00059. ನಿರಂತರ ಕುಣಿತ!

ನಿರಂತರ ಕುಣಿತ!
______________

ಬದುಕೆಂಬ ಸಂತೆ
ಉಟ್ಟುಡಲು ಚಿಂತೆ
ಮರೆಸಲು ಬೇಕಂತೆ
ಕಟ್ಟೇನೇನೆಲ್ಲ ಕಂತೆ!

ದೊಂಬರಾಟ ಡೋಲೆ
ನಿತ್ಯ ಜೀವನದ ಶೂಲೆ
ಕೋಲ ತೂಗಿದವರೆಷ್ಟೊ
ಕಾಲ್ಜಾರಿ ಸಾಗಿದವರೆಷ್ಟೊ!

ಇಡಿ ಜಗನ್ನಾಟಕ ರಂಗ
ನೋಡೆಷ್ಟೊಂದು ಪ್ರಸಂಗ
ಜಡಿಮಳೆಗು ಕುಸಿವ ಜಗ
ನೆಲೆ ಕಾಣುವುದ್ಯಾವಾಗ!

ಹರಕೆ ಆಲದಮ್ಮಾ ಮಾರಿ
ಭಯಕೆ ಕೈ ಕತ್ತೆಲ್ಲ ಪರಾರಿ
ಒಪ್ಪತ್ತಿದ್ದೂ ಕಟ್ಟಿರೆ ಮುಡಿಪು
ಹೊಟ್ಟೆಗಿಂತ ಹೊರಗುಡುಪು!

ಯಾರ ಹೆದರಿಕೆಗೊ ಕಾಣೆ
ಬದುಕೆ ಅವರಿವರ ಹೊಣೆ
ಅನುಭವಿಸಿದರೂ ಬವಣೆ
ಸರಿತಪ್ಪು ಅವನದೆ ತಾನೆ!

ನಮ್ಮ ನಮ್ಮಯಾ ಬದುಕು
ಬದುಕಲೂ ಎಷ್ಟಿವೆ ನೂಕು
ಬದುಕಬಿಡಬಾರದೆ ಬಾಳು
ಕಾಡುವಬುದ್ಧಿ ಮನೆಹಾಳು!

ಸಾಗಿದೆ ನಿರಂತರ ಕುಣಿತ
ಅವರಿವರೆಲ್ಲರ ಓಲೈಸುತ
ಅವ ಬರೆದಿಟ್ಟವನೆಲ್ಲ ಗಣಿತ
ನೋಡೆ ತುಟಿಯಂಚೆ ನಗುತ!

– ನಾಗೇಶ ಮೈಸೂರು

ಸರಣಿ: ನಿರಂತರ ಕುಣಿತ, Nagesha mysore,Singapore,Kannada Poems
ಲೇಖನ ವರ್ಗ (Category): ಕಾವ್ಯ ಮತ್ತು ಕವನ
(ಸಂಪದದಲ್ಲಿ ಪ್ರಕಟಿಸಿದ ಬರಹ)
June 10, 2013 – 10:52pm

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s