00313. ಕಚ’ಗುಳಿಗೆ’ – 08

00313. ಕಚ’ಗುಳಿಗೆ’ – 08
____________________

ದಿನ ಕುಡಿದರು ಮತ್ತೆ ಮತ್ತೆ ಕುಡಿಯುವ ಕಾಫಿ ಚಹಗಳಂತೆ, ಅದೇ ಥೀಮುಗಳು ನೂರಾರು ಹನಿಗವನ ಚುಟುಕಗಳಲ್ಲಿ ಹರಿದಾಡಿದ್ದರು ಮತ್ತೆ ಓದಿದ ಹೊತ್ತಲ್ಲಿ ಒಂದು ಮುಗುಳ್ನಗೆ, ಕುತೂಹಲ, ತುಸು ಚಿಂತನೆ ಮೂಡಿಸುವ ಸಾಮರ್ಥ್ಯ ಹನಿಗವನಗಳದ್ದು. ಅಂತದ್ದೆ ಆಗಾಗ್ಗೆ ಸ್ಪುರಿಸಿದ ಹನ್ನೆರಡು ತುಣುಕುಗಳು ಇಲ್ಲಿವೆ – ವಾರದ ಕೊನೆಯನ್ನು ಜಾಡಿಸುವ ಗುಟುಕುಗಳ ರೂಪದಲ್ಲಿ.

ಹುಡುಗಾಟ
____________________

ಹುಡುಗರು ಮಾಡಿದರು
ಹುಡುಗಾಟ..
ಹುಡುಗಿಯರು ಮಾಡಿದರು
ಹುಡುಗಾಟ !
ಭಾರಿ ಮೋಸದ ತಾಣ
ನಮ್ಮ ಪದಗಳ ವ್ಯಾಕರಣ ||

ಯಶಸ್ಸಿನ ಗುಟ್ಟು
___________________

ತಪ್ಪು
ನಿನದಿದ್ದರು ಸರಿ
ಅವಳದಿದ್ದರು ಸರಿ
ಸಂಧಾನ’ಕೊಂದೆ’ ದಾರಿ –
ಕೊನೆಗವಳದೆ ಸರಿ ||

ಯಶಸ್ಸಿನ ಹಿಂದೆ
__________________

ಪ್ರತಿ
ಯಶಸ್ವಿ ಗಂಡಿನ ಹಿಂದೆ
ಒಂದು ಹೆಣ್ಣಿನ ಛಾಯೆ ಪ್ರಖರ ;
ಪ್ರತಿ
ಯಶಸ್ವಿ ಹೆಣ್ಣಿನ ಹಿಂದೆ
ಗಂಡಾಗಿ ನಿಂತಿದ್ದರೆ ಸಾಕು ಬಕರ ! ||

ಯಶದ ತರ
_________________

ಪ್ರತಿ ಗಂಡಿನ
ಯಶದ ಹಿಂದೆ
ಒಂದು ಹೆಣ್ಣಿರಲೆ ಬೇಕು;
ಒಂದೊ
ಪ್ರೇರಣೆಯಾಗಿ..
ಇಲ್ಲಾ
ಆರೋಪಣೆಯಾಗಿ ||

ಹಳ್ಳಿಯ ಬದುಕು
_________________

ಸರಕಾರಿ
ಖರ್ಚಲಿ ಸಂಡಾಸು
ಕಟ್ಟಿದರು ನಮ್ಮವರಿಗೆ –
ಕಾಲುವೆ ಬದಿಯೆ
ಸೊಗಸು ! ||

‘ಅರ್ಥ’
____________

ಸರಿಯಾಗಿ
‘ಅರ್ಥ’
ಮಾಡಿಕೊಂಡರೆ
ಸುಖ ದಾಂಪತ್ಯ :
ಅವನರ್ಥ
ಸಿರಿ ಸಂಪತ್ತು ಹಣ
ಅವಳರ್ಥ
ಬಯಸಿದ್ದೆಲ್ಲ ಪೂರ್ಣ ! ||

ಅಂತರಾತ್ಮ
________________

ಕಟಕಿಯಾಡುವಳು
ಕುಟುಕುವಳು
ಕೆಣಕುವಳು
ಕೊನೆಗು
ಗೆಲಿಸುವಳೊ?
ಸೋಲಿಸುವಳೊ?
ಬಿಟ್ಟಿದ್ದು ಹುಚ್ಚು ಮನಕೆ! ||

ವ್ಯತ್ಯಾಸ
_________________

ವಿಷಯವಿರದೆಯು
ಮಾತಾಟ
ಪ್ರೇಮಿಗಳಿಗಿಹ ಚಟ
ವಿಷಯವಿದ್ದು
ಮೌನದ ಹಠ
ವಿವಾಹೋತ್ತರ ಸಂಕಟ ||

ನೈಜ
___________________

ಕನ್ನಡ ಬರೆದಿದ್ದು ಸಾಕು
ಮಾಡಿಸಯ್ಯ ಬುಕ್ಕು…
ಕೇಳಿದೆ ‘ಏನಾಗಬೇಕು?’
ಪ್ರಿಂಟಿಗೆ ಕಾಂಚಾಣದ ಹೆಲ್ಪು
ಜೋಡಿಸೆ ಧೂಳ್ಹಿಡಿಸದ ಶೆಲ್ಪು! ||

ವಾಗ್ದಾನ
_________________

ನಲ್ಲೆ ನಿನಗಾಗಿ
ಕೇಳೆಷ್ಟಾದರು ಕೊಡುವೆ
‘ಬ್ಲಾಂಕು ಚೆಕ್ಕು’
ಬೌನ್ಸಾಗಬಾರದು
ಕಾನೂನಿನದೆ ಗೊಡವೆ
ಸಹಿ ನಿನದೆ ಹಾಕು! ||

ಕಾಲ ಧರ್ಮ
__________________

ಈಗಿನ ಮಕ್ಕಳು
ಎಲ್ಲದರಲ್ಲು
ಬಲು ಮುಂದು..
ಕೆಲವರಂತು
ಹುಟ್ಟುವುದೆ
ಮದುವೆಗು ಮುಂದು ! ||

ಗಂಟು-ನಂಟು
___________

ಇದ್ದರೆ ಗಂಟು
ಸುಲಭ ನಂಟು
ಮೂರು ಗಂಟು
ಬೀಳಲದೆ ಗುಟ್ಟು ||

http://sampada.net/%E0%B2%95%E0%B2%9A%E0%B2%97%E0%B3%81%E0%B2%B3%E0%B2%BF%E0%B2%97%E0%B3%86-08

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s