00314. ಲೆಕ್ಕ ಪರಿಶೋಧನೆ (ಆಡಿಟ್ಟು)

00314. ಲೆಕ್ಕ ಪರಿಶೋಧನೆ (ಆಡಿಟ್ಟು)
____________________________

ಯಾವುದೆ ಸಂಸ್ಥೆಯಾಗಲಿ, ಅದರಲ್ಲೂ ಜಾಗತಿಕ ಹಾಗೂ ದೊಡ್ಡ ಸಂಸ್ಥೆಯಾಗಿದ್ದರಂತೂ ‘ಆಡಿಟ್ಟು’ ಎಂಬ ಪದ ಕೇಳುತ್ತಿದ್ದಂತೆ ಒಂದು ರೀತಿಯ ಕಂಪನ, ತಳಮಳ, ಆತಂಕ, ಭೀತಿ ಕಾಣಿಸತೊಡಗುತ್ತದೆ. ಎಲ್ಲಿ ಯಾವುದು ದಾರಿ ತಪ್ಪಿದೆಯೊ, ಯಾವ್ಯಾವ ಹುಳುಕುಗಳೆಲ್ಲ ಹೊರಬೀಳಲಿದೆಯೊ, ಯಾರೇನನ್ನು ಹಿಡಿದು ಪಾಡು ಪಡಿಸುವರೊ ಎಂದೆಲ್ಲಾ ಪರಿಪರಿ ಕಾಡುವ ಸ್ಥಿತಿ ಇಲ್ಲಿ ಕೆಲಸ ಮಾಡುವವರೆಲ್ಲರಿಗೂ ಪರಿಚಿತ. ಆಡಿಟ್ಟಿನ ಮೂಲೋದ್ದೇಶ ಒಳ್ಳೆಯದಿದ್ದರೂ, ಹುಳುಕನ್ಹಿಡಿಯುವ ಹುಮ್ಮಸ್ಸಿನಲ್ಲಿ ಇಡಿ ಸಮೂಹವೆ ಸನ್ನಿ ಬಡೆದಂತೆ ತೊಳಲಾಡುವಾಗ – ಇಂಥಹ ಆಳ ಶೋಧನೆ ವರವೊ, ಶಾಪವೊ , ಇಂತಹ ಅಗತ್ಯ ನಿಜಕ್ಕೂ ಇದೆಯೆ ಎಂಬ ಅನುಮಾನವೂ ಬಾರದಿರದು. ಅಂತಹ ಅನಿಸಿಕೆಗಳ ಒಟ್ಟುಗೂಡಿಸಿದ ಸಂಕಲಿತ ಭಾವ ಈ ಕವನ. ತಪ್ಪು ಒಪ್ಪುಗಳೇನೆ ಇದ್ದರೂ ಇದು ಅನಿವಾರ್ಯ ಪೀಡೆಯೆ ಎಂಬ ಶಂಕೆಯೂ ಇಲ್ಲಿ ಅಂತರ್ಗತ.

ಲೆಕ್ಕ ಪರಿಶೋಧನೆ (ಆಡಿಟ್ಟು)
____________________________

ಈಗೆಲ್ಲ ಸಂಸ್ಥೆಗಳ ದಿನ ದಿನ ವೇದನೆ
ಬಂದ್ಹೋಗುವ ಪರಿ ಲೆಕ್ಕ ಪರಿಶೋಧನೆ |
ಬೇಡದ ಅತಿಥಿ ತರ ಬಂದಾ ನರಕಾಸುರ
ಬರುವನೆಂದಾ ತಡ ಎಲ್ಲಿಲ್ಲದ ಅವಸರ ||

ದುರ್ಬೀನು ಹಾಕುತ ಹುಡುಕೊ ಒಳಪದರ
ಆಳದಾಳಕೆ ದೃಷ್ಟಿಸಿ ಹಿಡಿಯಲೆ ತಕರಾರ |
ಹಿಂದೇ ವರ್ಷಕೊಮ್ಮೆ ಒಂದೇ ಸಲ ಕಾಡೆಮ್ಮೆ
ಈಗ ಬಾ ಹಲವೊಮ್ಮೆ ಕೈಲಿ ಹಿಡಿದೆ ದೊಣ್ಣೆ ||

ಒಳಗಿನ ಶೋಧನೆಗೆ ಕಾರ್ಯಸೂಚೀ ನೊಗ
ಅದಕೆಂದೇ ವಿಭಾಗಾ ಕಟ್ಟುವ ಹೊಸ ಭೋಗ |
ಥರ ಥರ ನಡುಕ ಸ್ವರ ಹೊರ ಆಡಿಟ್ಟಿನ ಜ್ವರ
ಬಂದು ಹೋಗೊ ಕಾಲ ಬೇರೆಲ್ಲಕು ಬರಗಾಲ ||

ಸೋಜಿಗ ಸಿದ್ದತೆ ತರ ಶೋಧನೆಗೆ ಸರ ಸರ
ತನ್ನಂತಾನೆ ಸರಿಯಿರೆ ಬೇಕೇಕೆ ಕಡೆ ಅವಸರ |
ಮೂಲ ಕಾರಣ ತತ್ವ ಕಾರ್ಯ ತಂತ್ರ ನಿತ್ಯ
ಇರಲಿ ಬಿಡಲಿ ಶೋಧ ಓಡಿ ಸ್ವಯಂಯೋಧ ||

ಒಮ್ಮೊಮೆ ಕಳವಳ ಸರಳಕು ತಳಮಳ ಬಗೆ
ಸರಿಯೊ ತಪ್ಪೋ ಶಂಕೆಗೆ ದಿನಗೆಲಸವು ಬೇಗೆ |
ಮೇಯೋ ಜನರುಂಟು ಮೇಯಿಸೆ ಒಳಗುಂಟು
ಆಡಿಟ್ಟು ಭಯದ ಗುಟ್ಟು, ಸರಿ ಮಾಡುವ ಒಗಟು ||

——————————————————————-
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

http://sampada.net/%E0%B2%B2%E0%B3%86%E0%B2%95%E0%B3%8D%E0%B2%95-%E0%B2%AA%E0%B2%B0%E0%B2%BF%E0%B2%B6%E0%B3%8B%E0%B2%A7%E0%B2%A8%E0%B3%86-%E0%B2%86%E0%B2%A1%E0%B2%BF%E0%B2%9F%E0%B3%8D%E0%B2%9F%E0%B3%81-0

=======================================================================
ವಾಸ್ತವ, ಕಾರ್ಖಾನೆ, ವಿಚಾರ, ಲೆಕ್ಕ ಪರಿಶೋಧನೆ, ಆಡಿಟ್ಟು, ಕಂಪನಿ, ಸಂಸ್ಥೆ, ನಾಗೇಶ, ಮೈಸೂರು, ನಾಗೇಶಮೈಸೂರು, nageshamysore, nagesha, mysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s