00207. ಈ ಸಾರಿ, ಮೋದಿ ಸರಕಾರದ ಬಾರಿ ..

00207. ಈ ಸಾರಿ, ಮೋದಿ ಸರಕಾರದ ಬಾರಿ ..

ಕೊನೆಗೂ ಚುನಾವಣೆಯ ಫಲಿತಾಂಶ ಹೊರಬಿದ್ದು, ನಿಚ್ಛಳ ಬಹುಮತದೊಂದಿಗೆ ಮೋದಿ ಸರಕಾರ ಗದ್ದುಗೆಗೇರಲಿದೆ. ಈ ಬಾರಿಯ ಸಂತಸದ ಸುದ್ದಿಯೆಂದರೆ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತೆ ಸಿಕ್ಕಿರುವುದು. ಹೀಗಾಗಿ ಸಮಯಸಾಧಕ ರಾಜಕೀಯ ಗುಂಪುಗಳ ಕಾಟ, ಗೋಳಾಟ ಇರುವುದಿಲ್ಲ. ಸ್ಪೈಡರ್ ಮ್ಯಾನ್ ನಲ್ಲಿ ಹೇಳುವಂತೆ ‘ಹೆಚ್ಚಿನ ಸಾಮರ್ಥ್ಯವಿದ್ದಷ್ಟೂ ಹೊಣೆಗಾರಿಕೆಯ ಹೊರೆಯೂ ಹೆಚ್ಚಿರುತ್ತದೆ’ – ಎಂಬ ಮಾತನ್ನು ಮರೆಯದೆ ಆಡಳಿತ ನಡೆಸಿದರೆ ಸಾಕು, ದೇಶ ಪ್ರಗತಿಯತ್ತ ದಾಪುಗಾಲಿಕ್ಕುವುದರಲ್ಲಿ ಅನುಮಾನ ಇರುವುದಿಲ್ಲ .

ಚುನಾವಣೆಯ ಪ್ರಕ್ರಿಯೆ ದೂರದ ಸಿಂಗಪುರದಿಂದಲೆ ಗಮನಿಸುತ್ತ ನಡುವೆ ಒಂದೆರಡು ಕವನ ಬರೆದಿದ್ದೆ. ಆದರೆ ಚುನಾವಣಾ ಪ್ರಕ್ರಿಯೆಯ ನಡುವೆ ಹಾಕುವುದು ಉಚಿತವಲ್ಲವೆಂದು ಪ್ರಕಟಿಸಿರಲಿಲ್ಲ. ಈಗ ಫಲಿತಾಂಶವೂ ಹೊರ ಹೊಮ್ಮಿರುವುದರ ಕಾರಣ ಸಂಪದದಲ್ಲಿ ಹಾಕುತ್ತಿದ್ದೇನೆ – ಈ ಅದ್ಭುತ ವಿಜಯಕ್ಕೆ ಮೋದಿ ಮತ್ತು ಬೀಜೆಪಿಗೆ ಅಭಿನಂದಿಸುತ್ತ ಮತ್ತು ಮೌಲಿಕ ರಾಜ್ಯಭಾರದ ಆಶಯದೊಂದಿಗೆ 🙂

೦೧. ಗೆದ್ದ ಗಳಿಗೆ
____________________

ಕುಣಿದಾಡಿದ್ರಣ್ಣ ಎಗರಾಡಿದ್ರಣ್ಣ
ತಲೆಕೆಳಗಾಗಿ ನೇತಾಡಿದ್ರಣ್ಣ
ತುಂಬಾ ಶ್ಯಾಣೆ ಬಗ್ಗದ ಜಾಣ
ಕೈಲಿರದಿದ್ದರೂ ಸರಿ ರಾಮಬಾಣ ||

ಎಷ್ಟೊಂದುದ್ದದ ಚುನಾವಣೆ ಯಾನ
ಬೆವರಾಡಿ ಸುಸ್ತಾಗಿ ಮುಗಿದರೆ ಸಾಕಣ್ಣ
ಎಂದವರೆ ಎಲ್ಲ, ಪಕ್ಷಗಳು ಹೊರತಲ್ಲ
ನಿಟ್ಟುಸಿರು ಬಿಟ್ಟ ಜನ ‘ಸದ್ಯ ಮುಗೀತಲ್ಲ’ ||

ಕಿತ್ತಾಟ ಚೀರಾಟ ಬೈದಾಟ ಪ್ರತಾಪ
ಚಾರಿತ್ರ ವಧೆಯ ಜತೆ ಹಗರಣದ ಕೂಪ
ಕುರುಕ್ಷೇತ್ರದ ಸಮರ ನಡೆದಂತೆ ಪೂರ
ಮೀಡಿಯಾ ಜನ ಕೂಡ ಮಂಕಾದ ಸ್ವರ ||

ಮಾತಿನ ಮೋಡಿ ಮೋದಿಯ ಜಾಡಿ
ಚತುರ ಮಾತಲ್ಲೆ ಮುರಿದಂತೆ ಕಡ್ಡಿ
ಮುನಿಸೆ ಇಲ್ಲ ಸರಿ ತರ್ಕದ ಬಗಲ
ಅಂಕಿ ಅಂಶ ಪ್ರಗತಿ ಹೆಸರಲ್ಲೆ ಸಕಲ ||

ಬೈಯ್ದವರು ಮೋದಿ ಹೊಗಳಿದರೂ ಮೋದಿ
ನಾಮೋಚ್ಛಾರದಲಿ ಎತ್ತಿ ಹಿಡಿದಾ ಮಂದಿ
ಮಾತಾಡೆ ಕಷ್ಟ ಆಡದಿರಲು ಸಂಕಷ್ಟ
ಕುಡಿಯಲಾಗದ ಬಿಡದ ಬಿಸಿ ಚಹದ ಕಷ್ಟ ||

೦೨. ನಾಯಕತ್ವದ ಸತ್ವ
_________________________

ಮಗಳೆನ್ನದಿದ್ದರೂ ಮಗಳಾಗಿಸಿ ಸುದ್ದಿ
ಭೂ ಮಾರಾಟ ರಾದ್ದಾಂತವನು ಗುದ್ದಿ
ಕದ್ದಾಲಿಕೆ ಜಾಡಿಸಿ ಕಾಲೆಳೆದವರೆಲ್ಲಾ
ಭ್ರಷ್ಟಾಚಾರಕುತ್ತರ ಪ್ರಗತಿ ಮಾತೆ ಇಲ್ಲ! ||

ಆಡಿಕೊಳ್ಳುವ ಅವಸರದಲಿ ಗೋದ್ರಾ
ಭಾಷಣ ಮಾಡಲು ಬಿಡದಾ ಖದರ
ಸ್ಮೃತಿಯಿಂದ ದೂರ ‘ಯಾರಾಕೆ?’ ಎನ್ನುವರ
ಗೋಳಾಡಿಸಿದಷ್ಟು ಮೋದಿ ಕೀರ್ತಿ ಪ್ರಖರ ||

ಜೀವನ ಶೈಲಿ ಹಿಂದುತ್ವ, ಸಹಿಷ್ಣುತೆ ಬಲ
ಒಂದೇ ಭಾರತೀಯ ಪರಿಕಲ್ಪನೆ ಹೃದಯ
ಪ್ರಗತಿ ಮಂತ್ರ ದೇಶೋದ್ದಾರದ ಕನಸು
ಎದೆಗಾರಿಕೆಯುತ್ತರ ಭರವಸೆ ಹುಲುಸು ||

ನಾಯಕತ್ವದ ಅಪರೂಪದ ಮಾದರಿ
ತನ ರಾಜ್ಯದ ಯಶ ತಂಡಕೆ ಹಂಚಿದ ಪರಿ
‘ತಿನ್ನುವುದಿಲ್ಲ ತಿನ್ನಬಿಡುವುದಿಲ್ಲ’ ಸದ್ದು ಕೇಳಿಸಿತ ?
ಬಾಯ್ಮುಚ್ಚಿ ಕೂರೆ ಸರಿ ಪಕ್ಷದೊಳ ಧೂರ್ತ ||

ಕಂಡಿರಲಿಲ್ಲ ಇಂಥಹ ನಾಯಕತ್ವ ಸತ್ವ
ಮಲಿನವಾಗದೆ ದೇಶ ನಡೆಸಿದರೆ ತತ್ವ
ಬರೆಯಬಹುದು ಹೊಸ ಇತಿಹಾಸ
ಮರೆಸೆಲ್ಲ ತರದ ಕೀಳರಿಮೆ ಸಂಘರ್ಷ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ಈ ಸಾರಿ, ಮೋದಿ ಸರಕಾರದ ಬಾರಿ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ ಮೋದಿ, ಸರಕಾರ, ಬಾರಿ, nagesha, nageshamysore, Nagesha mysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s