00090. ಅವರಿತ್ತ ಜೀವನ ಭಿಕ್ಷೆ

ಜೀವನದಲ್ಲಿ ಬಾಲ್ಯದ ಅರಿವಿಲ್ಲದ ವಯಸ್ಸಿನಲ್ಲಿ ಪೋಷಕರ ಜತೆ ಹೆಣಗುತ ವ್ಯಕ್ತಿತ್ವ ರೂಪಿಸುವ ಶಿಕ್ಷಕರ ಪಾತ್ರ ಅಗಾಧವಾದದ್ದು. ವಿಪರ್ಯಾಸವೆಂದರೆ, ಆ ಕಾಣಿಕೆಯ ಪ್ರಯೋಜನವುಂಡು ಬೆಳೆಯುವ ಮಕ್ಕಳಿಗೆ ಅದರ ಮಹತ್ವ ಅರಿವಾಗುವಂತಹ ವಯಸಲ್ಲ; ಅರಿಯುವ ವಯಸಲ್ಲಿ ಆ ಬೆಳವಣಿಗೆಯ ಹಂತಗಳೆ ಮಸುಕಾಗಿ ಹೊಸ ಚಿತ್ತಾರಗಳು ಮೂಡಿ, ಹಳತೆಲ್ಲ ಮಾಯವಾಗಿಬಿಟ್ಟಿರುತ್ತವೆ. ಜೀವನ ಚಕ್ರದ ಜಂಜಾಟದಲ್ಲಿ ಪ್ರಾಯಶಃ ಮತ್ತೆ ಆ ಮಹತ್ವದ ನೆನಪಾಗುವುದು ಅವರ ಮಕ್ಕಳು ಅದೆ ಕಲಿಕೆಯ ಹಾದಿಯಲ್ಲಿ ಸಾಗುವುದನ್ನು ನೋಡುವಾಗ ಮತ್ತು ಆ ಬುನಾದಿ ಎಷ್ಟು ಕಠಿಣ ತರದ ಹಾದಿ ಎಂದರಿವಾಗುವಾಗ. ಮೊನ್ನೆ ರಾತ್ರಿ ಮಗನೊಡನೆ ‘ಟೀಚರ್ಸ್ ಡೇ’ ಕಾಣಿಕೆಗಳನ್ನು ಸಿದ್ದ ಮಾಡುತ್ತ, ಬಣ್ಣದ ಕಾಗದ ಸುತ್ತುತ್ತಿದ್ದಾಗ ಈ ಲಹರಿಯ ಹೊಳಹು ಮನದಲ್ಲಿ ಪದೆ ಪದೆ ಹೊಳೆದು ಮಾಯವಾಗುತ್ತಿತ್ತು. ಅದಕ್ಕೊಂದು ಕಾವ್ಯ ರೂಪ ಕೊಟ್ಟು ತನ್ಮೂಲಕ ಇಡಿ ಶಿಕ್ಷಕ ಸಮುದಾಯಕ್ಕೆ ವಿನಮ್ರವಾಗಿ ನಮಿಸುವ ಸಾಂಕೇತಿಕ ಯತ್ನ – “ಅವರಿತ್ತ ಜೀವನ ಭಿಕ್ಷೆ”

ಅವರಿತ್ತ ಜೀವನ ಭಿಕ್ಷೆ
___________________________

ಗುರುಮುಖೇನ ಜೀವನ ದರ್ಶನ
ಬಾಲ್ಯದಿಂದ ಕಾಪಾಡುವ ಚರಣ
ಅರಿತರಿಯದಿರುವ ವಯಸಿನಲೆ
ಅರಿವಿಲ್ಲದೆ ಕಟ್ಟುವ ವ್ಯಕ್ತಿತ್ವ ಸೆಲೆ!

ಹಿಡಿದರೊ ಕೋಲಲಿ ಬಡಿದರೊ
ಬೈಯ್ದಾಡಿ ರೇಗಿದ ಒಗರೊಗರೊ
ಏಗಿದ ಹೆಣಗಿದ ಪೋಷಕದೂತ
ಕಲಿಕೆಗೆಲ್ಲ ಪೋಷಾಕು ಹಾಕುತ!

ಬುನಾದಿ ಬಿದ್ದರೆ ತಾನೆ ಸನಾದಿ
ಸರಿಯಡಿಪಾಯ ಹಾಕೊ ದಾದಿ
ಶಿಸ್ತಿನ ಪೌರುಷ ಮಮತಾ ವೇಷ
ಏಕಿಭವಿಸಿ ಕಟ್ಟೇ ಪೀಳಿಗೆ ಭವಿಷ್ಯ!

ಜಗ ಬದಲಾದಂತೆ ಬದಲಾಗುತ
ನಡೆದ ಮಾಸ್ತರ ಮೇಡಮ್ಮರ ಗತ
ಬದಲಾಗಿದೆಯೆ ಸ್ಥಿತಿಗತಿ ದುರ್ಗತಿ
ತಪ್ಪಿ ಸ್ಕೂಲ್ಮಾಸ್ತರಿಕೆಯಾ ಅವನತಿ!

ಸಂಬಳ ಪೂರಾ ಕೊಟ್ಟರೊ ಬಿಟ್ಟರೊ
ಅರೆಕಾಸರೆಕಾಲಿಕಾ ಕಣ್ಣೀರ ತೇರೊ
ತಿದ್ದಿಸಕ್ಷರ ಸಹನೆ ಶಿಶುವಿನಸಹನೆ
ತಾಳ್ಮೆಯ ಬರಹ ಆಜೀವ ಸ್ಮರಣೆ!

ಕಾಲಯಾನದಲೆಲ್ಲ ಮೌನ ಮರೆವು
ನಮ್ಮನಾಗಿಸಿ ತಲುಪಿಸಿದ ಎತ್ತರವು
ಕಾಣಿಸದಲ್ಲ ದೂರಕೆ ಇರುವೆ ಗಾತ್ರ
ಗೊತ್ತಾಗೊ ವಯಸಲ್ಲ ಅವರ ಪಾತ್ರ!

ತಿಳಿವ ವಯಸು ತರುವ ಜೀವನಚಕ್ರ
ನಮ್ಮ ಕುಡಿಗಳಿಗು ಬೇಕು ಅದೆ ಮಿತ್ರ
ಕನಿಷ್ಠತೆಯಲಿ ನಮನ ಶಿಕ್ಷಕರಿಗೀದಿನ
ಅವರಿತ್ತ ಜೀವನ ಭಿಕ್ಷೆಗೆ ವಂದಿಸೋಣ!

ಧನ್ಯವಾದಗಳೊಂದಿಗೆ,
– ನಾಗೇಶ ಮೈಸೂರು

(saMpada 05.Sep.2013)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s