00655. ರಾಮನವಮಿ ಹಾಯ್ಕು (೦೧)


00655. ರಾಮನವಮಿ ಹಾಯ್ಕು (೦೧)
___________________________

  
(picture from: http://www.wikidates.org/hindu-holidays/images/Ram-Navami.jpg)

(೦೧)
ರಣ ಬಿಸಿಲು 
ನೀರ್ಮಜ್ಜಿಗೆ ಪಾನಕ
– ಜೀವಕೆ ತಂಪು..

(೦೨)
ಯಾಕೆ ಬೇಕೇಳಿ
ಬೇಡದ ರಾಮಾಯಣ
– ಸೀತೆಗೇ ಸಾಕು..

(೦೩)
ಸೀತಾ ರಾವಣ
ಇರದ ರಾಮಾಯಣ
– ಬರೆಯ ಜಾಣ !

(೦೪)
ಅಪ್ಪಾ ರಾವಣ
ಜನಕನ ಮಗಳು
– ಕೈಗೆ ಸಿಗಳು !

(೦೫)
‘ಶಿವ’ ಧನುಸ್ಸು
ಮುರಿದೆತ್ತಿದ ರಾಮ
– ‘ಲಯ’ ರಾವಣ  !

(೦೬)
ಜಾಗರೂಕತೆ
ರಾಮಾಯಣದ ನಾಡು
ರಾವಣರುಂಟು !

(೦೭)
ಸೀತೆಯ ಪುಣ್ಯ 
ಹೊತ್ತೊಯ್ದವ ರಾವಣ
– ಕೂರಿಸಿ ‘ಬಿಟ್ಟ’ !

(೦೮)
ಸ್ವಯಂವರದೆ
‘ಸ್ವಯಂ’ವರ ಎಲ್ಲಿದೆ ?
– ಗೆದ್ದರೆ ಹಾರ ..

(೦೯)
ರಾಮಬಾಣಕೆ
ನಾಟುವುದಷ್ಟೆ ಗುರಿ..
– ಕೊಟ್ಟ ಮಾತಿಗೆ.

(೧೦)
ಪಟ್ಟಾಭಿಷೇಕ
ಮಾಡಬಿಡಳು ಕೈಕೆ
– ಲೋಕ ಕಲ್ಯಾಣ..!

– ನಾಗೇಶ ಮೈಸೂರು