00330. ಜ್ಞಾನ ಯಾನ, ಅನುಭವ ಘನ..!


00330. ಜ್ಞಾನ ಯಾನ, ಅನುಭವ ಘನ..!
_____________________________

ಪುಸ್ತಕ ಮಸ್ತಕಕೇರಿಸಿ
ಹೊತ್ತು ಮೆರೆಸಿದೆ ಸುತ್ತಿ
ಭಟ್ಟಿ ಇಳಿದೀತೆ ತಳಕೆ ?
ತಲೆಯೊಳಗಿನ ಬುಡಕೆ ||…..

(To read the full poem please click on this page link : https://nageshamysore.wordpress.com/00330-%e0%b2%9c%e0%b3%8d%e0%b2%9e%e0%b2%be%e0%b2%a8-%e0%b2%af%e0%b2%be%e0%b2%a8-%e0%b2%85%e0%b2%a8%e0%b3%81%e0%b2%ad%e0%b2%b5-%e0%b2%98%e0%b2%a8/)
Thanks and best regards,

Nagesha MN 

00329. ವರ್ಣಮಾಲಾಕ್ಷರ ಲಹರಿ: ಚಂಡಮಾರುತ ಪ್ರಕೋಪ


00329. ವರ್ಣಮಾಲಾಕ್ಷರ ಲಹರಿ: ‘ಚಂಡಮಾರುತ ಪ್ರಕೋಪ’

_________________________________________________]

ಸುಮಾರು 2013 ರ ಆರಂಭದಲ್ಲಿ ಒಂದು ದಿನ ಸಂಜೆ ಹೀಗೆ ಏನೊ ಓದುತ್ತಾ, ಬರೆಯುತ್ತಾ ಕುಳಿತಿದ್ದೆ – ಒಂದೆ ಸಮನೆ ಸುರಿಯುತ್ತಿದ್ದ ತಣ್ಣಗಿನ ಮಳೆಯ ಸದ್ದಿನ ಜತೆಗಿನ ನೀರವ ಮೌನದ ನಡುವೆ. ಆ ಮಳೆ ಎರಡು ದಿನದಿಂದ ಚಂಡಿ ಹಿಡಿದವರಂತೆ ಹೊಡೆಯುತ್ತಲೆ ಇತ್ತು – ಯಾವುದೊ ತೈಪೂನ್ / ಚಂಡಮಾರುತದ ಫಲಿತವಾಗಿದ್ದ ಕಾರಣ. ಆ ಗಳಿಗೆಯಲ್ಲಿ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಏನೊ ಕಾರಣಕ್ಕೆ ವೀಕ್ಷಿಸುತ್ತಿದ್ದೆ. ಅದೇನು ವಯಸಿನ ಫಲವೊ ಅಥವಾ ಮರೆಗುಳಿತನವೊ – ಆಗಾಗ ಕನ್ನಡ ಸ್ವರ ಮತ್ತು ವ್ಯಂಜನಾಕ್ಷರಗಳ ಅನುಕ್ರಮಣಿಕೆಯಲ್ಲಿ ಗೊಂದಲ ಮೂಡಿ ಸಂಶಯ ಹುಟ್ಟಿಬಿಡುವುದರಿಂದ, ಅನುಮಾನವಾದಾಗೆಲ್ಲ ಈ ಪುಟ ತೆರೆದು ನೋಡುವ ಅಭ್ಯಾಸ. ಆ ದಿನವೂ ಅದೇ ಕಾಯಕದಲ್ಲಿ ನಿರತನಾಗಿದ್ದೆ. ಆಗ ಇದ್ದಕ್ಕಿದ್ದಂತೆ ಅರೆ ತೆರೆದ ಕಿಟಕಿಯ ಸಂದಿನಿಂದ ಎರಚಲಾಗಿ ಹನಿಗಳ ಜೊಂಪೆಯೊಂದು ಆ ಹೊತ್ತಿನ ಗಾಳಿಯ ರಭಸಕ್ಕೊ ಏನೊ – ತೂರಿ ಒಳಬಂದು ಕೈಲಿ ಹಿಡಿದ ಪುಸ್ತಕವನ್ನೆಲ್ಲ ಒಂದೆ ಏಟಿಗೆ ಒದ್ದೆಯಾಗಿಸಿಬಿಟ್ಟಿತು. ಆಗ ತೆರೆದಿದ್ದ ಪುಟದಲ್ಲಿದ್ದ ವರ್ಣಮಾಲೆಯ ಅಕ್ಷರಗಳು ಒದ್ದೆಯಾಗಿ ಕಲಸಿಹೋಗಿ, ಹಾಳೆ ಪೂರ್ತಿ ಮುದುರಿ ನಶಿಸತೊಡಗಿದಾಗ ಕನಿಷ್ಠ ಮುಂದಿನ ಸಾರಿಯ ಬಳಕೆಗೆ ಇರಲಿ ಎಂದುಕೊಂಡು, ಆ ಅಕ್ಷರಗಳನ್ನೆಲ್ಲ ಅದೇ ಕ್ರಮದಲ್ಲಿ ನಕಲು ಮಾಡಿಡತೊಡಗಿದೆ (ಸಿಂಗಪುರದಲ್ಲಿ ಬೇಕೆಂದಾಗ ಕನ್ನಡ ಪುಸ್ತಕ ಸಿಗಬೇಕಲ್ಲ ? ಸದ್ಯಕ್ಕೆ ಒಂದು ತಾತ್ಕಾಲಿಕ ಪ್ರತಿಯಾದರು ಇರಲಿ ಅನ್ನುವ ಕಾರಣಕ್ಕೆ!)…….

(Read the rest of the article in the page link below :   https://nageshamysore.wordpress.com/00329-%e0%b2%b5%e0%b2%b0%e0%b3%8d%e0%b2%a3%e0%b2%ae%e0%b2%be%e0%b2%b2%e0%b2%be%e0%b2%95%e0%b3%8d%e0%b2%b7%e0%b2%b0-%e0%b2%b2%e0%b2%b9%e0%b2%b0%e0%b2%bf-%e0%b2%9a%e0%b2%82%e0%b2%a1%e0%b2%ae%e0%b2%be/ )

Thanks and best regards,

Nagesha MN