00318. ಮೀರಿದ್ದೇನು ?

00318. ಮೀರಿದ್ದೇನು ?
_____________________

ಸಂವಹನದ ಮಾಧ್ಯಮದ ನೂರೆಂಟು ತರದ ವೈವಿಧ್ಯಮಯ ಆಯ್ಕೆಗಳು ತುಂಬಿ ತುಳುಕುವ ತಾಂತ್ರಿಕ ಯುಗದಲ್ಲು ಜನ್ಮದತ್ತ ಸ್ವಾಭಾವಿಕ ಸಂವಹನ ಮಾಧ್ಯಮಗಳು ಪ್ರಸ್ತುತ. ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳದೆ ಹೊಸತರೊಡನೆ ಹೊಂದಿಕೊಳ್ಳುತ್ತ ತಮ್ಮ ಸಾಧ್ಯತೆಯನ್ನು ವಿಸ್ತರಿಸಿಕೊಳ್ಳುತ್ತ ನಡೆದಿವೆ ಈ ಪಂಚೇಂದ್ರಿಯಾದಿ ಪೋಷಿತ ಮಾರ್ಗಗಳು. ವಿಸ್ಮಯವೆಂದರೆ ಬಾಹ್ಯದಲ್ಲಿ ಎಷ್ಟೆ ಆಧುನಿಕ ಸಲಕರಣೆಗಳು ಕೈಗೂಡಿಸಿ ನಿಂತರು, ಅಂತರಂಗಿಕವಾಗಿ ಪ್ರೇರೇಪಣೆ ಯಾ ಪೋಷಣೆಯಿಲ್ಲದೆ ಅವುಗಳ ಸೂಕ್ತ ಬಳಕೆ, ಸದುಪಯೋಗವಾಗುವುದು ಅನುಮಾನ. ಆ ಒಳಗಿನ ಚಡಪಡಿಕೆ ಹೊರಗಿನ ಪ್ರತಿಕ್ರಿಯೆಯನ್ನು ನಿಭಾಯಿಸುವುದರಿಂದ ಏನೇ ಮಾಡಹೊರಟರು ಅವುಗಳ ಪ್ರಭಾವ ಒಂದಲ್ಲ ಒಂದು ರೀತಿ ಎದ್ದು ಕಾಣುತ್ತದೆ. ಓದಾಗಲಿ, ಬರಹವಾಗಲಿ, ಆಲಿಸುವಿಕೆಯಾಗಲಿ, ಮಾತಾಗಲಿ, ಮೌನವಾಗಲಿ, ದೈಹಿಕ ಸಂಜ್ಞೆಗಳಾಗಲಿ – ಎಲ್ಲವು ನಿಯಂತ್ರಿತ ಮತ್ತು ಅನಿಯಂತ್ರಿತ ಅನಿಸಿಕೆಗಳ ಸಮಷ್ಟಿ ಮೊತ್ತವಾಗಿ , ಪ್ರಕಟವಾದ ಹೊತ್ತಲ್ಲಿ ಸುತ್ತಲ ಪರಿಸರದ ಪರಿಸ್ಥಿತಿಯನುಸಾರ ತನ್ನದೆ ಆದ ರೂಪದಲ್ಲಿ ಅನಾವರಣಗೊಂಡುಬಿಡುತ್ತವೆ. ಹೀಗೆ ಪ್ರಕಟವಾಗಿದ್ದೆಲ್ಲವನ್ನು ಮೀರಿಸಿದ ಆ ಅಂತರಂಗಿಕ ಗದ್ದಲ, ಗೊಂದಲಗಳ ಚೇಷ್ಟೆಯ ಮೇಸ್ತ್ರಿ ಯಾವುದೆನ್ನುವ ಕುತೂಹಲದಲ್ಲಿ ಮೂಡಿದ ಕೆಲವು ಸಾಲುಗಳು ಈ ಕೆಳಗೆ…

ಮೀರಿದ್ದೇನು ?
______________________

ಬರಹವೆ ಸೋಮಾರಿ
ಮೂಡಿದ್ದೊಂದೆ ಗಳಿಗೆ
ತಾನಾಗದೆ ಬರವಣಿಗೆ ||

ಮಾತುಗಳೊ ಉದಾರಿ
ಮೂಡುವ ಮೊದಲೆ ಮೂರ್ತ
ಅನಾವರಣ ಚಡಪಡಿಸುತ್ತ ||

ಮೌನದ್ದೆ ಗದ್ದಲ ಗೊಂದಲ
ಆಡುತ್ತಲೆ ಅಗಣಿತ ಕೋಟಿ
ಆವರಣದಲವಿತೆ ಲೂಟಿ ||

ಸಂಜ್ಞೆ ಸನ್ನೆ ಸಂವಹನ
ಕಾನೂನು ನಿಯಮ ಬ್ರಹ್ಮ
ಅಸ್ಪಷ್ಟತೆ ಮರುಕಳಿಸಾಟ ||

ಓದಾಟವೇನೊ ಸೊಗಸು
ರಾಶಿ ಮರಳೊಂದೊಂದೆ ಕಣ
ಹೆಕ್ಕಬಿಡ ದೈನಂದಿನ ಗಾಣ ||

ಕೇಳಿದ್ದೇನೊ ಖಚಿತ
ಸಂಶಯ ಉಚಿತಾನುಚಿತ
ಕೇಳೊ ಸದ್ದುಗಳಲಡಗಿ ಧೂರ್ತ ||

ಮಾತು ಮೌನ ಓದು ಬರಹ
ಸಂಕೇತಕು ಮೀರಿದ ಸೂಕ್ತ
ಕಾಡೊ ಪರಿಯೆ ಚಂಚಲ ಚಿತ್ತ ? ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

(ಮೀರಿದ್ದೇನು, ಓದು, ಬರಹ, ಮಾತು, ಮೌನ, ಆಲಿಸು, ಸಂಜ್ಞೆ, ಸನ್ನೆ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s