00055. ಏಕಾಂತದ ಏಕಾಂತ…!

ಏಕಾಂತದ ಏಕಾಂತ…!

(ಬಿಜಿನೆಸ್ಸು ಟ್ರಿಪ್ಪಿನಲ್ಲಿ ಹೊರದೇಶವೊಂದರ ಹೋಟೆಲಿನಲ್ಲಿ ಬೆಳಕಿನ್ನೂ ಹರಿಯದ ಬೆಳಗಿನ ಜಾವದಲಿ ತಟಕ್ಕನೆ ಎಚ್ಚರವಾದಾಗ ಕಾಡಿದ ಭಾವಕ್ಕೆ ಪದ – ಪ್ರಾಸ ಜೋಡಿಸಿ ಪೋಣಿಸಿ ಹೊಸೆದ ಆಲಾಪನೆ – ಈ ಏಕಾಂತದ ಏಕಾಂತ )

ಒಬ್ಬಂಟಿಯಾಗಿ ಕೂತ ಏಕಾಂತ
ಒಳಗೆ ಕುಳಿತವನಾವನೊ ಸಂತ
ಪ್ರಾಂಜಲ ಮನಸೇ ಅನಂತ
ಗೊಂದಲ ಗೂಡೊಳಗಿತ್ತ ಹೊರಗಿತ್ತ?
ಬಿಟ್ಟರು ಬಿಡದೆ ಕಾಡಿ ಏಕಾಂತ…

ಹೊರಗೆಷ್ಟು ಪ್ರಶಾಂತ…
ಒಳಗೆಷ್ಟು ಕೊತಕೊತ?
ಏನೆಲ್ಲಾ ಹೂತ, ಹೊಸಕಿತ್ತ
ಮುಚ್ಚಿಡಲೇನೆಲ್ಲ ಒಳ ಊತ
ಉಬ್ಬಿದ ನರನಾಡಿಗೂ ಆಪ್ತ

ಶಮನವಾಗದುದ್ವೇಗ ಸುಷುಪ್ತ
ಮೌನವನಪ್ಪಲು ಮನ ಮುಕ್ತ..
ಹಾರಾಡಿದರೂ ಬಿಡದ ಭರತ
ಬೇಕಾಲೋಚನೆಗೆ ಏಕಾಂತ
ಏಕಾಂತಕೂ ಬಿಡದಲ್ಲ ಏಕಾಂತ!

ಸತತ ಏನೆಲ್ಲ ಅನುರಣಿತ
ನೂರೆಂಟು ಲೆಕ್ಕಾಚಾರ ಗುಣಿತ
ಬೇಕು ಬೇಡದ್ದೆಲ್ಲ ಗುನುಗುನಿತ
ಕಂಡು ಕೇಳಿದ್ದೆಲ್ಲಾ ಅನುಮಾನಿತ
ಒಂದರೆಕ್ಷಣವೂ ನಿಲ್ಲದ ಸತತ

ವರ್ಷಾಂತರಗಳ ಸನ್ನಿಹಿತ
ಆ ಋಷಿ ತಪಗಳ್ಹೇಗೆ ಸಾಗಿತ್ತ?
ಸ್ನೇಹಿತನಲ್ಲದಾ ಏಕಾಂತ
ಸಂಯಮ ಕಡಿವಾಣ ಉಚಿತ
ಮನಸ್ಹೇಗೆ ಗೆದ್ದರೊ ಖಚಿತ?

ಜಾತಕಪಕ್ಷಿಯ ಮನೋಗತ
ಕೂತಿದ್ದರೂ ಬರದಲ್ಲ ಏಕಾಂತ
ಬಿಡದಲ್ಲ ಥೈ ತಕ ಕುಣಿತ
ಎಂದಾಗುವುದು ಭುವಂಗತ
ಏಕಾಂತದ ಏಕಾಂತ?

– ನಾಗೇಶ ಮೈಸೂರು
(ಸಂಪದದಲ್ಲಿ ಪ್ರಕಟಿಸಿದ ಬರಹ)
May 15, 2013 – 7:51am

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s