00292. ಚಂದಿರನೆಂಬ ಇಂದಿರ ಗೊತ್ತ? (ಮಕ್ಕಳ ಪದ್ಯ)

00292. ಚಂದಿರನೆಂಬ ಇಂದಿರ ಗೊತ್ತ? (ಮಕ್ಕಳ ಪದ್ಯ)
___________________________________

ಚಂದಿರನೆಂಬ ಇಂದಿರ ಗೊತ್ತ?
ನಿದಿರೆಯ ತುಂಬೊ ನಿಯ್ಯತ್ತಿನ ಗ್ರಾಸ್ತ
ಬೆಳ್ಳನೆ ಹಾಲಿನ ಬೆಳದಿಂಗಳ ಹುತ್ತ
ತಂಪೆರೆಯುತ ತೂಗುವ ಸವಲತ್ತ ! ||

ಬಾನಿನ ತುಂಬ ಬಣ್ಣದ ಗಿಲಕಿ
ಬೆಳ್ಳಂಬೆಳ್ಳಗೆ ತೆರೆದಿಟ್ಟ ಕಿಟಕಿ
ಕಟಕಿಯಾಡದೆ ಕಾರುತ ಸುಧೆಯ
ಸುರಿದಾಡಿ ಹೃದಯ ಚಂದ್ರೋದಯ ||

ಯಾರೊ ಬಿರಡೆಯ ತಿರುಗಿಸಿದವರು?
ನಿರಂತರ ಸುಖ ಹರಿದಂತೆ ಬೆವರು
ತೇಲಾಡಿದ ಸ್ವೇಚ್ಛೆ, ಸ್ವೈರ ವಿಹಾರ
ಕಂಡಲ್ಲೆ ಮನ ಕುಣಿದಾಡುವ ಕಾತರ ||

ದಿನದಿನವು ಬಹನು ಅವಸರವಿಲ್ಲ
ಕೃಶಕಾಯದಿಂದ ದೃಢಕಾಯ ಬಾಲ
ಹಿಗ್ಗುತ ಕುಗ್ಗುತ ನಿರಂತರ ಚಕ್ರ
ಕೃಷ್ಣಪಕ್ಷದಿಂ ಪೌರ್ಣಿಮೆಯ ಸೂತ್ರ ||

ವೃದ್ಧಿ ಕ್ಷಯಗಳಲಿ ಜೀವನ ಸೂತ್ರ
ಹುಟ್ಟು ಸಾವುಗಳ ನಿರಂತರ ಪಾತ್ರ
ನಿಯಮದ ಬದುಕಿಗೆ ಚಂದ್ರಮ ಸದಾ
ಹೆಗ್ಗುರುತಾಗಿಹನೆ ಆಗಸದ ಸಂಪದ ||

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

ಮಕ್ಕಳ ಪದ್ಯ, ಮಕ್ಕಳಪದ್ಯ, ಚಂದಿರ, ಇಂದಿರ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, nageshamysore, mysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s