00474. ಮನುಜ ದೇಹದ ನವದ್ವಾರಗಳು


00474. ಮನುಜ ದೇಹದ ನವದ್ವಾರಗಳು
___________________________

ನಮಗರಿವಿಲ್ಲದ ಹಾಗೆ ನಮ್ಮ ದೈನಂದಿನವನೆಲ್ಲಾ ಸಂಭಾಳಿಸೊ ಎಷ್ಟೊ ಅಂಗಗಳು, ನಮ್ಮ ದೇಹವನ್ನು ಕಾಯುವ ಪರಿಯೆ ಸೋಜಿಗ. ಇಲ್ಲಿ ದ್ವಾರ ರೂಪದಲ್ಲಿ ಒಳಗೊ, ಹೊರಗೊ ಅಥವ ಎರಡನ್ನು ಮಾಡುವ ಒಂಭತ್ತು ಅಂಗಗಳನ್ನು ಹಿಡಿದಿಡುವ ಪ್ರಯತ್ನ – ಅವುಗಳ ಕಾರ್ಯ ವೈಖರಿಯ ಜತೆಗೆ…

ನವನವೀನ ತೆರೆತೆರೆ ನವ ದ್ವಾರ..
_____________________________

ನವರತ್ನ ನವಧಾನ್ಯ ನವಗ್ರಹಗಳಾ ತವರ
ನವದ್ವಾರಗಳ ಕುತೂಹಲಕ್ಹುಟ್ಟಿತೀ ಪ್ರವರ
ದ್ವಾರಗಳೊಂಭತ್ತು ಮನುಜ ದೇಹದ ಸ್ವತ್ತು
ಅದರಲಿ ಏಳ್ಹೊತ್ತಾ ತಲೆ ಬುರುಡೆಯಲಿತ್ತು ||

ಕಣ್ಣೆ ಸಂಪತ್ತು ಮೊದಲೆರಡು ದ್ವಾರದ ತಾರೆ
ಬೆಳಕಿನ ನೂಲೇಣಿ ಒಳ ಹೊಕ್ಕು ಬಾರೊ ಸೀರೆ
ಅಂತಃಚಕ್ಷು ಧ್ಯಾನ ಭಾವನೆಯ ಹೊರಯಾನ
ಬಿಟ್ಟರೆ ಒಳ ಸೆಳೆಯುವ ದೃಷ್ಟಿ ಅಂತರ್ಯಾನ ||

ಕಂಗಳ ನೆರೆ ಹೊರೆ ಕರ್ಣಗಳೆರಡರ ಹೆದ್ವಾರ
ಶಬ್ದ ಜಗದ ಒಳ ಹರಿವಿಗೆ ತೆರೆದಾ ಹರಿಕಾರ
ಕೇಳಿದ್ದಾಲಿಸಿದ್ದೆಲ್ಲವಾಗಿ ಸಂವಹನದ ಗ್ರಹಣ
ಮನನವಾಗಲಿ ಬಿಡಲಿ ದತ್ತವಾಗಿ ಸಂಗ್ರಹಣ ||

ಕಿವಿಯಿರೆ ಮುಖದಾಚೀಚೆ ಕಣ್ಣಿರೆ ನೇರಕ್ಕೆ ಚಾಚೆ
ಎರಡರಾ ದ್ವಾರಗಳು ಸಾಕಷ್ಟು ದೂರಗಳಾಚೀಚೆ
ಐದಾರನೆ ನಾಸಿಕ ದ್ವಾರ ಬಲು ಹತ್ತಿರದ ಸಮರ
ಒಳಹೊರಗೆರಡು ಹರಿವಿನ ಜೀವ ಮೂಗಿನ ನೇರ ||

ಈ ಏಳನೆ ದ್ವಾರ ಹೊಟ್ಟೆ ಪಾಡಿನ ತುಂಬೋದರ
ಆಹಾರ ದೇಹದೊಳಗಿಳಿಸುವ ಕೊಳವೆಯ ದಾರ
ಬಾಯಿಂದಲೆ ಸುಖಾಗಮನ ಜೀರ್ಣಾಂಗ ರವಾನ
ನಾಲಿಗೆ ರುಚಿ ತೆವಲಿಗೆ ತಾವಿತ್ತು ಸಾಕುವ ತಾಣ ||

ಇನ್ನುಳಿದೆರಡು ದ್ವಾರ ಹೊರದಬ್ಬುವ ಕಸ ಸಾರ
ಮೂತ್ರ ವಿಸರ್ಜನೆಗೆ ದ್ರವಿಸಿದ ತ್ಯಾಜ್ಯಕೆ ಕಾತುರ
ಮಲ ವಿಸರ್ಜಿಸಲು ಘನ ತ್ಯಾಜ್ಯವು ಹೊರಬಾರಾ
ದೇಹದ ಗಬ್ಬೆಲ್ಲ ಹೊರಗಟ್ಟುವ ವಿಸ್ಮಯದ ದ್ವಾರ ||

ಅದ್ಭುತ ನವದ್ವಾರಗಳ ಕಥೆ ದೇವ ವಿನ್ಯಾಸ ಲತೆ
ಕಣ್ಣು ಕಿವಿ ಬಾಯಿ ಒಳಹರಿವೇಕಪಥ ದಾರಿ ಜತೆ
ಮೂಗೊಂದೆ ವಿಸ್ಮಯ ಗಾಳಿಗೆ ಒಳಗೂ ಹೊರಗೂ
ವಿಸರ್ಜನಾಂಗಕೂ ಬರಿ ಹೊರಹರಿವಿನ ಬುರುಗು ||

– ನಾಗೇಶ ಮೈಸೂರು

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

2 thoughts on “00474. ಮನುಜ ದೇಹದ ನವದ್ವಾರಗಳು”

 1. ಬೆಳಕಿನ ನೂಲೇಣಿ ಒಳ ಹೊಕ್ಕು ಬಾರೊ ಸೀರೆ.. wow! …
  ಮಣ್ಣಿಂದ ದೇಹ, ಕೃಷ್ಣ ಜೀವ ಕೊಟ್ಟಯೆಂದು ಮನಸಿನಾಳದಲ್ಲಿ ಬೀಡುಬಿಟ್ಟು ಒಂದು ಕುತೂಹಲ ಹುಟ್ಟಿಸಿತ್ತು… ಈಗ ನಿಮ್ಮ ಸಾಲುಗಳು ದೇಹ ಪ್ರಕೃತಿಯ ವಿಶೇಷತೆಯಲ್ಲಿ ಮತ್ತಷ್ಟು ಕುತೂಹಲವೆಬ್ಬಿಸಿತು..

  Liked by 1 person

  1. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಮನುಜ ದೇಹದ ವಿನ್ಯಾಸ-ರಚನೆಯೆ ಜಗತ್ತಿನ ಅತ್ಯದ್ಭುತ ತಾಂತ್ರಿಕ ಸೋಜಿಗಗಳಲ್ಲಿ ಮೊಟ್ಟ ಮೊದಲನೆಯದು ಎನ್ನಬಹುದು. ಎಷ್ಟೋ ಬಾರಿ ನನಗನಿಸಿದ್ದಿದೆ – ಸೃಷ್ಟಿ ರಹಸ್ಯವನ್ನು ಹುಡುಕಲು ಎಲ್ಲೆಲ್ಲೊ ಹುಡುಕಿಕೊಂಡು ಅಲೆಯಬೇಕಿಲ್ಲ, ಬರಿ ಮಾನವ ದೇಹದ ಒಳಹೊಕ್ಕು ನೋಡಿದರೆ ಸಾಕು ಎಂದು.

   ಇದೇ ರೀತಿಯ ಅಂಗಗಳಿಗೆ ಸಂಬಂಧಿಸಿದ ಮತ್ತೊಂದು ಮಕ್ಕಳ ಪದ್ಯ ಬರೆದಿದ್ದೆ – ಅದು ಇಲ್ಲಿದೆ ನೋಡಿ 🙂

   https://nageshamysore.wordpress.com/2016/01/27/00477-%e0%b2%a8%e0%b2%ae%e0%b3%8d%e0%b2%ae-%e0%b2%85%e0%b2%82%e0%b2%97%e0%b2%be%e0%b2%82%e0%b2%97%e0%b2%97%e0%b2%b3-%e0%b2%92%e0%b2%b3%e0%b2%a8%e0%b3%8b%e0%b2%9f/

   Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s