00616. ಮತ್ತೆ ಹಾಯ್ಕುಗಳಲಿ


00616. ಮತ್ತೆ ಹಾಯ್ಕುಗಳಲಿ
____________________

(೦೧)
ಮೊಟ್ಟೆ ತಲೆಗೆ
ರಣಬಿಸಿಲೇ ಕೆಂಡ..
ಸೌರದಾಮ್ಲೆಟ್ಟು ! ||

(೦೨)
ಬಿಸಿಲ ಧಗೆ
ಖರ್ಚಿಲ್ಲದ ಇಂಧನ.
– ಮೊಬೈಲು ಖಾಲಿ ||

(೦೩)
ಮಾತಾಡಿ ಬಿಟ್ಟು
ಬಿಟ್ಟು ಬಿಟ್ಟು ಮಾತಾಡಿ
– ಜಗಳ ಬಿಡಿ.. ||

(೦೪)
ಕುರೂಪ ಖಳ
ಮುಚ್ಚಬೇಕಿದೆ ಖುದ್ದು
ರೂಪಾಯಿ ಜಳ ||

(೦೫)
ವರ-ದಕ್ಷಿಣೆ
ವಧು ಪ್ರಶ್ನೆಗುತ್ತರ
ವಧೆಗ್ಹತ್ತಿರ ||

(೦೬)
ಕಾಟಾಚಾರಕೆ
ಅಭಿನಂದಿಸೆ ಮಾತು
ಸಲಿಗೆ ಮಾಯ ||

(೦೭)
ನೋವಿನ ಲೆಕ್ಕ
ಇಡುವಾಗಲು ನಕ್ಕ
ನೆನಪೇ ಮುದ ||

(೦೮)
ದೂರ ನಿಂತರು
ನೋಡುಗರ ಕಣ್ಣಿಗೆ
ಹತ್ತಿರ ಕಾಣು ||

(೦೯)
ಬರೆದ ಮೌನ
ಬರೆಯದ ಮಾತಿಗೆ
ಯಾಕೊ ಮುನ್ನುಡಿ ||

(೧೦)
ಸಿಟ್ಟೇ ಬಾರದು
ಬಂದ ಸಿಟ್ಟೆಲ್ಲಾ ಪ್ರೀತಿ
ಅವಳ ಮೇಲೆ ||

– ನಾಗೇಶ ಮೈಸೂರು

00615. ಪ್ಲೆಸೆಂಟ್ ಸರ್ಪ್ರೈಸ್ !


00615. ಪ್ಲೆಸೆಂಟ್ ಸರ್ಪ್ರೈಸ್ !

ಇಂದು ಮೂರುವರ್ಷ ದಾಟಿದ ಸಂಭ್ರಮವನ್ನು ‘ಮನದಿಂಗಿತಗಳ ಸ್ವಾಗತ’ ತುಸು ವಿಶಿಷ್ಠವಾಗಿ ಆಚರಿಸಿಕೊಳ್ಳುತ್ತಿದೆ..!

ಕಾಕತಾಳಿಯವೆಂಬಂತೆ ನನ್ನ ಎರಡು ಬರಹಗಳು ನಿಲುಮೆಯಲ್ಲಿ ಮತ್ತು ರೀಡೂ ಕನ್ನಡದಲ್ಲಿ ಈ ದಿನವೇ ಪ್ರಕಟವಾಗಿವೆ. ಅದರ ಲಿಂಕುಗಳು ಈ ಕೆಳಗೆ 😊

೧. ಕಗ್ಗಕೊಂದು ಹಗ್ಗ ಹೊಸೆದು.. (ಕಗ್ಗದ ಮೇಲಿನ ನನ್ನ ಟಿಪ್ಪಣಿ)

ಕಗ್ಗಕೊಂದು ಹಗ್ಗ ಹೊಸೆದು..

೨. ಲಘು ಹರಟೆ: ಗುಬ್ಬಣ್ಣ ಇನ್ ‘ಎನ್ನಾರೈ ರಿಟರ್ನ್ & ಸ್ಮಾರ್ಟ್ ಸಿಟಿ’!
ಗುಬ್ಬಣ್ಣ ಇನ್ ‘ಎನ್ನಾರೈ ರಿಟರ್ನ್ & ಸ್ಮಾರ್ಟ್ ಸಿಟಿ’! (ಲಘು ಹರಟೆ)

ಕಾಕತಾಳಿಯವಾದರು ಇದೊಂದು ತರ ಪ್ಲೆಸೆಂಟ್ ಸರ್ಪ್ರೈಸ್ !😊  

   
– ನಾಗೇಶ ಮೈಸೂರು

ಗುಬ್ಬಣ್ಣ ಇನ್ ‘ಎನ್ನಾರೈ ರಿಟರ್ನ್ & ಸ್ಮಾರ್ಟ್ ಸಿಟಿ’! (ಲಘು ಹರಟೆ)


A new gubbaNNa episode in nilume today (24.03.2016) 😁😊

– ನಾಗೇಶ ಮೈಸೂರು

ಗುಬ್ಬಣ್ಣ ಅವತ್ಯಾಕೋ ತುಂಬಾ ‘ಖರಾಬ್ ಅಂಡ್ ಗರಂ’ ಮೂಡಿನಲ್ಲಿ ಮರಿ ಹಾಕಿದ ಬೆಕ್ಕಿನ ತರ ಬೀಟ್ ಹೊಡಿತಿದ್ದ ಲಿಟಲ್ ಇಂಡಿಯಾ ಒಳಗಿರೋ ಕರ್ಬಾವ್ ಸ್ಟ್ರೀಟಲ್ಲಿ.. ಅದೂ ಬೆಳ್ಳಂಬೆಳಿಗ್ಗೆ ಯಾರೂ ಓಡಾಡದೆ, ಬರಿ…

Source: ಗುಬ್ಬಣ್ಣ ಇನ್ ‘ಎನ್ನಾರೈ ರಿಟರ್ನ್ & ಸ್ಮಾರ್ಟ್ ಸಿಟಿ’! (ಲಘು ಹರಟೆ)