00054. ಈ ಅಮ್ಮಗಳು

ನಾಳೆಯ (12.May.2013) ಅಮ್ಮಂದಿರ ದಿನಾಚರಣೆಯ ಕುರಿತು ನಾನು ಬರೆದ ಒಂದು ಕವನ “ಈ ಅಮ್ಮಗಳು” – ‘ಕನ್ನಡ – ಒನ್ ಇಂಡಿಯ’ ಆನ್ಲೈನ್ ಪತ್ರಿಕೆಯ ಎನ್ ಆರ ಐ ವಿಭಾಗದಲ್ಲಿ ಪ್ರಕಟಿತವಾಗಿದೆ. ದಯವಿಟ್ಟು ಕೆಳಗಿನ ಲಿಂಕಿನಲ್ಲಿ ಓದಿ..

ಈ ಅಮ್ಮಗಳು
———————

ತನ್ನ ತಪ್ಪಿಗೆ ತನ್ನನೆ ಬೈದಾಡುತೊಂದೇ ಸಮನೆ
ಹಾಳು ಮರೆವಿಗೆ ಶಾಪ ಧಮಕಿ ಹಾಕಿ ಸುಮ್ಮನೆ
ದೇವಕೋಟಿ ರಾಕ್ಷಸ ವಾಚಾಮಗೋಚರ ದಮನೆ
ಬೇರಿನ್ನಾರಿಗೆ ಸಾಧ್ಯ ಈ ಧೈರ್ಯಕೆ ನಮ್ಮಮ್ಮನೆ!

ಮುಲಾಜಿಲ್ಲದೆ ಮುಖದ ಮೇಲ್ಹೊಡೆದಂತೆ ಮಾತೆ
ಎದ್ದು ಬಂದಂತೆ ನೇರ ರಾಮಾಯಣದಿಂದ ಸೀತೆ
ಹಗಲಿರುಳು ಕಟ್ಟಿ ನೊಗ ಮೂಗೆತ್ತಿನ ಹಾಗೆ ಜಗ
ಗಂಡ ಮನೆ ಮಕ್ಕಳ ಸುತ್ತೆ ಬುಗುರಿಯಾಡಿ ಜಾಗ!

ಕತ್ತಲಡುಗೆ ಮನೆಯ ಮಂಕು ದೀಪವೆ ಅರಮನೆ
ಹಚ್ಚಿದೊಲೆ ಬೆಂಕಿ ಬೆಳಕಲ್ಲೆ ಜಗಮಗಿಸಿತೆ ಕರುಣೆ
ದಿನರಾತ್ರಿ ಹಗಲಿರುಳು ಸುಟ್ಟು ಬೇಯಿಸುತದನೆ
ಮಾಡಿದ್ದೆ ಮಾಡಿ ಬೇಸರವಿರದೆ ರುಚಿಯಾಗಮನೆ!

ಸುತ್ತಾಡಿದ ಪ್ರಪಂಚ ನೆರೆಹೊರೆಯಲಾಡಿ ಉವಾಚ
ವಠಾರ ಬೀದಿ ಹೆಂಗಳೆಯರಾ ಒಡನಾಟವೆ ಕವಚ
ಅಗ್ರಹಾರದಾ ಸುತ್ತೆ ಮಿಕ್ಕರೆ ದೇವಸ್ಥಾನಕೆ ಹೊತ್ತೆ
ಸ್ನಾನ ಪೂಜೆ ಪುನಸ್ಕಾರ ತುಳಸಿ ಕಟ್ಟೆಗಳೆ ಸಂಪತ್ತೆ!

ಮದುವೆ ಮುಂಜಿ ನಾಮಕರಣ ರೇಷ್ಮೆ ಚಿನ್ನಾಭರಣ
ಕಾಲಾಯಾಪನೆಗಷ್ಟೂ ಅವರಿವರಾ ರಾಮಾಯಣ
ಕೆಂಚಿ ಸಿದ್ದಿ ಕರಿಯಮ್ಮನ ಹರಟೇ ಲೋಕಾಭಿರಾಮ
ನೀರಿಟ್ಟೊಲೆ ಮರೆಸಿಬಿಟ್ಟ ನೆನಪ ಬೈದೊಡುವಳಮ್ಮ!

– ನಾಗೇಶ ಮೈಸೂರು

Published in:
. http://kannada.oneindia.in/nri/poem/2013/my-beloved-mother-poem-by-nagesh-mysore-073930.html

+ (ಸಂಪದದಲ್ಲಿ ಬರಹ)

4 thoughts on “00054. ಈ ಅಮ್ಮಗಳು”

ನಿಮ್ಮ ಟಿಪ್ಪಣಿ ಬರೆಯಿರಿ