00285. ಇದ್ದರು ಲಕ್ಷ, ಹೋದರು ಲಕ್ಷ, ಗೊತ್ತ ? (ಡಾ. ರಾಜ್)

00285. ಇದ್ದರು ಲಕ್ಷ, ಹೋದರು ಲಕ್ಷ, ಗೊತ್ತ ? (ಡಾ. ರಾಜ್)
________________________________________

ಈಚೆಗೆ ಬಣ್ಣದಲ್ಲಿ ಬಿಡುಗಡೆಯಾದ ಡಾ. ರಾಜ್ ಅಭಿನಯದ ‘ಕಸ್ತೂರಿ ನಿವಾಸ’ದ ಮರುಬಿಡುಗಡೆಯ ಕೆಲವು ದೃಶ್ಯಾವಳಿಗಳನ್ನು ನೋಡುತ್ತಿದ್ದಂತೆ ನೆನಪಾದದ್ದು ಈ ನಾಣ್ಣುಡಿ – ‘ಆನೆ ಇದ್ದರು ಲಕ್ಷ, ಹೋದರೂ ಲಕ್ಷ’. ಕೆಲವದರ ಮೌಲ್ಯ ಅದರ ಭೌತಿಕ ಅಸ್ತಿತ್ವವಿರಲಿ ಬಿಡಲಿ ಕುಗ್ಗುವುದೇ ಇಲ್ಲ – ನಿರಂತರವಾಗಿ ಹಿಗ್ಗುತಲೆ ಇರುವ ಅಭೌತಿಕ, ಅಲೌಕಿಕ ಸ್ವರೂಪದ್ದು. ಅಂತಹ ಅಪರೂಪದ ಕನ್ನಡದ ಶಾಶ್ವತ ಆಸ್ತಿ – ಡಾ. ರಾಜ್. ವಿಪರ್ಯಾಸವೆಂದರೆ ಒಂದು ನಟನಾಗಿ, ವ್ಯಕ್ತಿಯಾಗಿ ಮೇರು ಶಿಖರವನ್ನೆರಿದ, ಆಮರತ್ವವನ್ನು ಸಾಧಿಸಿದ ಡಾ. ರಾಜ್ ವ್ಯಕ್ತಿತ್ವವನ್ನೆ ಸರಿಗಟ್ಟುವ ಹುನ್ನಾರವೆಂಬಂತೆ, ಅವರ ಮೇಲಿನ ‘ಅಭಿಮಾನ’ವೂ ಅದೇ ನಿರಂತರತೆಯ, ಶಾಶ್ವತತೆಯ ಮೆಟ್ಟಿಲೇರಲು ತುಡಿಯುತ್ತ ಹವಣಿಸುತ್ತಿರುವುದು – ಅವರ ಮರಣದ ಇಷ್ಟು ದಿನಗಳ ನಂತರವು. ಅಂತಹ ಅಭಿಮಾನದ ಪ್ರಕಟ ಸ್ವರೂಪವನ್ನು ಈಗಿನ ಪೀಳಿಗೆಯಲ್ಲಿ ಕಾಣಲಾದರು ಎಲ್ಲಿ ಸಾಧ್ಯ ? ಆದರೆ ಒಂದು ಮಾತಂತು ಸತ್ಯ ; ನಿಜವಾದ ಮೌಲ್ಯವುಳ್ಳದ್ದರ ಬೆಲೆ ಕಾಲ ದೇಶಗಳ ಗಡಿ ಮೀರಿ, ಕಾಲಾತೀತವಾಗಿ ಉಳಿದುಹೋಗುತ್ತದೆ, ನಿರಂತರವಾಗಿ – ಕನ್ನಡಿಗರ ಮನದಲ್ಲಿರುವ ಡಾ. ರಾಜ್ ನೆನಪಿನ ಹಾಗೆ. ಆ ನೆನಪಿಗೊಂದು ಕವನದ ಕುಸುಮ ‘ಇದ್ದರು ಲಕ್ಷ, ಹೋದರು ಲಕ್ಷ !’

ಇದ್ದರು ಲಕ್ಷ, ಹೋದರು ಲಕ್ಷ !
_________________________

ಸತ್ತರು ಬಿಡದಲ್ಲ ಭೂತ
ಎಷ್ಟು ಅಭೂತಪೂರ್ವ ಗೊತ್ತಾ?
ಐರಾವತ ದೇವೇಂದ್ರನಾನೆ
ಇದ್ದರು ಲಕ್ಷ, ಹೋದರು ಲಕ್ಷ ||

ಯಾರು ಸತ್ತವರು ಜನ –
ಇದ್ದು ಸತ್ತಂತಿರುವ ನಾವೆ ?
ಸಾಯುವುದಿಲ್ಲ ಕೆಲವರು
ಪರಬ್ರಹ್ಮದಪರಾವತಾರ ತಾನೆ! ||

ಯಾರು ಅಳುವರು ಸಾವಿಗೆ
ಸತ್ತಿದ್ದರೆ ತಾನೆ ದುಃಖ ?
ಜನಮನದಡಿ ಕೂತ ಕನಸು
ಕಟ್ಟಿದ್ದು ನಟನೆಯ ತಪ ತಾನೆ? ||

ಕಟ್ಟಿದರು ನಕ್ಷತ್ರ ಬಳಗ
ಕುರುಹೆಂದರು ಅಭಿಮಾನಕೆ
ನಕ್ಷತ್ರವೆ ಆಗಿಹೋದರು ಬಿಡದೆ
ಕಟ್ಟುತಲೇ ಇಹ ವಿಸ್ಮಯಕೆ ||

ಮೂಕ ವಿಸ್ಮಿತ ಅಭಿಮಾನಕೆ
ಪಡೆದು ಬಂದಿರಬೇಕು ನಿಜ
ಬರಿ ವರನಟನಿಗೆ ಮಾತ್ರವೇನು?
ಪಡೆದು ಬಂದಿದ್ದು ನಾವೆಲ್ಲ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು, ಸಿಂಗಪುರ

ನಾಗೇಶ, ಮೈಸೂರು, ರಾಜ್, ಡಾ.ರಾಜ್, ಲಕ್ಷ, ಕಸ್ತೂರಿ, ನಿವಾಸ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s