00340. ವರಮಹಾಲಕ್ಷ್ಮಿ ವ್ರತ..(2)

00341.ವರಮಹಾಲಕ್ಷ್ಮಿ ವ್ರತ..(2)
_______________________

ವರಮಹಾಲಕ್ಷ್ಮಿ ವ್ರತ
ಮಾಡುವ ಬಾ ನಮಿಸುತ
ಬೆಳ್ಳಿ ಬಂಗಾರದ ಗುಡಿ ಕಲಶವಿಟ್ಟು
ಕಾಸಿನಹಾರ ಧರಿಸಿ ಮಾವಿನೆಲೆ ತೊಟ್ಟು ||

ತೋರಿಬಿಡೆಲ್ಲಾ ಸಂಪದ
ಐಶ್ವರ್ಯಗಳೆಲ್ಲಾ ಸರಹದ್ದ
ಬೆಕ್ಕಸ ಬೆರಗಾಗುವಂತೆ ಅತಿಥಿ
ಬೆಚ್ಚಿ ಬೀಳಿಸುವಂತಿರಬೇಕೆಂತೆ ಪ್ರತೀತಿ ||

ಬರುವಳೇನು ಲಕುಮಿ ?
ಕಣ್ಕಾಣಿಸಿಕೊಳುವಳೆ ಮಾಮಿ ?
ಹೇರಲಿ ಬಿಡಲಿ ಜನ ಒಡವೆ ಗಿಡವೆ
ಸಿರಿವಂತೆಯವಳಿಗ್ಯಾವುದರದೆ ಗೊಡವೆ ? ||

ಹುಚ್ಚು ಜನರ ತತ್ವ
ಸಿರಿಯೆಂತಲ್ಲಿ ಮಹತ್ವ ?
ಕೊಟ್ಟವಳಿಗೆ ಕೊಟ್ಟು ಅಮಿಷ
ಹೆಚ್ಚೆಚ್ಚು ಬೇಡುವ ಖದೀಮ ನಶಾ ||

ನಿರಾಡಂಬರ ಪೂಜೆ
ಊದುಬತ್ತಿ ಕರ್ಪೂರ ಸಜ್ಜೆ
ಹೂವೆರಡೆಸಳು ಭಕ್ತಿ ನೊಸಲು
ಜತೆಗಿದ್ದರೆ ಸಾಕು ತಾಯಿ ಹರಸಲು ||

——————————————————————–
ನಾಗೇಶ ಮೈಸೂರು
——————————————————————–
ವರ, ಲಕ್ಷ್ಮಿ, ವರಲಕ್ಷ್ಮಿ, ವ್ರತ, ನಾಗೇಶ, ಮೈಸೂರು, ನಾಗೇಶಮೈಸೂರು,