00630. ಇದೊಂತರ ಪ್ರೀತಿ ಜಗಳ…


00630. ಇದೊಂತರ ಪ್ರೀತಿ ಜಗಳ…
__________________________   

 
ಯಾಕೆ ಸುಮ್ನೆ ಫೈಟು ?
ನೀನೇನಲ್ಲ ಸ್ನೋ ವೈಟೂ
ಸುಂದ್ರಿ ಚಂದ್ರಿ ಎಲ್ಲಾ ಡೌಟು
ಬಾ ಕುಡಿಯೋಣ ಕಾಫಿ ಬೈಟು !

ನಿಂಜೊತೆಗೆಂತಾ ಫೈಟು
ಸೆಗಣಿ ಸರಸದ ರೂಟು
ಗುದ್ದಾಡಿದ್ರೂ ಗಂಧಾನೆ ಲೇಸು
ನಾನಾಗೋಲ್ಲ ನಿಂಜೊತೆ ಕ್ಲೋಸು !

ಬಾರಮ್ಮಾ ಸಾಕು ಬಿಂಕ
ನಾನೇನಲ್ಲ ಬುದ್ಧಿಲಿ ಮಂಕ
ನಂದೇನಲ್ಲ ಬಿಕನಾಸಿ ಶಂಖ
ಹೊಲಗದ್ದೆ ಆಸ್ತಿ ಪಾಸ್ತಿಗಿಲ್ಲ ಲೆಕ್ಕಾ !

ಬಿಡು ಸಾಕು ರಾಜಕುಮಾರ
ಹತ್ತರಲ್ಲನ್ನೊಂದಾಗಿ ಪ್ರವರ
ಇರೋ ಆಸ್ತಿ ಹಂಚೆ ಮಕ್ಕಳ ಪಾಲ
ತಲೆಗೊಂದೊಂದಿಷ್ಟು ಮಿಕ್ಕುತ್ತೆ ಸಾಲ !

ತೆಗಿಬೇಡ್ವೆ ಮಾನ ಮನೆಹಾಳಿ
ದುಡುದ್ಹಾಕ್ತೀನಿ ಗಟ್ಟಿ ರಟ್ಟೆ ಶಕ್ತೀಲಿ !
ಹಂಗನ್ನೊ ಮೂಳ ಜೊತೆಯಾಗ್ತೀನಿ
ಮಿಕ್ಕುಳ್ದಿರೊ ಬಾಳ ಬೆಳಕಾಗ್ತೀನಿ !!

– ನಾಗೇಶ ಮೈಸೂರು
(picture: http://baltimorepostexaminer.com/wp-content/uploads/CoupleFight-630×310.jpg)

00629. ಅದೆ ಬೇಸರ, ಅದೆ ಸಂಜೆ


00629. ಅದೆ ಬೇಸರ, ಅದೆ ಸಂಜೆ…
_____________________________

(೦೧)
ಅಗಲೆ ಮೌನ
ಅನುಭವಿಸೋ ಕ್ಷಣ
ಪ್ರಕ್ಷುಬ್ದ ಮನ ||

(೦೨)
ಅದೆ ಬೇಸರ
ಮತ್ತದೇ ಏಕಾಂತ
– ಹಾಯ್ಕು ಆಗುತ್ತಾ ?||

(೦೩)
ಕೂತು ಕಾರಲಿ
ವೇದನೆ ಅಗಣಿತ
– ಟ್ರಾಫಿಕ್ಕ ದುಃಖ ||

(೦೪)
ಹಚ್ಚೆ ಹಾಕುತ
ರಚ್ಚೆಯ ಹಿಡಿಸಿತ್ತು
– ಚುಚ್ಚುವ ನೋವು ||

(೦೫)
ಅಮ್ಮಾ ಯಾತನೆ
ಹಚ್ಚೆ ಹಾಕೋ ನಮೂನೆ
– ಜ್ವರದ ಬೇನೆ ||

(೦೬)
ತೋತಾಪುರಿಯ
ಸಿಹಿ ಚಪ್ಪರಿಕೆಗೆ
– ಹುಳಿ ಕಣ್ಮುಚ್ಚು ||

(೦೭)
ಏಪ್ರಿಲ್ ಬೇಗೆ
ಪೂಲಾಗಿದೆ ಬೇಸಿಗೆ
– ಬಿಸಿ ಹಾಸಿಗೆ ||

(೦೮)
ಜನವರಿಗೆ
ಡಿಸೆಂಬರು ಕೊರಗೆ
– ಚಳಿ ಬಿಕ್ಕಿತ್ತು ||

(೦೯)
ಮೂಲ ಬೆಲೆಗೆ
ಸೇರಿಸಿದೆ ತೆರಿಗೆ
– ಆಸೆ ಹೆರಿಗೆ ! ||

(೧೦)
ನವಜೀವನ
ತಲೆ ಕೆಳಗಾದರು
– ನವಜೀವನ ||

– ನಾಗೇಶ ಮೈಸೂರು