00061. ಈ ಅಪ್ಪಗಳು

ಈ ಜೂನ್ ಹದಿನಾರು ಅಪ್ಪಂದಿರ ದಿನಾಚರಣೆ. ಹೆಚ್ಚು ಬಾರಿ ನೇಪಥ್ಯದಲ್ಲೆ ಅಡಗಿರುವ, ಅಮ್ಮಂದಿರ ವೈಭವಿಕರಣದ ಹಿಂದೆ ಮಸುಕಾಗಿಬಿಡುವ ಪಾತ್ರವೆ ಹೆಚ್ಚು ಈ ಅಪ್ಪಂದಿರದು. ಇಲ್ಲವೆ ದರ್ಪ, ದೌಲತ್ತುಗಳ ಸೆರಗಡಿಯಲ್ಲಿ ಮರೆಯಾಗಿಬಿಡುವ ಚಿತ್ರಣಗಳಿಗೇನೂ ಕಡಿಮೆಯಿಲ್ಲ. ಇದೆಲ್ಲಕ್ಕು ಮೀರಿ, ಸಾಮಾನ್ಯ ಅಪ್ಪನೊಬ್ಬನ ತುಡಿತ, ಹಂಬಲ, ಒದ್ದಾಟ, ಹೋರಾಟದತ್ತ ನೋಡುವ ಹಂಬಲ ಈ ಪುಟ್ಟ ಕವನದ್ದು – ಸಾಧಾರಣ ಕಾಣುವ ಎಲ್ಲಾ ಅಪ್ಪಗಳ ಹಾಗೆ ಕಡಿಮೆ ಮಾತಿನದೂ ಹೌದು 🙂 ಅಪ್ಪಗಳನ್ನು ಹಚ್ಚಿಕೊಂಡ ಪ್ರತಿಯೊಬ್ಬರಲ್ಲು ಅವರದೆ ಆದ ಕಥೆಗಳಿರಬಹುದಾದರೂ, ಸಾಂಕೇತಿಕವಾಗಿ ಇದು ಅವರೆಲ್ಲರ ಭಾವನೆಗಳ ಪ್ರತಿನಿಧಿ ಎಂಬ ಸಮಷ್ಟಿಭಾವದೊಂದಿಗೆ ಎಲ್ಲ ಅಪ್ಪಂದಿರಿಗೂ ಈ ಕವನ ಅರ್ಪಿತ. ಹಾಗೆಯೆ ಅಂತಹ ಅಪ್ಪಂದಿರನ್ನು ನೆನೆದು ಕೃತಜ್ಞತೆ ಹೇಳುವ ಪುಟ್ಟ ಪ್ರೇರೇಪಣೆ ಸಹ – ನಾಗೇಶ ಮೈಸೂರು, ಸಿಂಗಪೂರದಿಂದ

ಈ ಅಪ್ಪಗಳು
———————————

ಅಪ್ಪಗಳೇನಿಲ್ಲಾ ಕಮ್ಮಿ ಹೆಮ್ಮರ
ನೀರೂಡಲಿ ಬಿಡಲಿ ಬೆಳೆದವರ
ಆಲದ ಹಾಗೆ ವಿಶಾಲ ಚಾಮರ
ಬಾಗೆ ಗೊಬ್ಬಳಿ ಮರ ನೆರಳಾಗಿರ ||

ಪೊದೆಯ ಮೀಸೆಯಿರಲಿ ಬಿಡಲಿ
ನರೆತ ಕೂದಲೆಲ್ಲ ಕಪ್ಪ ಹಚ್ಚಿರಲಿ
ಸ್ಕೂಟರು ಬಸ್ಸು ಸೈಕಲ್ಲೆ ತುಳಿದ
ಮಾತಾಡದೆಲೆ ಸುತ್ತಿ ಬಸವಳಿದ ||

ಮಾತೆ ಮಿತಾ ಗತ್ತು ದರ್ಪ ಅವ್ಯಕ್ತ
ಡಬ್ಬೀ ಮನೆಯೂಟದಲೆ ಸಂತೃಪ್ತ
ಹನಿ ಹನಿಗುಳಿಸುತೆ ಕಟ್ಟೆ ಸಂಕಲ್ಪ
ಮಕ್ಕಳೋದಿ ಬೆಳೆಸಲೆಷ್ಟು ವಿಕಲ್ಪ ||

ಸೈಟು ಮನೆಯೊಂದಾ ಕಟ್ಟಿ ನಿವೃತ್ತಿ
ಮಗಳ ಮದುವೆ ಕಾಡೆ ಮಹರಾಯ್ತಿ
ಮಾಡಬೇಕೆ ಬಿಡದೆ ನೀತೀ ನಿಜಾಯ್ತಿ
ಮಾಡೆ ನೆಮ್ಮದಿ ಆಮೇಲ್ಹಿಡಿ ಪ್ರವೃತ್ತಿ ||

ಅಂತಃಕರಣ ವಾತ್ಸಲ್ಯ ಅಂತರ ಗಂಗೆ
ಬಾಯ್ಬಿಡದೆ ಹಿಡಿದಾ ತ್ಯಾಗದ ಹಂಗೆ
ಸಂಭಾಳಿಸಿ ನೆಂಟ ಬಳಗದೆಲ್ಲ ಟೊಂಗೆ
ನೇಪಥ್ಯ ನೋವ್ಹಿರುತೆ ತುಟಿಯಾ ನಗೆ ||

– ನಾಗೇಶ ಮೈಸೂರು

ಸರಣಿ:
Kannda PoemsSingaporeNagesha mysoreಈ ಅಪ್ಪಗಳು…!
ಲೇಖನ ವರ್ಗ (Category):
ಕಾವ್ಯ ಮತ್ತು ಕವನ
(ಸಂಪದದಲ್ಲಿ ಪ್ರಕಟಿಸಿದ ಬರಹ)
June 16, 2013 – 9:16amn

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s