00638.ಯುಗಾದಿಗಿನ್ನೊಂದಷ್ಟು ಹಾಯ್ಕು (೦೨)


00638. ಯುಗಾದಿಗಿನ್ನೊಂದಷ್ಟು ಹಾಯ್ಕು (೦೨)
___________________________________

(೦೧)
ಕಾಲ ನಿಲಿಸಿ
ಹೊಕ್ಕರೆ ನಿಲುಮೆಗೆ
– ಸುದ್ದಿಗುಗಾದಿ..

(೦೨)
ಹೋಳಿಗೆ ಸಾರು
ಒಬ್ಬಟ್ಟು ತಟ್ಟರಾರು
– ಅಮ್ಮನ ಬಿಟ್ಟು..

(೦೩)
ಗಂಡ ಹೆಂಡತಿ
ದುಡಿವ ಜೋಡೆತ್ತಿಗೆ
– ಹಬ್ಬಕೆ ರಜೆ..!

(೦೪)
ಹಬ್ಬದ ಸ್ವರ
ತಿಂದುಣ್ಣುವುದಲ್ಲವೊ
ಕೊಂಡು ತಂದಿದ್ದು !

(೦೫)
ಸೇರಬಾರದೆ ?
ಬಂಧು ಬಳಗ ಎಲ್ಲಾ..
ಹಬ್ಬಕು ಇಲ್ಲಾ!

– ನಾಗೇಶ ಮೈಸೂರು

00637.ಯುಗಾದಿಗಿನ್ನೊಂದಷ್ಟು ಹಾಯ್ಕು (೦೧)


00637.ಯುಗಾದಿಗಿನ್ನೊಂದಷ್ಟು ಹಾಯ್ಕು (೦೧)
_____________________________

(೦೧)
ಹೊಲಿಯಲ್ಹಾಕಿ
ಬೇಡ ದರ್ಜಿಯ ಮರ್ಜಿ
– ಸಿದ್ದ ಉಡುಪು !

(೦೨)
ಇಲ್ಲಾ ಸಂಭ್ರಮ
ಹಬ್ಬದ ಬೆಳಗಿಗೂ
– ಕೊಡದ ಬಟ್ಟೆ!

(೦೩)
ಕಡೆಗೂ ರಾತ್ರಿ
ಕೊಟ್ಟ ದರ್ಜಿ ಉಡುಪು
– ಹಬ್ಬವಾಯ್ತಲ್ಲ!

(೦೪)
ಊರಿಗೆ ಹಬ್ಬ
ತಪ್ಪದ ತೂಕಡಿಕೆ
– ದರ್ಜಿಯಂಗಡಿ..

(೦೫)
ವೃತ್ತಿ ಕಾಡಿರೆ
ಪ್ರವೃತ್ತಿ ಕಂಗಾಲಲಿ
– ಕಳೆದು ವರ್ಷ ..

– ನಾಗೇಶ ಮೈಸೂರು

00636. ಯುಗಾದಿ ಹಾಯ್ಕುಗಳು


00636. ಯುಗಾದಿ ಹಾಯ್ಕುಗಳು
___________________

(೦೧)
ಬಂತು ಯುಗಾದಿ
ಬೇವು ಬೆಲ್ಲ ತಗಾದೆ
– ಸಿಕ್ಕದ ಲೆಕ್ಕ !

(೦೨)
ಬೇವಿನ ಹೂವ್ವ
ವಾರ್ಷಿಕ ಸಂಭ್ರಮಕೆ
– ಬೆಲ್ಲದ ನಗು ..!

(೦೩)
ಹಬ್ಬದುಡುಗೆ
ಹಬ್ಬದಡಿಗೆ ಭರ್ಜರಿ..
– ಕೊಂಡೆಲ್ಲ ತಂದು !

(೦೪)
ಯಾರಿಗೆ ಬೇಕು
ಯುಗಾದಿ ಆಶೀರ್ವಾದ ?
– ಬಿಡುವೆ ಇಲ್ಲ..

(೦೫)
ಶುಭ ಕೋರಿಕೆ
ಉಳಿತಾಯ ಖರ್ಚಲಿ
– ‘ಇ’ವಿನಿಮಯ !

(೦೬)
ದೂರದೂರಲಿ
ಅವರವರ ಹಬ್ಬದೆ ;
– ಹೆತ್ತವರೆಲ್ಲಿ ?

(೦೭)
ಮಾವಿನ ಎಲೆ
ಬೇವಿನೆಲೆ ತೋರಣ.
– ಹಳತ ಮೌನ..

(೦೮)
ಬಿರು ಬಿಸಿಲು
ಹೊಸತಿಗೆ ಹೊಸಿಲು
– ಮುನ್ನೆಚ್ಚರಿಕೆ !

(೦೯ )
ಹಬ್ಬದ ದಿನ
ಎಲ್ಲರ ದೋಸೆ ತೂತು
– ಒಂದೇ ಅಡಿಗೆ !

(೧೦)
ಕ್ಷುಲ್ಲಕ ನರ
ವರ್ಷದಲೆಂತ ಯುಗ ?
– ಹುಚ್ಚು ಬಯಕೆ ||

– ನಾಗೇಶ ಮೈಸೂರು