00291. ಗಣರಾಜ್ಯದ ಈ ದಿನ..

00291. ಗಣರಾಜ್ಯದ ಈ ದಿನ..
_______________________

ಇತ್ತೀಚಿನ ದಿನಗಳಲಿ
ಎಂದಾದರು ನೆನಪಿದೆಯೆ?
ಗಣರಾಜ್ಯವ ಆಚರಿಸಿದ್ದು
ದಿನವೆಲ್ಲಾ ಸುದ್ದಿ ಸಂಭ್ರಮ ಸದ್ದು? ||

ಹಿಂದೆಂದಾದರು ನಡೆದಿತ್ತೆ?
ದಿನವೆಲ್ಲ ಆಚರಿಸಿದ ಹಬ್ಬ
ಟೀವಿ ಚಾನೆಲ್ಲು ಟ್ವಿಟ್ಟರು ಶೆಟ್ಟರು
ಫೇಸ್ಬುಕ್ಕು ಭಟ್ಟರು ಹಾಡಿ ಹೊಗಳಿದ್ದು ? ||

ಸಾರ್ವತ್ರಿಕ ಹಬ್ಬದ ರಜೆಗೆ
ಎಡತಾಕಿದ್ದು ಟಾಕೀಸು, ಅಲೆದಾಟ
ಟ್ರಿಪ್ಪು ಟೂರು ಎಂದೆಲ್ಲ ರಜೆ ಸುತ್ತು
ಕಳೆದಿದ್ದಷ್ಟೆ ನೆನಪು, ಹಬ್ಬವೆಲ್ಲಿತ್ತು ? ||

ಇಂದು ಗಾಂಧಿ ಬರಲು ಸ್ವಚ್ಚ
ಗಣರಾಜ್ಯಕೆ ಹಾಲಿವುಡ್ಡಿನ ಕಳೆ
ನಾಡ ಹಬ್ಬಗಳಿಗೆಲ್ಲಿಯದೀ ಕಸು ?
ತುಂಬಿತೆಲ್ಲಿಂದ ಇದ್ದಕ್ಕಿದ್ದಂತೆ ಉತ್ಸಾಹ! ||

ಇನ್ನೆಲ್ಲ ಬರಿಯ ರಜೆಯಾಗದು
ಆಚರಣೆ ಸರ್ಕಾರಿ ಸರಕಾಗದು
ಚೈತನ್ಯವಾವುದೊ ತುಂಬಿ ಪಸರಿಸೆ
ಗಲ್ಲಿ ಬೀದಿ ಮನೆ ಮನಗಳಲಿ ಮತ್ತೆ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ಗಣರಾಜ್ಯ, ಗಣರಾಜ್ಯೋತ್ಸವ, ಈದಿನ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s