00101. ಯಾರು..? (ಚಿಣ್ಣರ ಹಾಡು)

ಚಿಣ್ಣರ ಲೋಕದ ಕುತೂಹಲಕೆ ಎಲ್ಲವೂ ವಿಸ್ಮಯಕಾರಕವೆ. ಒಂದೆಡೆ ಕುತೂಹಲವಾದರೆ ಮತ್ತೊಂದೆಡೆ ಅಚ್ಚರಿ, ವಿಸ್ಮಯಗಳ ಸಹಜ ಸಂಗಮ – ಇವೆಲ್ಲಾ ಪ್ರಶ್ನೆಗಳಾಗಿ ಮಗುವಿನ ಬಾಯಿಂದ ಹೊರಬಿದ್ದ ಬಗೆಯೆ ‘ಯಾರು?’ ಪದ್ಯ. ಇದು ೧೨.ಜೂನ್. ೧೯೯೨ ರಲ್ಲಿ ಬರೆದ ಪದ್ಯ. ಸಪ್ತಗಿರಿ ಮತ್ತು ಗಣೇಶರ ಕೋರಿಕೆಯಂತೆ ಹಳೆಯ ಬರಹಗಳನ್ನು ಪ್ರಕಟಿಸಲು ಹುಡುಕುತಿದ್ದಾಗ ಸಿಕ್ಕವು ಒಟ್ಟು ಮೂರು ಮಕ್ಕಳ ಪದ್ಯಗಳು – ಇದು ಮೂರನೆಯದು (ಉಳಿದೆರಡು ಈಗಾಗಲೆ ಸಂಪದದಲ್ಲಿ ಪ್ರಕಟಿಸಿದೆ). ಆ ದಿನಗಳಲ್ಲಿ ಬರೆದ ಕವನಗಳನ್ನು ‘ಹದಿ ಹರೆಯದ ಕನಸುಗಳು’ ಎಂಬ ಹೆಸರಡಿ ಒಟ್ಟು ಹಾಕಿದ್ದೆ. ಇವು ಅದೆ ಗುಂಪಾದರೂ, ಹದಿ ಹರೆಯಕ್ಕಿಂತ ಇಲ್ಲಿ ಪುಟಾಣಿ ಪ್ರಪಂಚದ ವಿಸ್ಮಯ, ಬವಣೆಗಳೆ ವಸ್ತುವಾದದ್ದು ಹರೆಯದ ಚೋದ್ಯ!

(ಉಳಿದಿದ್ದೆಲ್ಲ ಬರಿ ಹರೆಯ ಬಿಂಬಿಸಿದ ವಸ್ತುಗಳೆ ಬಿಡಿ ಅನ್ನುತ್ತಿದೆ, ಭೂನಾರದ ಉವಾಚ ; ಅವುಗಳಲ್ಲಿರುವ ಹರೆಯದ ‘ತುಂಟು’ ಕವನಗಳನ್ನು ಪ್ರಕಟಿಸುವ ತಾಕತ್ತಿದೆಯಾ ಎಂದು ಅಣಕಿಸಿದೆ ‘ಕಲಹ ಪ್ರಿಯ’ ಉವಾಚ…)

ಯಾರು..? (ಚಿಣ್ಣರ ಹಾಡು)
__________________________

ನವಿಲಿನ್ ಚಿತ್ರ ಬರೆಯೋಕ್ ಹೊರಟೆ
ಮೈ – ಕೈಯೆಲ್ಲಾ ಬಣ್ಣಾ..
ನವಿಲಿನ್ ಮೈಗೆ ಕಣ್ಣು – ಬಣ್ಣ
ಬಳ್ದೋರು ಯಾರೋ ಅಣ್ಣಾ..?

ಗೇಟುನ್ ಮುಂದೆ ಒಣಗೋ ಗಿಡಕ್
ಹಾಕ್ಬೇಕ್ ದಿನಾನೂ ನೀರು
ಕಾಡ್ನಲ್ಲಿರೋ ಗಿಡ್ ಮರಗಳಿಗೆ
ತೊಗೊಂಡೋರ್ಯಾರೋ ಕೇರು ?

ಆಕಾಶದಲ್ಲಿ ಏರೋಪ್ಲೇನ್ಗೂ
ತುಂಬುಸ್ಬೇಕು ಪುಲ್ಲು
ರೆಕ್ಕೆ ಬಿಚ್ಕೊಂಡ್ ಹಾರೋ ಹಕ್ಕೀಗ್
ಎಲ್ಲೀದಪ್ಪ ಪ್ಯುಯೆಲ್ಲೂ…?

ಗಢಗಢ ಅಂತ ಓಡುತ್ತಲ್ಲ
ಅಷ್ಟೊಂದ್ ಭಾರದ್ ಟ್ರೇನು
ಯಾವನಪ್ಪ ಕಂಡು ಹಿಡ್ದೋನು
ಯೋಚಿಸ್ತೀನಿ ನಾನು …?

ಯಾವಂದಪ್ಪ ಈ ಕೈವಾಡ
ಕೂತೋನಂತೆ ಅವಿತು
ಸಿಗಬೇಕಂತೆ ಕೈಗೊಂದ್ಸಾರಿ
ಕೇಳೋದೇ ಒಂದ್ ಮಾತು…!

———————————————————————————————————————————
ನಾಗೇಶ ಮೈಸೂರು, ದಿನಾಂಕ : ೧೨.ಜೂನ್. ೧೯೯೨, ಬೆಂಗಳೂರು
———————————————————————————————————————————
ಗುಂಪು / ವಿಂಗಡನೆ: ಕುತೂಹಲ, ಮಕ್ಕಳ, ಚಿಣ್ಣರ, ಪ್ರಕೃತಿ, ಪರಿಸರ, ಯಾರು..?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s