00294. ಚಿಗುರ ತಹತಹ, ಗೊಂದಲ…

00294. ಚಿಗುರ ತಹತಹ, ಗೊಂದಲ…
_________________________

ಪಾಪದ ಹುಡುಗ ಹುಡುಗಿಯರ
ಬದುಕರಳುವ ಗೊಂದಲ
ಕಳಚುತ್ತೆಷ್ಟೊಂದು ಪದರ
ಹುಡುಕಬೇಕು ಅಂಗುಲ, ಚದರ ||

ಹೇಳಿಕೊಡುವರಿಲ್ಲವೆನ್ನುವಂತಿಲ್ಲ
ಮಸಲ ಸಂಗತಾಸಂಗತ ಪ್ರಶ್ನೆ
ಹಿತಾಹಿತ ಸಂಶಯವೆ ಸಲಹುತ್ತ
ಹುತ್ತಗಟ್ಟಿದ ಭೂತ ಅನುಮಾನ ||

ಕಲಿಕೆಯೇನೊ ಸಹಜ ನಿಜ
ಕಲಿಯಲುಂಟು ಸಾಗರದಪಾರ
ಖನಿಜ, ಲವಣ, ಜೀವಜಲ ರಾಶಿ
ಕೈಯಿಡಲೆಲ್ಲಿ ಮೊದಲು, ಕೊನೆ? ||

ಆರಂಭಿಸಲೆಂತು ಎಲ್ಲೊ, ಹೇಗೊ?
ಅನುಭವದ ಸುಡು ಬೆಂಕಿ ತಂಪು
ಹುಮ್ಮಸ್ಸು ಉತ್ಸಾಹಗಳ ಗಂಟು
ದಾಟಿಸೆ ಸಾಕೆ ದರ್ಶಿಸುತ ಮಾರ್ಗ ? ||

ಬೀಜ ಮೊಳೆತು ಸಸಿಯಾಗರಿತು
ಗಿಡ ಮರ ಹೆಮ್ಮರವಾಗುವ ಚಿತ್ತ
ಅನಾವರಣಕನುವಾಗೆ, ಹಳೆ ಬೇರು –
ಪೋಷಿಸೆ ಚಿಗುರ ನಿರುಮ್ಮಳ, ನಿರಾತಂಕ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ಚಿಗುರ, ತಹತಹ, ಗೊಂದಲ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s