00242. ಕಥೆ: ಪರಿಭ್ರಮಣ..(44)


00242. ಕಥೆ: ಪರಿಭ್ರಮಣ..(44)

ತಡವಾಗಿ ಹೋದ ಖಿನ್ನ ಭಾವದಲ್ಲೆ ಅವಸರವಸರವಾಗಿಯೆ ಮುಖಕ್ಕಿಷ್ಟು ಬೆಚ್ಚಗಿನ ನೀರು ತೋರಿಸಿ, ಸರಸರನೆ ಬಟ್ಟೆ ಧರಿಸಿಕೊಂಡು ಲಂಚಿನ ಹೊತ್ತಿನ ಒಳಗಾದರೂ ಆಫೀಸಿಗೆ ಸೇರಿಕೊಂಡು ಬಿಡಲೆಂದು ಹೊರಟಿದ್ದ ಶ್ರೀನಾಥ, ತಾನಿರುವ ಅಪಾರ್ಟ್ಮೆಂಟಿನ ಮುಖ್ಯ ದ್ವಾರಕ್ಕೆ ಬಂದವನೆ ಅವಾಕ್ಕಾಗಿ ನಿಂತುಬಿಟ್ಟ… ಅಪಾರ್ಟ್ಮೆಂಟಿನೊಳಗಡೆಯೆ ಇದ್ದು ಹೊರಗೇನಾಗುತ್ತಿದೆಯೆಂದು ಗೊತ್ತಾಗದ ಬಹು ಅಂತಸ್ತಿನೆತ್ತರದಲ್ಲಿನ ಗ್ರಹಿಕೆಯಲ್ಲಿ, ಬರಿ ಮಳೆಯ ವಿಶ್ವರೂಪವಷ್ಟೆ ಕಾಡಿತ್ತೆಂದು ಭಾವಿಸಿದ್ದವನಿಗೆ ನೆಲಮಟ್ಟದಲ್ಲಿ ಅದು ಉಂಟು ಮಾಡಿರಬಹುದಾದ ಅವಾಂತರ ದುರಂತ ಅನಾಹುತಗಳ ಪರಿಮಾಣದ ತೃಣ ಮಾತ್ರದ ಕಲ್ಪನೆಯೂ ಇರಲಿಲ್ಲ. ದೈನಂದಿನ ನಗರ ಜೀವನದಲ್ಲಿ ಅಷ್ಟೊಂದು ತೀವ್ರವಾಗಿ ಘಾಸಿಯುಂಟು ಮಾಡಬಹುದಾಗಿದ್ದ ಮಳೆಯ ರೌದ್ರಾವತಾರವನ್ನು ತನ್ನ ಅದುವರೆಗಿನ ಜೀವಮಾನದಲ್ಲಿ ಅವನೆಂದೂ ನೋಡಿರಲಿಲ್ಲ – ಅಷ್ಟೊಂದು ವಿಧ್ವಂಸಕ ಮಟ್ಟದಲ್ಲಿ ಚೆಲ್ಲಾಟವಾಡಿ ಬಿಟ್ಟಿತ್ತು ಮಳೆಗಾಳಿಗಳ ಜೋಡಿಯಾಟದ ಸರಸ ಸಲ್ಲಾಪ…..

https://nageshamysore.wordpress.com/00234-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-44/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com