00643. ಬನ್ಬುಡ್ರಪ್ಪ ಒಂದ್ಸಾರಿ – ವರ್ಷದುಡುಕು..!


00643. ಬನ್ಬುಡ್ರಪ್ಪ ಒಂದ್ಸಾರಿ – ವರ್ಷದುಡುಕು..!
________________________________

ನಾಳೆ ಸ್ವಲ್ಪ, ಜಾಸ್ತಿ ಬನ್ರಪ್ಪಾ
ವರ್ಷದುಡುಕು, ಕೈ ಕೊಡಬ್ಯಾಡ್ರಪ್ಪ
ಕಷ್ಟ ಪಟ್ಟು ಕಟ್ಟಿದ ಸೈಟ್ರಣ್ಣ
ಓದ್ದೇ ಇದ್ರೂನು, ಕಣ್ಹಾಯ್ಸಿ ಹೋಗ್ರಣ್ಣಾ..😜

ಪುಕ್ಸಟ್ಟೆ ಸರಕು ತೊಕ್ಕೊಳ್ರಣ್ಣ
ಕಥೆ ಕವಿತೆ ಲೇಖನ ನೀವ್ಕೇಳಿದ್ದಣ್ಣ
ಹಾಸ್ಯ ಅಪಹಾಸ್ಯ ಆಟಕ್ಕುಂಟು
ನೀವೋದಿದ್ರುಂಟು ಇಲ್ಲ ಲೆಕ್ಕಕ್ಕಿಲ್ಲ ! 🙏

ಮಾರ್ಕೆಟ್ಟಲಿ ವೀಕು ತಾಕತ್ತಿಲ್ರಣ್ಣ
ಕನ್ನಡ ಒಂದೆ ನಡೆಸೋ ಬಲವಣ್ಣ
ಬಂದ್ ನೋಡಿ ಸಾಕು ಮೂಗ್ಬಸವಣ್ಣ
ಖುಷಿಯಾಗಾಡ್ಸುತ್ತೆ ಕೋಲೆ ತಲೆಯನ್ನ ! 😇

ಹಾಳ್ನಂಬ್ಕೆ ವ್ಯಾಪಾರ ಹಂಗೇನ್ರಣ್ಣ
ವರ್ಷ್ದುಡುಕಲ್ಬಂದ್ರೆ ಮತ್ಬರ್ತಾರಣ್ಣ
ಹಂಗಂಕೊಂಡ್ ಬನ್ನಿ ಹೆಜ್ಜೆ ಗುರುತು 🐾
ಉಳ್ಸೋದ್ರೆ ಸಾಕು ಹೋದ್ರೂನು ಮರೆತು 😁

ಹೆಸ್ರಲ್ಲೆನಂತ ಮೂಗ್ ಮುರಿಬ್ಯಾಡ್ರಣ್ಣ
ಮನದಿಂಗಿತ ಸ್ವಗತ ಮರಿಬ್ಯಾಡ್ರಣ್ಣ
ಕಾಡಲ್ಲ ನಾಳೆ ಕಳೀತಂದ್ರಾಯ್ತು
ನಾಳಿದ್ದಿಂದ ಹೊಡ್ಯೋದೆ ನೊಣ ಕೂತು ! 💤🕸

– ನಾಗೇಶ ಮೈಸೂರು

ಮರೆತ ಮಾತು : ಸುಮ್ಮನೆ ಹಾಸ್ಯಕ್ಕೆ ಬರೆದದ್ದು , ಬಲವಂತ ಕರಿತಾನಲ್ಲ ಅಂತ ಬೇಜಾರು ಬ್ಯಾಡ.. ಆದ್ರೂ ಕುತೂಹಲಕ್ಕೆ ಏನ್ ಸೈಟು, ಎಲ್ಲಿದೆ ? ಅಂತ ಅನುಮಾನ ಬಂದ್ರೆ, ಸುಮ್ನೆ ಈ ಲಿಂಕನ್ನ ಒಂದ್ಸಲ ಜಿಗುಟಿ ನೋಡಿ 😎 (nageshamysore.wordpress.com)

00642. ಯುಗಾದಿ ಪುರುಷ – ಪ್ರಕೃತಿ


00642. ಯುಗಾದಿ ಪುರುಷ – ಪ್ರಕೃತಿ
__________________________

  
(Picture source: https://encrypted-tbn2.gstatic.com/images?q=tbn:ANd9GcShbYCz-46GKRCwefKjoUOnBUwk0pMvjcAmGT1yqr6QVGLKcGXZ5w)

ಬಾರಯ್ಯ ಯುಗಾದೀ ಪುರುಷ
ಬರಮಾಡಿಕೊಂಡೇವು ಪರುಷ
ಬಂದುಬಿಡು ಕಿಲಕಿಲ ಕಲರವ
ತುಂಬಿಕೊಳುವಂತಿಂಚರ ಕಾವ || ಬಾರಯ್ಯ ||

ಖಾಲಿ ರೆಂಬೆ ಕೊಂಬೆ ಟೊಂಗೆ ಟಿಸಿಲು
ಹರಿದು ಹಂಚಿ ರಂಗೋಲಿ ಹೊಸಿಲು
ತಳಿರು ತೋರಣ ಮಾವು ಬೇವು ಬೆಪ್ಪ
ಸುಮ್ಮನೆ ಕಟ್ಟಿದ್ದಲ್ಲ ತಾ ಬೆಲ್ಲ ಜತೆ ತುಪ್ಪ || ಬಾರಯ್ಯ ||

ನೋಡಿಲ್ಲಿ ಸಡಗರ ಮನ ಸಾಕ್ಷಾತ್ಕಾರ
ಬಿರುಸು ಬಿಸಿಲಿಗಿಹ ಚಟದಹಂಕಾರ
ಏರುಬೆಲೆ ನಿಲುಕದಿದ್ದರು ನಭದೆತ್ತರದೆ
ನೆರೆದಿಹೆವಿಲ್ಲಿ ಋತು ಬದಲಿಸೆ ಭರದೆ || ಬಾರಯ್ಯ ||

ಸುಮ್ಮನೆ ಬಿಡು ಮಾತದು ಮತ್ತೆ ಬರದು
ಕಾಲವಾದ ಕಾಲದ ನೆನಪಷ್ಟೆ ಬರಿಸದ್ದು
ವಾಸ್ತವದಲನುಭವಿಸೆ ದೂರಿದ್ದ ಮನಸತ್ತ್ವ
ಭೂತವನಾರಾಧಿಸುವ ಹಳತಿನಾ ಮಹತ್ವ || ಬಾರಯ್ಯ ||

ಮುನಿಯದಿರು ಪ್ರಕೃತಿಮಾತೆ ನೀ ಜೊತೆ
ಪುರುಷನಿದ್ದೆಡೆ ಬರುವ ಸಹಜದ ಮಾತೆ
ಬರಲೊಲ್ಲದಿರೆ ಪುರುಷದ ಮನಸಿನೋಲೈಕೆ
ಮಾಡಿ ಕರೆತರುವಾ ಹೊಣೆ ನಿನ್ನ ಹೊಣೆಗಾರಿಕೆ || ಬಾರಯ್ಯ ||

– ನಾಗೇಶ ಮೈಸೂರು

ಯುಗಾದಿಯ ತಗಾದೆ


‘ಯುಗಾದಿ ತಗಾದೆ ‘ ಈ ದಿನದ ನಿಲುಮೆಯಲ್ಲಿ ! ಥ್ಯಾಂಕ್ಯೂ ನಿಲುಮೆ ಟೀಮ್ 😊👍

– ನಾಗೇಶ್ ಮೈಸೂರು ಗುಬ್ಬಣ್ಣ ‘ಗುರ್ರ್’ ಎಂದು ಏದುಸಿರಲ್ಲೆ ಭುಸುಗುಟ್ಟುತ್ತ, ಧುಮುಗುಟ್ಟುತ್ತಲೆ ಮನೆಯೊಳಗೆ ಕಾಲಿಟ್ಟಾಗ ಇಂದೇಕೊ ಅಪರೂಪಕ್ಕೆ ಗುಬ್ಬಣ್ಣನಿಗು ಕೋಪ ಬಂದಿರುವಂತಿದೆಯಲ್ಲ ಅನಿಸಿ ಕುತೂಹಲವಾಯ್ತು. ಸಹನೆಯಲ್ಲಿ ಸಾಧು ಸಂತರ …

Source: ಯುಗಾದಿಯ ತಗಾದೆ