00089. ಶ್ರಾವಣ ..

ಆಷಾಡದ ಹಿಂದೆಯೆ ಬೆನ್ನಟ್ಟಿ , ಬೆನ್ತಟ್ಟಿ ಬರುವ ಶ್ರಾವಣ, ಆ ಮಾಸದ ಜತೆಯೆ ಬರುವ ಭಾವನಾತ್ಮಕ ಸಂಬಂಧ, ಜಿಟಿಪಿಟಿ ಮಳೆಹನಿಯ ಕವಿತೆ, ಉಲ್ಲಾಸ, ಉತ್ಸುಕತೆಗಳ ರಿಂಗಣ ಮಾತಿನಳತೆಗೆ ಮೀರಿದ ಭಾವಝರಿ. ಆ ಹೊತ್ತಲಿ ಪರಿಸರ, ಪ್ರಕೃತಿಯೆಲ್ಲವು ಭಾವ ಸುಕೃತಿಯೊಡನೆ ಸಮ್ಮಿಲನಗೊಂಡು, ತರತರ ಹೊಸಭಾವದ ನವಿರೆಳಿಸುವುದನು ಹಿಡಿವ ಯತ್ನ ಈ – ಶ್ರಾವಣ! ಅದರಲ್ಲೂ ಮೊದಲಾಷಾಡ ಮುಗಿಸಿದ ನವದಂಪತಿಗಳು ಕಾತುರದಿಂದೆದುರು ನೋಡುವ ಪರ್ವ ಕಾಲ – ಅಂತೆಯೆ ಏನೊ, ಒಂದರ ಹಿಂದೊಂದರಂತೆ ಆರಂಭವಾಗುವ ಹಬ್ಬಗಳ ಸಾಲು ಅದಕಿನ್ನಿಷ್ಟು ಮೆರುಗೀಯುವ ಮುಕುಟವಾಗುವುದು. ಅಂದ ಹಾಗೆ ಇದನ್ನು ಬರೆದಿದ್ದು ೦೧.ಆಗಸ್ಟು.೧೯೯೨ – ಅಂದರೆ ಈ ಶ್ರಾವಣಿ ಈಗ ಇಪ್ಪತ್ತೊಂದು ದಾಟಿ ಇಪ್ಪತ್ತೆರಡಕ್ಕೆ ಕಾಲಿಟ್ಟ ಯುವ ಪ್ರಾಯದ ಮನೋನ್ಮಣಿ! ಆಗಲೂ ಈಗಲೂ ಅಷ್ಟೆ ಮುದ ಕೊಡುವ ಮಾಸ ರಮಣಿ ! ಇಷ್ಟು ವರ್ಷ ಮುಸುಕಿನೊಳಗಡಗಿದ್ದವಳನ್ನು ಈಗ ಪ್ರಕಟಿಸುವ ಮೂಲಕ ಬಿಡುಗಡೆ ಮಾಡುತ್ತಿದ್ದೇನೆ, ಪ್ರಕೃತಿಯಾರಾಧನೆಯ ರಸಿಕರೆದೆಗೆ ಲಗ್ಗೆ ಹಾಕಲು 🙂

ಶ್ರಾವಣ ..
________________

ಆಷಾಡದ ಅಗ್ಗಿಷ್ಟಿಕೆಯಲ್ಲಿ
ಬೆಂದ ಬಯಕೆಯ ಬೆಂಕಿ
ಜಿಟಿಪಿಟಿ ಮಳೆಯಡಿ
ತಂಪಾಗುತಿದೆಯಲ್ಲ
ಬಂತೆ…? ಬಂತೆ..!
ಓಹ್! ಶ್ರಾವಣ..!

ಮೊದಲ ಮಲ್ಲಿಗೆ ಮುಡಿದು
ತವರ ಸೇರಿದ ತವಕ
ಹುಡಿಯಾಗಿ ಬಳಲಿಸಿತೆ
ಇರುಳ ನಡುಕದ ಶಾಪ?
ಕಾದೂ, ಕಾದೂ ಮನದ
ಶೋಕ ಸಂತಾಪ;
ವಿರಹದುಬ್ಬರದಲ್ಲಿ
ತಡೆತಡೆದು ನಿಟ್ಟುಸಿರು
ಬಂತಲ್ಲ ಕೊನೆಗೂ
ಓಹ್! ಶ್ರಾವಣಾ…!!

ಮೊಗ್ಗೊಡೆವ ಹನಿಗಾಗಿ
ಕಾದು ಕಂಗಾಲಾಗಿ
ಬಾಯ್ದೆರೆದು ನಿಂತಿದೆ
ಅಂತರಂಗ…
ನವಿರು ನವಿರು ಪುಳಕ
ಹಿಗ್ಗಿ ನಿಂತೆಡೆ ಜಳಕ
ಸುಖದ ಬೆವರರಿಸಿದೆ
ಓಹ್! ಶ್ರಾವಣಾ….!!!

– ನಾಗೇಶ ಮೈಸೂರು
(ಪಂಜು ವಾರಪತ್ರಿಕೆಗೆ ಕಳಿಸಿದ ಬರಹ – 07.08.2013) published on 2.September. 2013 issue

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s