00288. ವಿಕಲ ಚೇತನ ಸಕಲ..

00288. ವಿಕಲ ಚೇತನ ಸಕಲ..
________________________

‘ಪಂಜು’ ಆನ್ಲೈನ್ ವಾರಪತ್ರಿಕೆಯ ನೂರನೆ ಸಂಚಿಕೆಯನ್ನು ‘ವಿಕಲಾಂಗ ವಿಶೇಷ’ ಸಂಚಿಕೆಯಾಗಿ ಹೊರತರಲಾಗಿತ್ತು. ಆ ಸಂಚಿಕೆಯಲ್ಲಿ ಪ್ರಕಟವಾದ ವಿಕಲಾಂಗತೆಯ ಕುರಿತಾದ ನನ್ನ ಕವನವಿದು.

ವಿಕಲ ಚೇತನ ಸಕಲ..
____________________

ಯಾರು ವಿಕಲ ಚೇತನರು, ಸ್ವಾಮಿ ?
ಸಕಲವಿದ್ದೂ ಇಲ್ಲದ ನಾವೊ, ಅವರೊ?
ಯಾರ ತಪ್ಪೊ, ಪಾಪವೊ ಸುಂಕ
ಕಟ್ಟುತ ತೆರದಲೆ ಜೀವನ ಪೂರ
ಹೋರಾಟದ ಬದುಕಲಿ ಛಲ ಬಂಡವಾಳ…

ಆತ್ಮಾಭಿಮಾನ ಸ್ವಾಭಿಮಾನ ಹಂಬಲ
ಸಕಲಾಂಗರೆ ಕೈಬಿಟ್ಟಾ ಗಳಿಗೆ
ವೈಕಲ್ಯವೆ ದೂರಿ, ಕಾಡಿ ಸಂಬಳ ನೋವಲ್ಲೆ
ಕೀಳರಿಮೆ ಅನುಕಂಪದ ಎದೆಯಲೆ
ಬೀಜ ಬಿತ್ತು ಬೆಳೆದು – ಗೊಂಚಲೊ, ಕುರುಚಲೊ..!

ಊನವಿದ್ದರೇನು ದೈಹಿಕ, ಮಾನಸಿಕ ?
ವಿಕಲಾಂಗ ನೋಡುವ ದೃಷ್ಟಿ ಸಹಿತ
ಸಹಿ ಹಾಕಿಬಿಡುವ ಅಂಕಿತ ಮುದ್ರೆಯಡಿ
ಕಳಚಿಕೊಂಡಂತಲ್ಲವೆ ಹೊಣೆ?
ಲೊಚಗುಟ್ಟಿ ಬದಿ ಸರಿಸಿ ಕಾರ್ಯಬಾಹುಳ್ಯ ..

ಯಾರಿಲ್ಲವೀ ಜಗದಲಿ ಸರ್ವೋತ್ಕೃಷ್ಟಾ
ಒಂದಲ್ಲೊಂದು ಯಾತನೆ ತನುಮನಾಸ್ವಸ್ಥ
ಇಣುಕಿತೆಂದು ಇನಿತು ವಿಕಲ ಚೇತನವೇ?
ಕೆಣಕದಿರೆ ಜಗವ ಸಜ್ಜನಿಕೆ, ಚೇತೋಹಾರಿಯೆ ?
ಬಿಡು ಯಾರಿಲ್ಲ ವಿಕಲ-ಚೇತನ-ಸಕಲ ಸೃಷ್ಟಿಯಲಿ ..

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s