00331. ಕಲಾಂ ಎಂಬ ಅದ್ಭುತ..

00331. ಕಲಾಂ ಎಂಬ ಅದ್ಭುತ..
___________________________

  

ಇಂದು ಸಂಪದ ತೆರೆಯುತ್ತಿದ್ದಂತೆ ಅಬ್ದುಲ್ ಕಲಾಂ ದೈವಾಧೀನರಾದ ಸುದ್ದಿ ಕಣ್ಣಿಗೆ ಬಿದ್ದು ಮನಸಿಗೆ ಪಿಚ್ಚೆನಿಸಿತು. ಕೆಲವೆ ದಿನಗಳ ಹಿಂದೆಯಷ್ಟೆ ಯಾರೊ ಮಂತ್ರಿಯೊಬ್ಬರು ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ನಮಿಸಿದ್ದನ್ನು ಲೇವಡಿ ಮಾಡಿದ ಎನ್ ಡಿ ಟಿವಿ ಸುದ್ದಿಯನ್ನು ಓದಿದ್ದೆ. ಅದರ ಬೆನ್ನಲ್ಲೆ ಅದು ನಿಜವಾದ ಸುದ್ದಿಯಾಗಿ ಪರಿವರ್ತಿತವಾಗಿದ್ದು ಕಂಡು ಖೇದವೂ ಆಯ್ತು. ವಿಜ್ಞಾನಿಯಾಗಿ ಮಾತ್ರವಲ್ಲದೆ ನೆಚ್ಚಿನ ರಾಷ್ಟ್ರಪತಿಯಾಗಿ, ಪ್ರಭಾವಿ ಚಿಂತನಶೀಲ ಹಾಗು ಪ್ರಗತಿಪರ ಬರಹಗಾರರಾಗಿ, ಎಲ್ಲಕ್ಕು ಮೀರಿ ಭಾರತೀಯ ಯುವ ಜನಾಂಗದ ಆದರ್ಶ ಮಾದರಿಯಾಗಿ ಭೂಮಿಕೆ ನಿಭಾಯಿಸಿದ ಕಲಾಂರ ದೇಶ ಪರವಾದ ಕಾಳಜಿ, ಇಳಿ ವಯಸಿನಲ್ಲು ಕುಗ್ಗದ ಅದಮ್ಯ ಉತ್ಸಾಹ, ಏನಾದರೂ ಸರಿ ಸಾಧಿಸಬಲ್ಲೆನೆಂಬ ಆತ್ಮವಿಶ್ವಾಸ ಎಲ್ಲರಿಗು ಮಾರ್ಗದರ್ಶಿ. ಹಿಂದುಳಿದ ದೇಶವೆಂಬ ಹಣೆಪಟ್ಟಿಗೆ ಹಿಂಜರಿಯದೆ ಅದನ್ನು ಮುಂಚೂಣಿಯಲ್ಲಿರಿಸಲು ಬೇಕಾದ ನೈತಿಕ ಸ್ಥೈರ್ಯ, ಆತ್ಮ ಬಲವನ್ನು ತುಂಬಿದ ಮಹಾನ್ ಚೇತನ ಈ ಭಾರತ ರತ್ನ. ಅಂಥಾ ಅದ್ಭುತ ಕಲೆಗೊಂದು ಸಲಾಂ ‘ಕಲಾಂಗೆ ಸಲಾಂ’ – ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರುತ್ತ..

ಕಲಾಂಗೆ ಸಲಾಂ
__________________

ಅಬ್ದುಲ್ ಕಲಾಂ
ಅದ್ಭುತ ಕಲಾ
ಕಲಾಪ ಜನ ಪರ
ವಿಜ್ಞಾನಿ ಪ್ರಗತಿ ಪರ ||

ಕನಸಿನ ತರ
ಕಟ್ಟುತ ದುಸ್ತರ
ಸಾಗಿಸಿ ಗಗನಾಂತರ
ವ್ಯೋಮಕೀಗ ಸಹಚರ ||

ಕಟ್ಟಲೆ ಕರೆ
ಪುಸ್ತಕ ಮಸ್ತಕ ಬರೆ
ಬರೆದಿಟ್ಟ ಸರಕಿಗೆ ಬೆಲೆ
ಬರೆದದ್ದೆಲ್ಲ ನಿಜವಾಗಲೆ ||

ಬ್ರಹ್ಮಚರ್ಯವೆಲ್ಲಿ
ರಾಷ್ಟ್ರಪತಿ ಪಟ್ಟದಲ್ಲಿ
ನಾಡಾಗಿ ಸಂಸಾರ ಮನೆ
ಹತ್ತಿರ ಜನ ಸಾಮಾನ್ಯನೆ ||

ಎಲ್ಲಿ ಅವಸಾನ ?
ಪಂಚಭೂತದೆ ಲೀನ
ಸಾವಿನಲ್ಲು ಹರಿದು ಹಂಚಿ
ಮರಳಿಸುತೆಲ್ಲ ಋಣದ ಸಂಚಿ ||

ಚಿತ್ರ ಕೃಪೆ: ವಿಕಿಪೀಡಿಯ 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s