00284. ಮಕ್ಕಳ ದಿನಾಚರಣೆ

00284. ಮಕ್ಕಳ ದಿನಾಚರಣೆ
____________________

ನಾಳಿನ ಮಕ್ಕಳ ದಿನಾಚರಣೆಯ ನೆನಪಿಗೆಂದು ಎರಡು ಮಕ್ಕಳ ಕುರಿತಾದ ಪದ್ಯಗಳು. ಮೊದಲನೆಯದು ‘ಜಗದೇಕ ವೀರ, ನಮ್ಮೀ ಕುಮಾರ’ ಎಲ್ಲಾ ಚಿಕ್ಕ ವಯಸಿನ ಮಕ್ಕಳ ಪ್ರತಾಪದ ಕ(ವಿ)ಥಾನಕವಾದರೆ, ಎರಡನೆಯ ‘ಟೀನೇಜಿನ ಮಗ’ ಹೆಸರೆ ಹೇಳುವಂತೆ ದೈಹಿಕವಾಗಿ ಟೀನೇಜಿನತ್ತ ನಡೆದಾಗಿನ ಜತೆಗಿನ ಮಾನಸಿಕ ಸ್ಥಿತಿಯ ತುಣುಕು.

ಎಲ್ಲ ಚಿಣ್ಣರಿಗೂ ಮಕ್ಕಳ ದಿನದ ಶುಭಾಶಯಗಳು !

01. ಜಗದೇಕ ವೀರ ನಮ್ಮೀ ಕುಮಾರಾ
_________________________

ಜಗದೇಕ ವೀರ ನಮ್ಮೀ ಕುಮಾರಾ
ಮುರಿದು ಒತ್ತಟ್ಟಿಡುವ ಅಸಹಾಯ ಶೂರ
ಸಿಕ್ಕಲೇನೇನೆಲ್ಲ ಯಾವುದೂ ಅಳವಲ್ಲ
ಮೂರೆ ಗಳಿಗೆಯಲೆಲ್ಲ ಮುರಿದ ಅಪಾರ ||

ಆಟಿಕೆಗಳೆಷ್ಟೊ ಅಗಣಿತ ಲೆಕ್ಕವೆಲ್ಲುಂಟು
ಚಿಕ್ಕ ದೊಡ್ಡ ಕಂಪನಿ ಲೆಕ್ಕಿಸದ ಎದೆಯುಂಟು
ಕೈಗೆ ಸಿಕ್ಕಾ ಮೇಲೆ ಮುಗಿದಂತೆ ವ್ಯಾಪಾರ
ಎಷ್ಟು ದಿನ ಬಾಳುವುದೊ? ಹೆತ್ತವರ ಲೆಕ್ಕಾಚಾರ ||

ಕೋಪದಲಿ ದೂರ್ವಾಸನಸಹನೆಯ ಮೂರ್ತಿ
ಇವನ ರಮಿಸಲು ಇಳೆಗೆ ಬರಬೇಕಲ್ಲ ತ್ರಿಮೂರ್ತಿ!
ಬಂದರೇನು ತರಲಾದೀತೆ ಮುರಿಯದ ವರ?
ಕೊಟ್ಟು ಹೋದವರ ಮಾನ ತೆಗೆದುಬಿಡುವ ಪ್ರವರ ||

ಪೋನಾಯ್ತು ಗೇಮಾಯ್ತು ಮರದಾಟಿಕೆ ಸೇರಿ
ಯಾವುದುಳಿದಿದೆ ಕಾಣೆ ಅವನೇರಬೇಕಿಹ ಸವಾರಿ
ಕೊಟ್ಟು ಕೊಟ್ಟು ಖಾಲಿ ಬೆತ್ತಲಾಗಿ ಬಯಲಲಿ
ತಲೆ ಕೆರೆದು ನಿಂತ ಜನ ಮುರಿಯದಿರುವುದಾದರು ಎಲ್ಲಿ? ||

ಅವನಾಟಿಕೆಯಿವನು ಪರಬ್ರಹ್ಮನ ಕುವರ ಬ್ರಹ್ಮ
ಲೌಕಿಕದ ಜೊಳ್ಳುಗಟ್ಟಿ ಪರೀಕ್ಷಿಸಲೆಂದೆ ಬಂದಿರುವವ
ಮುರಿದು ಸಹನೆಯ ಪರಿಯ ಕೆಣಕಿ ನೋಡುವವ
ಅದಕೆಂದೆ ಇರಬೇಕು ಮುರಿಯೆ ನಕ್ಕು ಜೋಡಿಸೊ ಭಾವ ||

————————————————————————————
ನಾಗೇಶ ಮೈಸೂರು, ಸಿಂಗಪುರ
————————————————————————————-

02. ಟೀನೇಜಿನ ಮಗ
___________________

ಟೀನೇಜಿನ ಮಗ
ಪ್ರಬುದ್ಧನಾಗಿದ್ದಾನೆ
ದೈಹಿಕವಾಗಿ.
ಚಿಗುರು ಮೀಸೆ ತುಣುಕು
ವಯಸಿನ ಕೂದಲು
ಸೀಳು ಹೊಡೆದ ದನಿ
ಸಿಟ್ಟು ಸೆಡವು ಅಸಹನೆ
ಗೊಂದಲ ಸಂಶಯ
ಕೆಟ್ಟ ಕುತೂಹಲ
ಎಲ್ಲ ಒಡೆದು ಕಾಣುತ್ತಿದೆ.

ಬಾಯ್ತೆರೆದುಕೊಂಡಿದೆ
ಅಷ್ಟು ದಿನವಿರದಿದ್ದ ಗುಟ್ಟು
ಹೇಳಬಹುದೊ ಬಾರದೊ ?
ಕೇಳುವುದೊ ಬಿಡುವುದೊ ?
ಸರಿಯೊ ತಪ್ಪೊ ?
ಏನೆಲ್ಲಾ ಚಿತ್ತದ ಗದ್ದಲ
ಮಾಗದ ಮೆದುಳಿನ ಫಲ
ಮಾಗುತ ಬರಿ ದೇಹ
ಉತ್ತು ಬಿತ್ತು ಬೆಳೆವ ಹೊಲ
ಹೊಂದಾಣಿಕೆ ಚಪಲ, ವಿಫಲ.

ಕೊಡದಿದ್ದರೆಂತು ಅವಕಾಶ
ಕೂಡೆ ಎರಡರ ಗಣಿತ
ಪಕ್ವತೆ ಮೈ ಮನ ಸಮೇತ
ಆಗುವತನಕ ಪೆಡಂಭೂತ
ಆದಮೇಲದೆ ಅವಧೂತ.
ಎಂದೆಲ್ಲ ಉಸುರಿ ಕಿವಿಗೆ
ಅಪ್ಪನದಲ್ಲ ಕೆಳೆಯ ಮಾತು
ಬಿತ್ತೇನು ಕಿವಿಗೆ ದನಿಯಾಗೊಳಗೆ?
ಹಿಚುಕಿ ಕಾಯಿ ಹಣ್ಣಾದೀತೆ ?
ಕಾಯುವ ಸಹನೆ ಹೆಣ್ಣಾದೀತೆ ?

ಅಂದೊಂದು ಮುಂಜಾನೆ
ಅವನೆ ತನ್ನಂತಾನೆ
ಎದ್ದ ಮುಂಜಾನೆ ಹೊದ್ದು
ಪಕ್ಕದಲಿ ಕೂತವ
ಭುಜಕೊರಗಿಸಿದ ತಲೆಯ
ಮತ್ತದೆ ನಿದ್ರೆಯ ಜಗಕೆ
ಎಬ್ಬಿಸಿದ್ದನೆ ಮರೆತ
ಮಂಪರಿನ ಗದ್ದೆಗೆ
ಕಾಯುತ್ತಿದ್ದೇನೆ ಎಚ್ಚರಕೆ
ಪ್ರಬುದ್ಧ ಪಕ್ವತೆಯ ಫಸಲಿಗೆ.

————————————————————————————
ನಾಗೇಶ ಮೈಸೂರು, ಸಿಂಗಪುರ
————————————————————————————-

ನಾಗೇಶ, ಮೈಸೂರು, ಮಕ್ಕಳ, ದಿನಾಚರಣೆ, ಮಕ್ಕಳ ದಿನ, nagesha, mysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s