00269. ಕಥೆ: ಪರಿಭ್ರಮಣ..(57)


00269. ಕಥೆ: ಪರಿಭ್ರಮಣ..(57)

ಹೀಗೆ ಹಂಚಿ ಹೋದ ಶಕ್ತಿ ಪ್ರಮಾಣ ಬೇರೆಯಾದ ಕಾರಣದಿಂದಲೆ ಬೇರೆ ಬೇರೆ ಕಾಯಗಳು, ವಸ್ತುಗಳು ಬೇರೆ ಬೇರೆ ಸಾಂದ್ರತೆಯ ಶಕ್ತಿಯನ್ನು ಪಡೆದುಕೊಂಡವೆ? ಉದಾಹರಣೆಗೆ ಬರಿಯ ಸೌರವ್ಯೂಹವನ್ನೆ ಪರಿಗಣಿಸಿದರೆ ಅತ್ಯಂತ ಬಲಶಾಲಿಯಾದವನು ಸೂರ್ಯ – ಇಡೀ ಸೌರ ಮಂಡಲವನ್ನೆ ತನ್ನ ಬಿಗಿ ಮುಷ್ಟಿಯಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂಡವನು. ಅವನೆ ಶಕ್ತಿಯ ಅಕರವಾಗಿ ಪ್ರಖರವಾಗಿ ಧಗಧಗಿಸುತ್ತಿರುವವನು. ಅವನ ಸುತ್ತ ನೆರೆದಿರುವ ಗ್ರಹಾದಿ ಬಳಗಗಳೆಲ್ಲ ಮೊದಲಿಗೆ ಅವನ ಭಾಗವೆ ಆಗಿದ್ದು, ಸ್ಪೋಟದ ಅನುಕ್ರಮಣತೆಯಿಂದಾಗಿ ಸಿಡಿದು ಅವನ ಸುತ್ತಲೆ ಎಸೆಯಲ್ಪಟ್ಟವೊ ಏನೊ?……..

( ಪರಿಭ್ರಮಣ..57ರ ಕೊಂಡಿ – https://nageshamysore.wordpress.com/00266-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-57/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00268. ಕಲ್ಲು ಸೇರೆಬಿಟ್ಟಿತು, ಮಂಗಳನಂಗಳ !


00268. ಕಲ್ಲು ಸೇರೆಬಿಟ್ಟಿತು, ಮಂಗಳನಂಗಳ !
_______________________________

ಅಂದುಕೊಂಡಿದ್ದಂತೆ ಎಲ್ಲಾ ಸರಿಯಾಗಿ ನಡೆದು ಕೊನೆಗೂ ಇಸ್ರೋದ ಹೋದ ವರ್ಷದ ದೀಪಾವಳಿ ಪಟಾಕಿ ತನ್ನ ನಿಶ್ಚಿತ ಗುರಿ ಸೇರುವುದರಲ್ಲಿ ಯಶಸ್ವಿಯಾಗಿದೆ – ‘ಠುಸ್’ ಪಟಾಕಿಯಾಗದೆ. ಹೆಚ್ಚು ಕಡಿಮೆ ಮುಂದಿನ ದೀಪಾವಳಿಗೆ ಒಂದು ತಿಂಗಳಿಗೆ ಮೊದಲೆ ಯಶಸ್ಸನ್ನು ಕಂಡಿರುವುದರಿಂದ, ಒಂದು ರೀತಿ ‘ದೀಪಾವಳಿಯ ಮುಂಗಡ ಬೋನಸ್’ ಕೊಟ್ಟುಕೊಂಡುಬಿಟ್ಟಿದೆ ಎಂದೆ ಹೇಳಬಹುದು – ಜತೆಗೆ ಅದೇ ಉಡುಗೊರೆಯನ್ನು ದೇಶವಿದೇಶಗಳಲ್ಲಿರುವ ಅಸಂಖ್ಯಾತ, ದೇಶಾಭಿಮಾನಿ ಭಾರತೀಯರೆಲ್ಲರಿಗೂ ನೀಡುತ್ತ. ಕಳೆದ ದೀಪಾವಳಿಯ ಹೊತ್ತಲ್ಲಿ ಉಡ್ಡಯಾನವಾದಾಗ ‘ಮಂಗಳನತ್ತ ಒಂದು ಕಲ್ಲು..’ ಎನ್ನುವ ಹೆಸರಲ್ಲಿ ಅದರ ಕುರಿತಾಗೆ ಬರೆದಿದ್ದ ಬರಹವೊಂದನ್ನು ಸಂಪದದಲ್ಲಿ ಪ್ರಕಟಿಸಿದ್ದೆ (ಕೊಂಡಿಯನ್ನು ನೋಡಿ)….

https://nageshamysore.wordpress.com/00268-%e0%b2%95%e0%b2%b2%e0%b3%8d%e0%b2%b2%e0%b3%81-%e0%b2%b8%e0%b3%87%e0%b2%b0%e0%b3%86%e0%b2%ac%e0%b2%bf%e0%b2%9f%e0%b3%8d%e0%b2%9f%e0%b2%bf%e0%b2%a4%e0%b3%81-%e0%b2%ae%e0%b2%82%e0%b2%97%e0%b2%b3/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

Thanks & Best Regards / Nagesha Mysore
WeBlog site: nageshamysore.wordpress.com

00267. ದುರ್ಗೆಯ ನವರಾತ್ರಿ ನವರೂಪಗಳು


00267. ದುರ್ಗೆಯ ನವರಾತ್ರಿ ನವರೂಪಗಳು

ಇಂದು ಈ ಬಾರಿಯ ನವರಾತ್ರಿಯ ಆರಂಭದ ದಿನ (ಸೆಪ್ಟಂಬರ 25). ಎಂದಿನಂತೆ ಒಂಭತ್ತು ಹೆಜ್ಜೆಯಿಡುತ್ತ ಆಯುಧಪೂಜೆ ಮತ್ತು ನಂತರ ವಿಜಯ ದಶಮಿಯತ್ತ ಸಾಗಿಸುವ ಈ ನವರಾತ್ರಿ ನಮ್ಮಲ್ಲಿ ಮೈಸೂರಿನ ದಸರೆಯಿಂದಾಗಿ ಜಗದ್ವಿಖ್ಯಾತವಾದರೂ, ಇದೇ ಸಮಯದಲ್ಲಿ ಪಶ್ಚಿಮ ಬಂಗಾಳ ಮತ್ತಿತರ ಕೆಲವೆಡೆ ನಡೆಯುವ ದುರ್ಗಾಪೂಜೆಯೂ ಅಷ್ಟೆ ಹೆಸರುವಾಸಿ.

https://nageshamysore.wordpress.com/00267-%e0%b2%a6%e0%b3%81%e0%b2%b0%e0%b3%8d%e0%b2%97%e0%b3%86%e0%b2%af-%e0%b2%a8%e0%b2%b5%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf-%e0%b2%a8%e0%b2%b5%e0%b2%b0%e0%b3%82%e0%b2%aa%e0%b2%97/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00266. ಯಾವ ಹತ್ತೆಂದು ಹೇಳೋಣಾ ?


00266. ಯಾವ ಹತ್ತೆಂದು ಹೇಳೋಣಾ ?
_____________________________________

ಯಾವ್ ಹತ್ತೂಂತ, ನಾ ಕೈಯೆತ್ತಿ, ಹೆಂಗೆ ಹೇಳಲಿ ಸ್ವಾಮಿ ?
ಓದೋದ್ಕೊಂಡು, ಬೆಳೆದಿದ್ದೆಲ್ಲಾ, ಅಚ್ಚ ಕನ್ನಡದಲ್ಲೆ ಮಾಮಿ
ಶುರುವಾಗಿದ್ದೆಲ್ಲಾ, ಮಕ್ಕಳಾಟ, ಆಡ್ಕೊಂಡಾಡ್ತಾನೆ ನಾಕಾಣಿ
ಚಂದಮಾಮ, ಬಾಲಮಿತ್ರ, ಬೊಂಬೆಮನೆ ಜತೆಗೆ ಪುಟಾಣಿ ||

https://nageshamysore.wordpress.com/00266-%e0%b2%af%e0%b2%be%e0%b2%b5-%e0%b2%b9%e0%b2%a4%e0%b3%8d%e0%b2%a4%e0%b3%86%e0%b2%82%e0%b2%a6%e0%b3%81-%e0%b2%b9%e0%b3%87%e0%b2%b3%e0%b3%8b%e0%b2%a3%e0%b2%be/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00265. ಕಥೆ: ಪರಿಭ್ರಮಣ..(56)


00265. ಕಥೆ: ಪರಿಭ್ರಮಣ..(56)

ನಿಜ ಹೇಳಬೇಕಾದರೆ ದ್ವಂದ್ವ ಸಿದ್ದಾಂತಕ್ಕೆ ಬೆಳಕನ್ನು ಮೀರಿಸಿದ ಮಾತ್ತೊಂದು ಸೂಕ್ತ ಉದಾಹರಣೆಯೆ ಇಲ್ಲವೆಂದು ಹೇಳಬೇಕು… ಈ ಬೆಳಕಿನ ಜತೆ ಜಿಜ್ಞಾಸೆಯ ಜಗಳಕ್ಕಿಳಿಯಬೇಕಾದರೆ, ಕತ್ತಲೆಯನ್ನು ಹೊರಗಿಟ್ಟು ಜೂಟಾಟವಾಡಲಿಕ್ಕೆ ಸಾಧ್ಯವೆ ಇಲ್ಲ. ಆದರೆ, ಕತ್ತಲು ಎನ್ನುವುದು ಬೆಳಕಿನ ಅವಿಭಾಜ್ಯ ಅಂಗವೇನೂ ಅಲ್ಲವಲ್ಲ? ನಿಜ ಹೇಳುವುದಾದರೆ ಬೆಳಕಿನಲ್ಲಿರುವುದು ಬರಿ ಬೆಳಕೆ ಹೊರತು ಕತ್ತಲಲ್ಲ. ಉರಿಯುವ ಸೂರ್ಯ ಮಂಡಲದ ಅಂತರಾಳದ ನಿಗಿನಿಗಿ ಕೆಂಡ ಹೊರದೂಡುವುದು ಬರಿ ಬೆಳಕಿನ ಅಚ್ಚೆಯೊತ್ತಿದ ಶಾಖವೆ ಹೊರತು ಕತ್ತಲಲ್ಲ. ಆದರೆ ಆ ಶಾಖ, ಬೆಳಕು ಭೂಮಿಯಂತಹ ಆಕಾಶ ಕಾಯದ ಮೇಲೆ ಬಿದ್ದು ಪಾರ್ಶ್ವದಲಷ್ಟೆ ಆವರಿಸಿಕೊಂಡಾಗ, ಆ ವಸ್ತುವಿನ ತನ್ನದೆ ಆದ ಪ್ರಕ್ಷೇಪಿತ ನೆರಳಷ್ಟೆ ಕತ್ತಲಾಗಿ ಬಿತ್ತರಗೊಳ್ಳುವುದಲ್ಲವೆ ?

(ಪರಿಭ್ರಮಣ..56ರ ಕೊಂಡಿ – https://nageshamysore.wordpress.com/00265-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-56/)

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00264. ಕಥೆ: ಪರಿಭ್ರಮಣ..(55)


00264. ಕಥೆ: ಪರಿಭ್ರಮಣ..(55)

ಅವರು ಹೋದತ್ತಲೆ ಕೈ ಜೋಡಿಸಿಕೊಂಡು ನಮಿಸುತ್ತ ನಿಂತ ಶ್ರೀನಾಥನ ಮನದಲ್ಲಿ ಮಾತ್ರ ಮೊದಲಿಗಿಂತ ಹೆಚ್ಚಿನ, ಶಾಂತ ಸಾಗರದ ಪ್ರಶಾಂತ ಭಾವ ತುಂಬಿಕೊಂಡಿದ್ದರೂ, ಈಗ ಮೊದಲಿದ್ದ ಆತಂಕದ ಜಾಗದಲ್ಲಿ ಅತೀವ ಕುತೂಹಲ ತುಂಬಿಕೊಂಡಿತ್ತು – ಈ ನಾಲ್ಕಾರು ದಿನಗಳಲ್ಲಿ ಏನೇನು ಪರಿವರ್ತನೆಯ ಪದರಗಳ ಅನಾವರಣವಾಗಲಿದೆಯೊ, ಏನೊ? ಎಂದು. ಅದಕ್ಕು ಮಿಗಿಲಾಗಿದ್ದ ಮತ್ತೊಂದು ನೈತಿಕ ಹಾಗೂ ಸಾತ್ವಿಕ ಕುತೂಹಲವೆಂದರೆ – ಅವನಾಗಲೆ ಅನುಭವಿಸತೊಡಗಿದ್ದ ಒಂದು ಹೊಸ ತರದ ಮಾನಸಿಕ ಪ್ರಶಾಂತತೆ. ಆಗಿನ್ನು ಕೇವಲ ಆರಂಭ ಹಂತದ ಪ್ರಶಾಂತತೆಯನ್ನು ಮಾತ್ರ ಅನುಭವಿಸುತ್ತಿದ್ದರೂ, ಅದೆ ಅದ್ಭುತದ ಪರಮೋನ್ನತ ಶಿಖರವೆನ್ನುವಂತೆ ಭಾಸವಾಗತೊಡಗಿತ್ತು….

https://nageshamysore.wordpress.com/00263-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-55/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00263. ಕಥೆ: ಪರಿಭ್ರಮಣ..(54)


00263. ಕಥೆ: ಪರಿಭ್ರಮಣ..(54)

‘ ಅಂದರೆ ಧ್ಯಾನ, ಚಿಂತನೆ ಬಿಟ್ಟು ಮತ್ತೇನೊ ಮಾಡಬೇಕಿರುವಂತೆ ಕಾಣುತ್ತಿದೆ…?’ ಏನಿರಬಹುದೆಂಬ ಆಲೋಚನೆಯಲ್ಲೆ ಎತ್ತಲೊ ನೋಡುತ್ತ ನುಡಿದಿದ್ದ ಶ್ರೀನಾಥ.

‘ ನಿಜ ಹೇಳಬೇಕೆಂದರೆ ಆ ಕಾರ್ಯಕ್ರಮದ ಯಾದಿ ಈಗಾಗಲೆ ಸಿದ್ದವಾಗಿ ಹೋಗಿದೆ ಕುನ್. ಶ್ರೀನಾಥಾ… ಮೂರನೆ ದಿನ ಕಳೆಯಲಿ ಆಮೇಲೆ ಹೇಳುತ್ತೇನೆ..’ ಎಂದರು ಮಾಂಕ್ ಸಾಕೇತ್. ಅವರ ದನಿಯಲ್ಲಿದ್ದುದ್ದು ತೆಳು ಹಾಸ್ಯವೊ, ಛೇಡಿಕೆಯೊ ಅರಿವಾಗದ ಗೊಂದಲದಲ್ಲೆ ಶ್ರೀನಾಥ,

‘ಅದನ್ನು ಈಗಲೆ ಹೇಳಬಾರದ್ದೆಂಬ ನಿಯಮವಿದ್ದರೆ ಹೇಳುವುದು ಬೇಡ..ತಿಳಿಯುವ ಕುತೂಹಲವೇನೊ ನನಗಿದೆಯಾದರೂ ಈಗಲೆ ತಿಳಿಯಬೇಕೆಂಬ ಅವಸರವೇನೂ ಇಲ್ಲಾ..’ ಎಂದ……

https://nageshamysore.wordpress.com/00263-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-54/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com