00252. ವಿಶಿಷ್ಠ ಗಣಪ

00252. ವಿಶಿಷ್ಠ ಗಣಪ
_________________

ಗಣಪನ ಹಬ್ಬ ಹತ್ತಿರವಾಗುತ್ತಿರುವಂತೆ ಗಣಪನ ಮೂರ್ತಿಗಳು ಅಂಗಡಿಗಳಲೆಲ್ಲ ಕಾಣಿಸಿಕೊಳ್ಳತೊಡಗಿವೆ – ಸಿಂಗಪುರದ ಲಿಟಲ್ ಇಂಡಿಯದಲ್ಲೂ ಕೂಡ. ಗಣಪನ ವಿಶಿಷ್ಠತೆಯೆ ಅವನ ಹಲವಾರು ವಿಶೇಷ ಅಂಶಗಳನ್ನು ಒಂದುಗೂಡಿಸುವ ಅಪರೂಪದ ಸಂಗಮ ರೂಪವೆಂದರೆ ತಪ್ಪಾಗಲಾರದು. ಅವನ ಹುಟ್ಟೆ ವಿಶಿಷ್ಠವಾದದ್ದು – ತಾಯಿಯ ಮಾನಸಿಕ ಅಭಿಲಾಷೆಯನ್ನು ಮೂರ್ತರೂಪಾಗಿಸಿದ ಮೈಬೆವರಿನಿಂದುದ್ಭವಿಸಿದ ಪ್ರತಿಮೆಯಾದವನು. ಹಸುಗೂಸಾಗಿ, ಮಗುವಾಗಿ ಬೆಳೆದು ದೊಡ್ಡವನಾಗುವ ಬದಲು ಹುಟ್ಟುತಲೆ ಬೆಳೆದ ಬಾಲಕನಾದವನು, ಯಾವುದೆ ತರಬೇತಿಯ ಹಂಗಿಲ್ಲದೆ ಶೌರ್ಯ ಪ್ರದರ್ಶನಕ್ಕಿಳಿದು ತಂದೆಯನ್ನೆ ಎದುರಿಸಿದವನು, ಅವನಿಂದಲೆ ಸತ್ತು ಆನೆಯ ತಲೆಯೊಡನೆ ಮತ್ತೆ ಬದುಕಿದವನು – ಹೀಗೆ ಎಲ್ಲದರಲ್ಲು ಒಂದಲ್ಲ ಒಂದು ವಿಶಿಷ್ಠತೆಯನ್ನು ಕಾಣಬಹುದು ಗಣಪನಲ್ಲಿ – ಅವನ ಅಸಾಮಾನ್ಯ ರೂಪವು ಸೇರಿದಂತೆ. ಆ ವಿಶಿಷ್ಠತೆಯತ್ತ ಒಂದು ಇಣುಕು ನೋಟ ಈ ಕವನ, ಅವನ ಬರುವಿಕೆಯನ್ನು ಸ್ವಾಗತಿಸುತ್ತ – ನಾಗೇಶ ಮೈಸೂರು.

ವಿಶಿಷ್ಠ ಗಣಪ
_____________________

ಗಣೇಶನಿಗಾರೊ ತಾಯಿ ತಂದೆ
ಅವನಿಗವನೆ ಸಿದ್ದಿ ಬುದ್ದಿಯ ಖುದ್ದೆ
ಮೈ ಬೆವರಿನಂಟು ಕೊಳೆಯಾ ಅರಿಶಿನದೆ
ಗೊಂಬೆಯಾದವನಿಗೆ ಹುಟ್ಟು ತಾನೆ ಎಲ್ಲಿದೆ ? ||

ಬುರ ಬುರನೆಂದು ಬೆಳೆಯದ ಬಾಲ
ಹುಟ್ಟಲೆ ಆರೇಳೆಂಟು ವರ್ಷ ಆಗಿತ್ತಲ್ಲ!
ಬೀಜ ಮೊಳಕೆ ಸಸಿ ಗಿಡ ಒಂದೆ ಏಟಿನಲೆಲ್ಲ
ಮೂಡಿಬಂದ ಉದ್ಭವ ಮೂರ್ತಿ ಅಪರೂಪದ ಫಲ ||

ಮೊಟ್ಟಮೊದಲ ಭೇಟಿ ತಡೆದ ಈಶನ
ಜತೆ ಕದನಕಿಳಿದ ಹುಡುಗಾ ಸಾಮಾನ್ಯನ ?
ಕಲಿಕೆ ತರಬೇತಿಯಿರದೆ ಯುದ್ಧಕಲೆಯ ಸನ್ನದ್ಧನ
ಶಿವಗಣಗಳ ಧೂಳೀಪಟ ಓಡುವಂತೆ ಮಾಡಿದವನ ||

ಹುಟ್ಟಲೆ ಸಾವು ಕಂಡ ವಿಶಿಷ್ಠ
ಸತ್ತು ಮಲಗಿದ ಕಾಯವು ಶ್ರೇಷ್ಠ
ತರಿದರೇನಂತೆ ಮೇಣದ ತಲೆ ಬಿಡು
ಗಜಾಸುರನ ತಲೆಯ ಜೋಡಿಸಿ ನೋಡು ||

ಗಜಾನನ ಲಂಬೋದರ ಸುರದೇಹಿ
ಹೊಂದಿಕೊಳ್ಳದ್ದೆಲ್ಲವನು ಒಂದುಗೂಡಿಸಿ
ಸಂಯೋಜನೆಯಲು ಸಹಜತೆ ಗಣನಾಥ
ವಿನಾಯಕನಾಗಿ ವಿಘ್ನಗಳೆಲ್ಲವ ನಿವಾರಿಸುತ ||

————————————————————————————
ನಾಗೇಶ ಮೈಸೂರು, ಸಿಂಗಪುರ
————————————————————————————-

ವಿಶಿಷ್ಠ, ಗಣಪ, ವಿನಾಯಕ, ಗಣೇಶ, ನಾಗೇಶ, ಮೈಸೂರು, ನಾಗೇಶಮೈಸೂರು, ನಾಗೇಶ ಮೈಸೂರು, nagesha, mysore, nageshamysore, nagesha mysore

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s