00305. ಕಣ್ಮುಚ್ಚಿದ ಹೊತ್ತಲಿ

00305. ಕಣ್ಮುಚ್ಚಿದ ಹೊತ್ತಲಿ

ನಾಗೇಶ, ಮೈಸೂರು, ಕಣ್ಮುಚ್ಚಿದ, ಹೊತ್ತಲಿ, ಕಣ್ಮುಚ್ಚಿದ_ಹೊತ್ತಲಿ, nagesha, mysore, nageshamysore

ಕಣ್ಮುಚ್ಚಿದ ಹೊತ್ತಲಿ
___________________________

ಮನಃಪಟಲದವಳ
ತುಂಬಿಕೊಂಡೆ ಕಣ್ಮುಚ್ಚಿದೆ
ಅಲೆಅಲೆಯಾಗವಳ ಕಣ್ಣ ಹನಿ ಸ್ವಗತ..
ಹರಿಸಿದ್ದು ಕಾಂತಿಯೊ
ಕಂಬನಿಯ ಕುಯಿಲೊ ಕಾಣೆ
ಹತ್ತಿದೊಲೆಯಂತೆ ಭುಗಿಲವಳ ನಗೆ ಜಿಗಿತ ||

ಜಡಿಮಳೆಯಾದವಳಲ್ಲ ಮಾತಲಿ
ಹಿಡಿ ಮಲ್ಲಿಗೆಯ ಕಂಪಿನವಳು
ಮುಡಿಯಲಿ ಬಿಡಲಿ ಕಂಪಿನ ಸೊಗಡ ನೀರೆ..
ನೀರವ ಮೌನದ ಬಿಸಿಯುಸಿರು
ನಿಶ್ಯಬ್ದದೊಲುಮೆ ತರಂಗ ಶ್ರವಣಾತೀತ
ನಿಸರ್ಗ ಬಳಸಿತವಳ ಮೈಗುಡಿಸುತ ಸೀರೆ ..||

ಎತ್ತಲೊ ಬೀಸಿದ ಮಾರುತ
ನೇವರಿಸಿ ಕುರುಳ ತಂಪಾಗಿಸಿ ನೆತ್ತಿ
ನೆನಪಿಸಿತವಳ ಮುತ್ತ ತಂಪಿನ ಸ್ವಾತಿ ಹನಿ..
ಯಾಕಿಂದಿಷ್ಟೊಂದು ನೆನಪು ?
ಕಾಡುತಿದೆ ಕಡಲಲೆಯ ತೆರದಿ
ಮುಚ್ಚಿದ ಕಣ್ಣೊಳ ಬಿಂಬ ಬರಿಯವಳ ತಿದಿ .. ||

ಗುದ್ದಲಿಲ್ಲ ಮುಷ್ಟಿಯುದ್ದದಿ
ಒಳಗುದಿಯ ಬಿಚ್ಚಲೆಂತೊ ನವಿರು?
ಅವಳ ಜಾಡಿಗೆ ಸುರಿದ ಮಕಮಲ್ಲಿನ ಹಾಸು…
ನಡೆದಳಾರದೊ ಕೈ ಹಿಡಿದು ;
ಅಡಿಯಿಟ್ಟವಳ ಕಾಲಿಗೆ ಮುಳ್ಳು
ತೊಡರದಂತೆ ತಡೆದೆ, ರಥ ಸಾಗುವ ತನಕ.. ||

ಅಚ್ಚೊತ್ತಿ ಹಾಸಿನ ಮೇಲಿನ ಗಾಲಿ
ಉರುಳಿಹೋಗಿತ್ತು ಹಿಡಿದೆ ದಾರಿ
ನೆಟ್ಟ ನೋಟ ದಿಟ್ಟಿಸಿತ್ತೆ, ನಿರ್ಭಾವದ ನೋವಲಿ..
ಬಿಡಲಿಲ್ಲ ನೋಡು ಹಠವ
ಕಾದಲ್ಲೆ ನಿತ್ಯ ದಿಟ್ಟಿಸುವ ಚಟವ
ಋತುಗಳುರುಳಿದವದೆಷ್ಟೊ ಮುಚ್ಚಿದ ಕಣ್ಣಡಿಯೆ ||

————————————————
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s