00088. ಮಿನುಗುತಾರೆ, ಗುನುಗುತ್ತಾರೆ…

ರೇವನ್ ಜೇವೂರರ ‘ಮಿನುಗುತಾರೆ ಪೂಜಾ…!’ ಓದಿದಾಗ ತುಸುಹೊತ್ತು ಕಾಡಿದ ನೆನಪು, ಮಿನುಗುತಾರೆ ಕಲ್ಪನಾ ಕುರಿತಾದ ನೆನಪುಗಳನ್ನು ಕೆದಕಿದ್ದು ಮಾತ್ರವಲ್ಲದೆ ಆ ದಿನಗಳ ( ಅದರಲ್ಲೂ ಕಪ್ಪು ಬಿಳುಪು ಯುಗದ) ಮಧುರ ಗೀತೆಗಳನ್ನು ಚಣಕಾಲ ಮೆಲುಕು ಹಾಕುವಂತೆ ಮಾಡಿತು. ಆದರೂ ಯಾಕೊ ಕೊನೆಯಲ್ಲಿ ಉಳಿದಿದ್ದು ಆ ದುರಂತ ಅಂತ್ಯದ ವಿಷಾದವೆ. ಆ ಮೆಲುಕನೆಲ್ಲ ಕಲಸಿಟ್ಟ ಒಂದು ಕಿರು ಪದ್ಯ / ಕಾವ್ಯ – ತಮ್ಮ ಬರಹದ ಮೂಲಕ ನೆನಪನ್ನು ಮೆಲುಕಿಸಿದ ಜೇವೂರರಿಗೆ ‘ಥ್ಯಾಂಕ್ಸ್’ ಹೇಳುತ್ತ..

ಮಿನುಗುತಾರೆ, ಗುನುಗುತ್ತಾರೆ…
_________________________

ಮಿನುಗುತಾರೆ ಕಲ್ಪನ
ಮಿನುಗುತ್ತಾರೆ ;
ಗುನುಗುತಾರೆ ಇಂದಿಗೂ ಜನ
ಗುನುಗುತ್ತಾರೆ!

ಬೆಳ್ಳಿಮೋಡವಾಗಿ ಕಲ್ಪನೆ
ಅರಳಿದ ಬೆಳಕಿನ ಮೇನೆ ;
ದೀಪದಡಿ ಕತ್ತಲೆ ಕೋಣೆ
ಅವಳ ಬದುಕೇಕೊ ಕಾಣೆ!

ಮೂಡಣ ಮನೆಯ ಮುತ್ತಿಗೆ
ಬೆಳ್ಳಿ ಪರದೆಯ ಪುನುಗು ;
ಹಗಲಿರುಳು ಮಿನುಗಿದರು
ಕಪ್ಪುಸೀರೆ ಬಿಳಿಯಂಚಾದರು!

ಕಾವೇರಿದವಳು ನೀರಾಗಲಿಲ್ಲ
ಶರಪಂಜರವೇಕೊ ಬಿಡಲಿಲ್ಲ ;
ಗೆದ್ದೆನೆಂದು ಅರಚಿದವಳ ಜಗಳ
ಸೋಲಿನ ಘನತೆಯನ್ನು ಕೊಡಲಿಲ್ಲ!

ಹದಿನಾಲ್ಕು ವರ್ಷ ವನವಾಸ
ಮುಗಿಸಿಬಂದರು ಬಿಡದ ದೋಷ ;
ಅಲೆದಾಡಿಸುತ್ತರ ದಕ್ಷಿಣ ಧ್ರುವಕೆ
ಬಿಡದೆ ಕಾಡಿ ಶಾಪ, ಹೊತ್ತರು ಹರಕೆ!

ಒಂದಲ್ಲವೆಂದು ಎರಡು ಕನಸು
ಕಂಡರೂ ಬಿಡ ಮುನಿದ ಮನಸು ;
ದಾರಿ ತಪ್ಪಿದ ಮಗನಂತೆ ಚರಣ
ಹಾಡಿಯೂ ಕಾಯದ ಶ್ರೀಮನ್ನಾರಾಯಣ!

ಅಭಿನೇತ್ರಿಯೆ ನಿಗೂಢ ಕಲ್ಪನೆ ವಜ್ರ
ಕತ್ತರಿಸೆ ಬೇಕಾಯ್ತಿನ್ನೊಂದು ವಜ್ರ ;
ದುರಂತ ಬಾಳಿನ ಪಾಲಾದರೆ ಛಿಧ್ರ
ಪುಡಿಯಾಗದುಳಿದೀತೆ ಎಂತಿರಲಿ ವಜ್ರ!

ಎಡವುತಾರೆ ಕಲ್ಪನ
ಕೊನೆಗೂ ಎಡವುತ್ತಾರೆ ;
ಗೆಜ್ಜೆಪೂಜೆ ಮಾಡಿ ಕೊನೆಗು
ಪಾಪ ಕೆಡವುತ್ತಾರೆ!

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Sampada 31.08.2013

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s