಿ ಮಡಿ ಗಡಿದಾಟಿ
ಮ್ಯಾಕ್ಸಿಯಿಂದಾಚೆಗೆ ಲಂಗೋಟಿ
ಸಂತೈಸಿದರೆಲ್ಲ ಇದು ಕಾದಂಬರಿ
ಹೀಗೆ ನೀ ಬರಕೊಂಡು ಹೋದರೆ ಸರಿ ||

ಕಾದಂಬರಿಯಿಂದ ಗ್ರಂಥ
ಗ್ರಂಥವಾಗುತಿದೆಯಂತೆ ಬೃಹತ್ತ !
ಬರೆವವನಿಗಿಂದು ಒಂದೇ ಹೊಸ ಚಿಂತೆ
ಮಿಕ್ಕುಳಿದಿಹರೇನು ಇನ್ನು ಓದುವ ಜನತೆ? ||

———————————————-
ನಾಗೇಶ ಮೈಸೂರು
———————————————-

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s