00287. ಆಷಾಡದ ಮುಂಜಾವು..

00287. ಆಷಾಡದ ಮುಂಜಾವು..

ಓ ಮನಸೆ ಪಾಕ್ಷಿಕದ 103ನೆ ಸಂಚಿಕೆಯಲ್ಲಿ ಮುಂಜಾವು ಎನ್ನುವ ಹೆಸರಿನಲ್ಲಿ ಈ ಕೆಳಗಿನ ಕವಿತೆಯ ಪರಿಷ್ಕೃತ ಅವೃತ್ತಿ ಪ್ರಕಟವಾಗಿತ್ತು. ಆಷಾಢ ಮಾಸದಲ್ಲಿ ಪ್ರಕಟಿಸಲಾಗದ ಕಾರಣಕ್ಕೇನೊ, ಆ ಆಷಾಢದ ಪ್ರಸ್ತಾಪವಿದ್ದ ಸಾಲನ್ನು ತಿದ್ದಿ ಪ್ರಕಟಿಸಲಾಗಿತ್ತು. ಆ ಪದ್ಯದ ಮೂಲ ರೂಪ ಈ ಕೆಳಗಿದೆ ‘ಆಷಾಢದ ಮುಂಜಾವು’ ಎನ್ನುವ ತಲೆ ಬರಹದಡಿಯಲ್ಲಿ. (ಪ್ರಕಟಗೊಂಡ ಭಾಗದ ಚಿತ್ರವೂ ಜತೆಯಲ್ಲಿದೆ)

20150104-201851.jpg

ಆಷಾಡದ ಮುಂಜಾವು..
_________________________________

ಚುಮು ಚುಮು ಬೆಳಕ ಕಿವುಚಿ ಆಷಾಡದ ಕಾಳಿ
ಹಿಪ್ಪೆ ಹಿಂಡಿ ರಸ ತೆಗೆದ ಮಸುಕು ಮಸುಕ ಬೇಲಿ
ಹರಿದಂತೆ ಕನ್ನೆ ಮುಗ್ದತೆಯ ಆವರಣ ಕುಲುಕಿ
ಪಲುಕು ಪಲುಕಾಗರಳುತಿದೆ ಮನದ್ಯುತಿ ಕಲಕಿ ||

ಸಿಲುಕಿ ಹೋದ ಅರೆ ಮಬ್ಬಲಿ ಕಳುವಾದ ಹೊತ್ತು
ಬೆಳಕು ಹರಿವುದೊ ತೊರೆವುದೊ ಯಾರಿಗೆ ಗೊತ್ತು?
ಮುಸುಕಲಿ ಕವಿದ ಮೋಡ ಗಿಡ ಮರವೂ ನಿಗೂಢ
ಭೂತಾಕಾರದಿ ಹೊತ್ತ ಆಕಾರಗಳೆ ಭೀತಿಯ ಗಾಢ ||

ಅಲ್ಲೆಲ್ಲೊ ಮಾಮರ ಯಾತನೆ ಇಲ್ಲೆಲ್ಲೊ ಕಲರವ
ಗಿಡಗಂಟಿಗಳ ಬೆರೆಸಿ ನಿಸರ್ಗದ ಚಿತ್ತಾರ ನಿರ್ಭಾವ
ಹುಡುಕುತಲದರೊಳಗೇನನೊ ನಡೆದಿಹ ಅವನೊಬ್ಬ
ಕವಿಯೊ ಜ್ಞಾನಿ ವಿಜ್ಞಾನಿಯೊ ಕೊಲೆಗಡುಕಗು ಹಬ್ಬ ||

ಸವರಿ ತಂಗಾಳಿ ಚಲನೆ ಮುತ್ತಿಟ್ಟಂತೆ ಪ್ರಿಯ ಲಲನೆ
ಕಚಗುಳಿಯಿಟ್ಟಾಡಿಸುತ ಕುರುಳಿಗೆ ಸ್ವೇಚ್ಛಾ ಸಂಚಲನೆ
ಸುಯ್ದೆ ದಣಿದು ಬೇಸತ್ತು ಬೆವರಿ ಹನಿ ಪೋಣಿಸಿ ಇಬ್ಬನಿ
ಒಡಲ ನೋವೆಲ್ಲ ಧಾರೆ ಹುಲ್ಲುಲ್ಲು ಗರಿಕೆಯಲು ಕಂಬನಿ ||

ಭೀತಿ ನಿರ್ಭೀತಿ ಭಾವ ಕೊಳಚೆ, ಬೆಳಕಾಯ್ತು ಒಗೆಯಾಚೆ
ಅದುರಿಸುವ ಚಳಿಯ ಹೊದ್ದ ಸಖಿಗು ಬಿಡದೆ ಕಂಪಿಸುತೆ
ಮೆಲ್ಲಮೆಲ್ಲನೆ ಕಿರಣ ಅರಳರಳಿ, ಮಳ್ಳಿಯ ಮೈಗಾಭರಣ
ಸರಿದು ಹತ್ತಿರ ಅಪ್ಪುಗೆ, ಚುಂಬನದೆ ಕದಪಲಿ ತೋರಣ ||

——————————————————-
ನಾಗೇಶ ಮೈಸೂರು
——————————————————-

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s