00529. ಬೆಳೆಯುತ್ತಾ ಕೂಸು..? 


00529. ಬೆಳೆಯುತ್ತಾ ಕೂಸು..?
_______________________________

  
(Picture from wikipedia – https://en.m.wikipedia.org/wiki/File:Niger_childhood_malnutrition_16oct06.jpg)

ಬೆಳೆಯುತ್ತಾ ಈ ಕೂಸು ?
ಬಾಲಿಶದಿಂದ ಪ್ರಾಯಶಃ ಪಕ್ವ ಪ್ರಬುದ್ಧ ಬುದ್ಧ
ಅದೇ ನೀರು ಗಾಳಿ ಮಣ್ಣು ಮತ್ತದೆ ಗೊಬ್ಬರ
ಜೊತೆಗಿಷ್ಟು ಜೀವನ ಪ್ರೀತಿ ತಬ್ಬಿಕೊಂಡ ಹತ್ತಿರ..

ಬೆಳೆಯೊ ಆಸೆ ಆಗಸದಾಚೆಗೆ
ಖಾಲಿ ಬಯಲ ಪಾರದರ್ಶಕದ ಅಪಾರ..
ಅಡೆತಡೆಯಿಲ್ಲ ಅಂತೆ ಚೌಕಟ್ಟಿಲ್ಲದ ಚಿತ್ರಪಠದೆ
ಗೊಂದಲ ಶಿಶುವನಾಥ ಕಳುವಾದಂತೆ ಸಂತೆ ಗದ್ದಲದೆ..

ಕಸಿವಿಸಿ ಮಗುವಿಗು ಯಾಕೊ
ಕಂಡಾಗೆಲ್ಲ ದಷ್ಠಪುಷ್ಠ ಮಕ್ಕಳ ಮೇಳ
ಕೃಶಕಾಯದೊಣಗಿದ ಬೆರಳಲಿ ಕೊರೆಗ್ಹುಡುಕಿ ಪ್ರಶ್ನೆ
ಉತ್ತರಕೆ ಬದಲು ಮೇಲ್ಹತ್ತಿದ ಸಂದಣಿ ನೂಕುನುಗ್ಗಲೂ..

ತನ್ನಂತಾನೆ ದಿಟ್ಟಿಸಿ ನೋಡಿ ಕೂಸು,
ಏನಿದೆ ಕಮ್ಮಿ? ಅರಿವಾಗದೆ ತೊಳಲಾಡಿ
ಎಲ್ಲೆಡೆಗ್ಹುಡುಕುತ ವಿಹ್ವಲ ಸೂತ್ರವದೇನು ತೋಚದೆ
ದಿಕ್ಕೆಟ್ಟಲೆಯುತ ಪಾತಾಳ ನೆಲ ಜಲ ಮುಗಿಲ ಕೊಳದಲಿ..

ಬೆಳೆದಿದ್ದೇನೊ ನೈಜ ಊದಿದಂತೆ ಹೊಟ್ಟೆ
ಕೃಶಕಾಯದ ಕೈಕಾಲು ಬೆಳೆದುದ್ದ ಹುಲ್ಲಂತೆ
ಸರ್ವಾಂಗೀಣ ಪ್ರಗತಿ ಮಾತಾಗುತಿದೆ ವೇದಿಕೆ ಗರಡಿ..
ಅಧಿಗಮಿಸೀತೆ ಕೂಸು ? ಬಲಿಪಶುವಾಗದೆ ಅವ್ಯವಸ್ಥೆಯ ನೀಗಿ..

– ನಾಗೇಶಮೈಸೂರು

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

2 thoughts on “00529. ಬೆಳೆಯುತ್ತಾ ಕೂಸು..? ”

 1. ದುರಂತ ವಾಸ್ತವಕೆ ಹಿಡಿದ ಕೈಗನ್ನಡಿ ಈ ಕವನ.
  ದೂರದ ಕತ್ತಲ ಖಂಡದ ಎಳೆ ಮಕ್ಕಳ ಜೊತೆಗೆ ಸೊರಗುತಿದೆ ನಮ್ಮದೇ ನೆಲದೆಷ್ಟೋ ಮೊಳಕೆ!

  ಸಾಲುಗಳಲಿ ಅಡಗಿರಯವ ವ್ಯಥೆ ಮನ ಕಲುಕಿತು. ಬುದ್ಧನಾಗುವತ್ತ ನಡೆಸಿಕೊಂಡೀತೇ ನಮ್ಮ ಸಮಾಜದ ಸಹೃದಯತೆ?

  ಒಬ್ಬ ಸರಕಿರುವ ಕವಿಯ ಪರಿಚಯ ಬ್ಲಾಗ್ ಮುಖೇನ ದೊರೆತದ್ದು ಎನ್ನ ಭಾಗ್ಯ.

  ಇನ್ನು ಓದುವಿಕೆ ನಿರಂತರವಾಗುತ್ತದೆ…

  Liked by 1 person

  1. ಬದರಿನಾಥರೆ ನಮಸ್ಕಾರ. ನಿಮ್ಮಂತ ಸಹೃದಯಿಗಳ ನಿರಂತರ ಓದುವಿಕೆಗೆ ಪಾತ್ರರಾಗುವ ಅದೃಷ್ಟ ಎಷ್ಟು ಜನಕ್ಕೆ ದೊರಕೀತು ? ನಿಮ್ಮ ಈ ಕಾಳಜಿಗೆ ನನ್ನ ಹೃದಯಪೂರ್ವಕ ನಮನಗಳು. ದೇಶದಿಂದ ಹೊರಗೆ ದೂರದೂರಿನಲ್ಲಿರುವಾಗ ಅನುಭವಿಸುವ ನಾಡು ನುಡಿಯ ತುಡಿತಕ್ಕೆ ಪದರೂಪ ಕೊಡಲು ಬ್ಲಾಗು ಆರಂಭಿಸಿದೆ. ಈಗದು ಜೀವನ್ಮಿತ್ರನೆನ್ನುವ ಹಾಗೆ ಆಗಿಬಿಟ್ಟಿದೆ.. ಕವನ, ಕಥೆ, ಲೇಖನ, ಬರಹ ಎಲ್ಲಕ್ಕು ಅದೇ ವೇದಿಕೆ.. ಇನ್ನು ಪ್ರಕಟಿಸದೆ ಉಳಿದುಕೊಂಡಿರುವ ಸುಮಾರು ಮೂರು, ನಾಲ್ಕು ಸಾವಿರ ಕವನಗಳನ್ನು ಪರಿಷ್ಕರಿಸಿ ಹಾಕಬೇಕಿದೆ – ಸಮಯ ಸಿಕ್ಕಾಗ. ಕನ್ನಡಮ್ಮನ ಸೇವೆಯ ಜೊತೆಗೆ ನಿಮ್ಮಂತಹ ಓದಿ, ಆಸ್ವಾದಿಸಿ ಮೆಚ್ಚುವವರ ಸಖ್ಯ ದೊರೆತರೆ – ಬರೆವವನಿಗೆ ಮತ್ತೇನು ಬೇಕು ಹೇಳಿ ? ನಿಮ್ಮ ಈ ಸದಭಿರುಚಿಗೆ ಅಭಿನಂದನೆಗಳು ಮತ್ತು ಹೃತ್ಪೂರ್ವಕ ಧನ್ಯವಾದಗಳು.. 😊

   Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s