00633. ಹಾಯ್ಕು ೦೪.ಏಪ್ರಿಲ್.೨೦೧೬ (೦೨)


00633. ಹಾಯ್ಕು ೦೪.ಏಪ್ರಿಲ್.೨೦೧೬ (೦೨)
__________________________________

(೦೧)
ಸಂಪಿಗೆ ಮೂಗು
ಮೊಗ್ಗು ಅರಳಲಿಲ್ಲ.
– ಗಿಣಿ ಮೂ(ಗು)ತಿ..

(೦೨)
ಕೆಸರು ಬೇಡ
ಕಮಲ ನೋಟ ಸಾಕು
– ಕೆಂಗಣ್ಣ ಕೃಷಿ ||

(೦೩)
ಮನ ಬೇಸಾಯ
ಕಣ್ಣೋಟ ವಿನಿಮಯ
– ಪರವಶ ನಾ !

(೦೪)
ಮುನಿಸ ನೋಟ
ಕರಿ ದ್ರಾಕ್ಷಿ ತಿರುಳು
– ಬಿಳಿ ತಿನಿಸೆ !

(೦೫)
‘ಪರ’ವಶ ನಾ
ನಿರ್ಲಕ್ಷಿಸೆ, ಪರರ
ಕರವಶ ನಾ !

(೦೬)
ಬಾಳ ದೌರ್ಭಾಗ್ಯ
ಸರಿ ಜೋಡಿ ಕಂಡಾಗ
– ಆಗಲೇ ತಡ!

– ನಾಗೇಶ ಮೈಸೂರು

00632. ಹಾಯ್ಕು ೦೪.ಏಪ್ರಿಲ್.೨೦೧೬ (೦೧)


00632. ಹಾಯ್ಕು ೦೪.ಏಪ್ರಿಲ್.೨೦೧೬ (೦೧)
__________________________

(೦೧)
ಎಲೆ ಕೋಸಿನ
ನಯವೇ ಕುಳು ಕುಳು
– ನವಿರು ಕೆನ್ನೆ.

(೦೨)
ಹೊಗಳುತಿದೆ
ಬರಿ ಕವಿತೆ ಮಾತ್ರ
– ವಯಸಾಯಿತು.

(೦೩)
ಕಿಲಕಿಲನೆ
ಮಾತಲಿ ನಗೆ ಸೋರಿ
– ಹಕ್ಕಿಯ ದನಿ.

(೦೪)
ಹಕ್ಕಿಯ ಹಾಡು
ಪಂಜರವಿಟ್ಟಾ ಗಳಿಗೆ
– ಹಕ್ಕಿನ ಪಾಡು..

(೦೫)
ಗಂಡುಭೀರಿ
ಮುಸಿಮುಸಿ ತನ್ನಲ್ಲೇ
– ನಕ್ಕಿದ್ದೇಕಂತೊ ?

(೦೬)
ಸ್ವಲ್ಪ ವಿನಯ
ನಯ ಭಯ ಕಂದಾಯ
– ವಧು ಪರೀಕ್ಷೆ ..

– ನಾಗೇಶ ಮೈಸೂರು