00052. ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ)

ಸೃಷ್ಟಿ ರಹಸ್ಯ..! ಅಂಡ ಪಿಂಡ ಬ್ರಹ್ಮಾಂಡದ ವ್ಯಾಪ್ತಿಯಿಂದ ಕೊರೆದಿಟ್ಟ ಬೀಜಾಕ್ಷರ ಸಂಕೇತ ಬೀಜಾಂಡ ಮಿಳಿತವಾಗಿ ದೇಹದೊಳಹೊಕ್ಕು ಗರ್ಭಾಧಿಕಾರ ಪಡೆದ ಗಳಿಗೆಯ ಹಾಗೂ ನಂತರದ ನವಮಾಸದ ಭೌತಿಕ ಚಟುವಟಿಕೆಗಳತಿಶಯದ ಅಂತರಾಳ ಬಿಚ್ಚಿಡುವ ಯತ್ನ ‘ಸೃಷ್ಟಿಯ ರಹಸ್ಯ’ ಕಾವ್ಯದ ಆಶಯ. ಹಾಗೆಯೆ ಜನ್ಮ ತಳೆದ ನವಜಾತ ಶಿಶು ಜೀವನ ಚಕ್ರ ಪರಿಕ್ರಮಣದ ಗಾಲಿ ಹೊತ್ತು ಎಲ್ಲರಂತೆ ಬಾಲ್ಯ, ಯೌವ್ವನ, ಪ್ರಾಯ, ವೃದ್ದಾಪ್ಯಗಳನ್ನು ಅಪ್ಪುತ್ತ ಆ ಚಕ್ರ ನಿರಂತರವಾಗಿರುವಂತೆ ನೋಡಿಕೊಳ್ಳುವ ಕರ್ಮಬಂಧವೂ ಇಲ್ಲಿ ಅಂತರ್ಗತ. ಅ ಪುನಾರವರ್ತನೆಯ ಚಕ್ರದಲ್ಲಿಯೆ ಬ್ರಹ್ಮ್ಮಂಡದ ಸೃಷ್ಟಿ ರಹಸ್ಯದ ಕೀಲಿ ಕೈ ಅಡಗಿರಬಹುದೆಂಬ ಕುತೂಹಲ / ಪ್ರಶ್ನೆಯಲ್ಲಿ, ಈ ನೈಸರ್ಗಿಕ ಪ್ರಕ್ರಿಯೆಯನ್ನು ಭೌತಿಕ ನೆಲೆಯಿಂದ ತಾತ್ವಿಕ ನೆಲೆಗಟ್ಟಿಗೊಯ್ದು ನಿಲ್ಲಿಸುವ ಹವಣಿಕೆ. ಆ ದೃಷ್ಟಿ ಕೋನದಿಂದ, ಒಂದು ವಿಧದಲ್ಲಿ ಈ ಕವನ ‘ಅಂಡ ಪಿಂಡ ಬ್ರಹ್ಮಾಂಡ’ಕ್ಕೆ ಪೂರಕವಾಗಿಯು ಅಥವ ವಿವರ ವಿಷದಿಕರಣದ ಅಂಗವಾಗಿಯು ನೋಡಬಹುದು.

ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ – ನಾಗೇಶ ಮೈಸೂರು )
_____________________

ಆದರೂ ಅಗೋಚರ ಈ ದೇಹ
ಜೀವಗಳ ಕೊಡು ಕೊಳ್ಳು ವ್ಯಾಪಾರ
ಕೋಟ್ಯಾಂತರ ಬೀಜಗಳ ನಡುವೆ
ಒಂದಕಷ್ಟೇ ಕೀಲಿಯ ಅಧಿಕಾರ
ಜಯಿಸಿ ಅಂಡಂತರ ಕದನ ಈಜಿ
ಒಳಗೆ ಅಂಡಾಶಯದಂತರಂಗ
ಹೊಕ್ಕರೆ ಮಧುರ ಮಿಲನ
ಪಿಂಡಾಂಕುರ ಜೀವ ಸಂಚಲನ ಪ್ರಸಂಗ ||

ಅಲ್ಲಿಂದ ಆರಂಭ ಸೃಷ್ಟಿಯ ಪಯಣ
ನವ ಮಾಸದ ದಿವ್ಯಗಾನ
ಹಂತ ಹಂತದಲಿ ಸಂಕೇತಾಕ್ಷರ
ಅನಾವರಣ, ಜೀವಕಣ ಮನನ
ಬಲಿತಂತೆ ಬಯಕೆ ಬಲಿತರೆ
ಭ್ರೂಣಹತ್ಯ ಕಾರ್ಯಕಾರಣ ಗೌಣ
ವಿಸ್ಮಯ ವಿಸ್ಮಯದೋಳ್ವಿಸ್ಮಯ
ನವ ಜೀವನ ಜನನ ಆಕ್ರಂದನ ||

ನವಜೀವನ ಚೇತನ ಪುನರಾರಂಭ
ಪರಿಭ್ರಮಣ ಸೃಷ್ಟಿ ಆವರ್ತನ
ಶೈಶವಾಸ್ತೆ,ಬಾಲ್ಯ,ಯೌವನ
ಪ್ರಾಯ,ವೃದ್ದಾಪ್ಯ ಸಹಿ ಅನುವರ್ತನ
ಲೌಕಿಕ, ಐಹಿಕ, ಪ್ರಾಪಂಚಿಕ
ಸುಖದುಃಖಗಳ ಸುತ್ತಿಟ್ಟ ಬುದ್ಧಿ ನಮನ
ಜೀವ ಸಮಷ್ಟಿಗರಿಯದಂತೆ ಮಾಡಿರುವ
ಜೀವ ಜಾಲ ಸಮತೋಲನ ||

ಜೀವ ಸೃಷ್ಟಿಯೊಳಗಡಗಿದೆಯೇ
ಬ್ರಹ್ಮಾಂಡಸೃಷ್ಟಿ ರಹಸ್ಯ ಬೀಜ
ಒಡೆದಾದರೆ ಜೀವ ರಹಸ್ಯ
ದೊರೆವುದೇ ಕೀಲಿ ವಿಶ್ವ ನಿಜ ಖನಿಜ
ಮನುಕುಲ ತಾನಾಗೆ ಬ್ರಹ್ಮ
ಸರಿ ನಡೆವುದೇ ಸೃಷ್ಟಿ, ಸ್ಥಿತಿ, ಲಯ
ಕರಗತ ಸೂತ್ರ ಕಣ್ಗಾವಲಲಿಡೆ
ದೈವತ್ವಕೇರ್ವುದೇ ತಪ್ಪಿ ಪ್ರಳಯ ||

– ನಾಗೇಶ ಮೈಸೂರು, ಸಿಂಗಾಪುರದಿಂದ
(ಸಂಪದದಲ್ಲಿ ಪ್ರಕಟಿಸಿದ ಬರಹ)
May 1, 2013 – 6:51pm

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s