00330. ಜ್ಞಾನ ಯಾನ, ಅನುಭವ ಘನ..!

00330. ಜ್ಞಾನ ಯಾನ, ಅನುಭವ ಘನ..!
_____________________________

ಪುಸ್ತಕ ಮಸ್ತಕಕೇರಿಸಿ
ಹೊತ್ತು ಮೆರೆಸಿದೆ ಸುತ್ತಿ
ಭಟ್ಟಿ ಇಳಿದೀತೆ ತಳಕೆ ?
ತಲೆಯೊಳಗಿನ ಬುಡಕೆ ||

ಸಾಲದೆಂದರು ಓದಿದೆ
ಬಿಡದೆ ಪುಟ ಪುಟವನ್ನು
ಉರು ಹೊಡೆದರು ಶುದ್ಧ
ಕಂಠಪಾಠ ಯಂತ್ರ ಸದ್ದ ||

ಅರೆದು ಕುಡಿದರೆ ಸಾಕೆ ?
ಅರಗಿಸಿಕೊಳ್ಳಬೇಕೆಲ್ಲಾ..
ಎಂದವರ ನಂಬಿ ಕೂತೆ
ಅಕ್ಷರಕ್ಷರಕು ತಿಣುಕಾಡುತೆ ||

ಮಸ್ತಿಷ್ಕದ ತೊಟ್ಟಿಗೆಲ್ಲ
ತುಂಬಿದ್ದೆ ಬಂತು ಕಸಕಡ್ಡಿ
ಕಸರತ್ತು ರಸ ತೆಗೆಯೆ
ಗೊಂದಲ ನೂರು ಬಗೆಯೆ ||

ಬದಿಗಿಟ್ಟ ಹೊತ್ತಂದೊಂದು
ಕಲಿಸಿತು ಜೀವನ ಪಾಠ
ಅನುಭವ ವೇದ್ಯ ಸುವೈದ್ಯ
ಜ್ಞಾನ ಮಾರ್ಗದರ್ಶಿ ಸಾನಿಧ್ಯ ||

– ಮೈನಂನಾಗೇಶ

(Published in Suragi : 22.07.2015)

ಜ್ಞಾನ, ಯಾನ, ಅನುಭವ, ಘನ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s