00322. ಲಘು ಹಾಸ್ಯ: ನಿತ್ಯ ಜೀವನಕ್ಕೆ ಯೋಗ (ಗುಬ್ಬಣ್ಣನ ಯೋಗಾಸನ ಸಂಶೋಧನೆಗಳು !)


00322. ಲಘು ಹಾಸ್ಯ: ನಿತ್ಯ ಜೀವನಕ್ಕೆ ಯೋಗ (ಗುಬ್ಬಣ್ಣನ ಯೋಗಾಸನ ಸಂಶೋಧನೆಗಳು !)
_________________________________________________________________

ಜೂನ್ ಇಪ್ಪತ್ತೊಂದನ್ನು ‘ಅಂತರರಾಷ್ಟ್ರೀಯ ಯೋಗ’ ದಿನವನ್ನಾಗಿ ಆಚರಿಸಬೇಕೆಂಬ ಸರಕಾರಿ ಸುತ್ತೋಲೆ ಹೊರಬಿದ್ದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ಸುಮಾರು ದೇಶಗಳಲ್ಲಿ ಅದರ ಆಚರಣೆ ಮಾಡುವ ಸಿದ್ದತೆಗಳನ್ನು ಸುದ್ಧಿಯಾಗಿ ಬಿತ್ತರಿಸತೊಡಗಿದಾಗ ಅದರ ದನಿ ಇತರೆ ದೇಶಗಳಂತೆ ಸಿಂಗಪುರದಲ್ಲು ಮಾರ್ದನಿಸಿದ ಕಾಲ.. ಯೋಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಔನ್ನತ್ಯಕ್ಕೇರಿಸಲು ಸರಕಾರ ಕೈಗೊಂಡ ಕ್ರಮಗಳ ಕುರಿತಾದ ವರದಿ ಓದುತ್ತ ಕುಳಿತಿದ್ದಾಗ ಯಾಕೊ ತಟ್ಟನೆ ನನಗು, ಯೋಗ ಕಲಿಯಲು (ಪುನರ್) ಆರಂಭಿಸಬೇಕೆಂಬ ಆಕಾಂಕ್ಷೆ ಪ್ರಕಟವಾಗಿ, ಅದು ಪ್ರಬಲವಾದ ಬಯಕೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳತೊಡಗಿತು. ವಿಪರ್ಯಾಸವೆಂದರೆ ಆ ಬಯಕೆಗೆ ಎರಡೂ – ಪ್ರೇರಕ ಹಾಗು ಮಾರಕ ಶಕ್ತಿಯಾಗಿದ್ದುದ್ದು ಒಂದೆ ಮೂಲವೆ; ಹಾಳು ಭೂತಾಯಿಯನ್ನೆ ಬಸಿರಲಿಟ್ಟುಕೊಂಡು ಕಾಪಾಡುತ್ತಿರುವಂತೆ ಬಿಂಕ ತೋರಿಸುವ ಗುಢಾಣದ ಹೊಟ್ಟೆ! (click the link page below to read the remaining part of the story…)

https://nageshamysore.wordpress.com/00322-%e0%b2%a8%e0%b2%bf%e0%b2%a4%e0%b3%8d%e0%b2%af-%e0%b2%9c%e0%b3%80%e0%b2%b5%e0%b2%a8%e0%b2%95%e0%b3%8d%e0%b2%95%e0%b3%86-%e0%b2%af%e0%b3%8b%e0%b2%97-%e0%b2%97%e0%b3%81%e0%b2%ac%e0%b3%8d/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

00321. ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ..


00321. ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ..
_____________________________________________

ದಿನದ ಕೊನೆಯ ಮೇಯ್ಲೊಂದನ್ನು ಓದಿ ಮುಗಿಸಿ, ಚುಟುಕಾದ ಮಾರುತ್ತರ ಬರೆದು ಕಳಿಸಿದವನೆ ಮೊಬೈಲಿನ ಗಡಿಯಾರದತ್ತ ಕಣ್ಣು ಹಾಯಿಸಿದ ಗಂಭೀರ, ‘ ಓಹ್.. ಆಗಲೆ ಆರೂವರೆ..’ ಎಂದುಕೊಂಡು ಸ್ವಲ್ಪ ಅವಸರದಲ್ಲೆ ಕಂಪ್ಯೂಟರು ಮುಚ್ಚಿ ಬ್ಯಾಗಿಗೆ ಸೇರಿಸಿ ಹೊರಟ. ಅದು ಅವನ ನಿತ್ಯದ ದಿನಚರಿ – ಆರರಿಂದ ಆರೂವರೆಗೂ ಮೊದಲೆ ಆಫೀಸು ಬಿಟ್ಟು ಹೊರಟುಬಿಡುವುದು. ಆಗಲೆ ಇನ್ನು ಚೆನ್ನಾಗಿ ಬೆಳಕಿರುವುದರಿಂದ ಸಂಜೆಯ ತಂಪು ಹವೆಯಲ್ಲಿ ತೀರಾ ಬೆವರದೆ ನಡೆದು ಮನೆ ಸೇರಿಬಿಡಬಹುದು. ಅದೇ ಆರೂವರೆ ದಾಟಿತೆಂದರೆ ಯಾಕೊ ವಾಕಿಂಗ್ ಹೊರಡಲು ಮನಸಾಗುವುದಿಲ್ಲ.. ಆ ನಂತರದ ವಾಕಿಂಗಿನಲ್ಲಿ ಬೆನ್ನಿನಲ್ಲಿ ಬ್ಯಾಗು ನೇತು ಹಾಕಿಕೊಂಡು ಎಷ್ಟೆ ಬೇಗನೆ ನಡೆದು ಹೊರಟರೂ ಆರು ಕಿಲೊಮೀಟರು ದೂರದ ಸಿಟಿಯ ಮಧ್ಯದಲ್ಲಿರುವ ಮನೆ ಸೇರುವ ಹೊತ್ತಿಗೆ ಕನಿಷ್ಠ ಒಂದು ಗಂಟೆ ಹತ್ತು ನಿಮಿಷವಾದರೂ ಬೇಕು. ಜತೆಗೆ ಹೋಗುವ ದಾರಿಯಲ್ಲೆ ಮಗನಿಗೆಂದು ಏನಾದರೂ ತಿನ್ನಲು ಕಟ್ಟಿಸಿಕೊಂಡು ಹೋಗುವ ಕಾರಣ ಮತ್ತೊಂದು ಹದಿನೈದಿಪ್ಪತ್ತು ನಿಮಿಷವನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಆರೂವರೆಯ ನಂತರ ಹೊರಟರೆ ಮನೆಯಲ್ಲಿ ಕಾದಿರುವ ಮಗನ ಊಟದ ಸಮಯದಲ್ಲಿ ಏರುಪೇರಾಗಿಬಿಡುತ್ತದೆ. ಅದಕ್ಕೆ ಅವಕಾಶ ಕೊಡದೆ ಒಂದೊ ಆರೂವರೆಗೆ ಮೊದಲೆ ಹೊರಡುತ್ತಾನೆ ಇಲ್ಲವೆ ತಡವಾಯ್ತೆಂದರೆ ಬಸ್ಸಿನಲ್ಲೊ, ಟ್ರೈನಿನಲ್ಲೊ ಹೊರಟುಬಿಡುತ್ತಾನೆ. ಆ ಕಾರಣಕ್ಕಾಗಿಯೆ ಎಂಟಕ್ಕು ಮೊದಲೆ ಆಫೀಸಿಗೆ ಬರುವುದನ್ನು ರೂಢಿಸಿಕೊಂಡಿದ್ದಾನೆ – ಕಡ್ಡಾಯವಾಗಿ ನಿರ್ವಹಿಸಲೆಬೇಕಾದ ದೈನಿಕ ಗಂಟೆಗಳ ಅವಧಿಯಲ್ಲಿ ಯಾವುದೆ ವ್ಯತ್ಯಯವಾಗಲಿ, ಖೋತಾವಾಗಲಿ ಆಗದಂತೆ ನೋಡಿಕೊಳ್ಳಲು. ಎಲ್ಲಕ್ಕಿಂತ ಹೆಚ್ಚಿನ ಪ್ರೇರಣೆಯೆಂದರೆ ಈ ನೆಪದಲ್ಲಿಯಾದರು ಸ್ವಲ್ಪ ದೈಹಿಕ ವ್ಯಾಯಾಮ ಸಿಕ್ಕಂತಾಗುವುದಲ್ಲ ಎನ್ನುವುದು. ಕನಿಷ್ಠ ವಾರಕ್ಕೆ ಮೂರು ದಿನ ನಡೆದರು ಸಾಕು ದೈನಂದಿನ ಆರೋಗ್ಯದ ಕೋಟಾ ಮುಗಿಸಲು ಸಾಧ್ಯ – ದಿನಕ್ಕರ್ಧ ಗಂಟೆಯ ಲೆಕ್ಕದಲ್ಲಿ…

(Click the page link to read the rest of the story: https://nageshamysore.wordpress.com/00321-%e0%b2%b8%e0%b2%a3%e0%b3%8d%e0%b2%a3%e0%b2%95%e0%b2%a4%e0%b3%86-%e0%b2%9a%e0%b2%b0%e0%b3%8d%e0%b2%9a%e0%b3%82-%e0%b2%9f%e0%b2%bf%e0%b2%b6%e0%b3%8d%e0%b2%af%e0%b3%82-%e0%b2%aa%e0%b3%87/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

00320. ಸಣ್ಣ ಕಥೆ: ಹತ್ತು ಡಾಲರಿನ ಸುತ್ತ…


ಸಣ್ಣ ಕಥೆ:
00320. ಹತ್ತು ಡಾಲರಿನ ಸುತ್ತ…
_________________________

‘ಅಬ್ಬಾ! ಈ ಅದ್ದೂರಿ ರೂಮಿಗೆ ದಿನವೊಂದಕ್ಕೆ ಮುನ್ನೂರು ಡಾಲರ್ ಬಾಡಿಗೆಯೆ ?’ ಎಂದು ಬೆರಗಿನಿಂದ ಸುತ್ತಲು ದಿಟ್ಟಿಸಿದ ಲೌಕಿಕ. ಚಿಕಾಗೊದಲ್ಲಿನ ಪ್ರತಿಷ್ಠಿತ ಹೋಟೆಲೊಂದರ ದುಬಾರಿ ವೆಚ್ಚದ ಆ ಕೊಠಡಿಯ ಒಪ್ಪ ಒರಣಭರಿತ ವೈಭವೋಪೇತ ಅಲಂಕರಣವೆ ದಂಗು ಬಡಿಸುವಂತಿತ್ತು. ಎಲ್ಲವೂ ಅಚ್ಚುಕಟ್ಟು ಮಾತ್ರವಲ್ಲದೆ ಅತೀವ ಶಿಸ್ತು, ಮೇಲ್ವರ್ಗದ ಅಭಿರುಚಿಗಳ ಅಭಿವ್ಯಕ್ತಿಯ ಪ್ರತೀಕದಂತಿತ್ತು. ತಾನಿರುವ ಮೂರು ರಾತ್ರಿಗಳ ತಂಗುವಿಕೆಗೆ ಆ ವಿಶಾಲ, ವೈಭವಪೂರ್ಣ ತಾಣವೇಕೆ ಬೇಕಿತ್ತು, ಬರಿ ಕಾಲು ಚಾಚಿ ಮಲಗಲಿಕ್ಕೆ ಸಾಧ್ಯವಿರುವ ಪುಟ್ಟ ಹೋಟೆಲು ರೂಮೆ ಸಾಕಿತ್ತಲ್ಲವೆ ? ಎನಿಸಿ ಯಾಕೊ ಮುಜುಗರವೂ ಆಯ್ತು. ಆದರೆ ಕಂಪೆನಿಯ ಬಿಜಿನೆಸ್ ಟ್ರಿಪ್ಪಿನ ಸಲುವಾಗಿ ಜಾಗತಿಕ ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ಬಂದ ಎಲ್ಲರೂ ಅದೇ ಹೋಟೆಲಿನಲ್ಲೆ ಇರಬೇಕೆಂದು ತಾಕೀತು ಮಾಡಿದ್ದ ಕಾರಣ ಲೌಕಿಕನೂ ಅಲ್ಲೆ ಇರಬೇಕಾಗಿ ಬಂದಿತ್ತು. ಅಷ್ಟು ದೊಡ್ಡ ಜಾಗಗಳಲಿದ್ದು ಅನುಭವವಿಲ್ಲದ ಕಾರಣಕ್ಕೊ ಏನೊ ‘ಆ ಪರಿಸರದಲ್ಲಿ ಹೇಗೆ ವರ್ತಿಸಬೇಕೊ, ಯಾವ ಯಾವ ಬಗೆಯ ಮುಖವಾಡಗಳನ್ನು ಹಾಕಬೇಕೊ ಹೇಗೊ ?’ ಎನ್ನುವ ಆತಂಕವೂ ಜತೆಗೆ ಸೇರಿಕೊಂಡು ಮುಜುಗರದ ಅಸಹನೆ ಹೇಳಿಕೊಳ್ಳಲಾಗದ ಚಡಪಡಿಕೆಯಾಗಿ ಮಾರ್ಪಾಡಾಗಿ ಆ ನಿರಾಳ ವಾತಾವರಣದಲ್ಲೂ ಕಂಗಾಲಾಗತೊಡಗಿತ್ತು ಲೌಕಿಕನ ಮನ…..

Click the link below to read the full story: https://nageshamysore.wordpress.com/00320-%e0%b2%b8%e0%b2%a3%e0%b3%8d%e0%b2%a3-%e0%b2%95%e0%b2%a5%e0%b3%86-%e0%b2%b9%e0%b2%a4%e0%b3%8d%e0%b2%a4%e0%b3%81-%e0%b2%a1%e0%b2%be%e0%b2%b2%e0%b2%b0%e0%b2%bf%e0%b2%a8-%e0%b2%b8%e0%b3%81/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com