00656. ರಾಮನವಮಿ ಹಾಯ್ಕುಗಳು (೦೨)


00656. ರಾಮನವಮಿ ಹಾಯ್ಕುಗಳು (೦೨)
______________________________

ರಾಮನವಮಿಯ ಸಂಭ್ರಮ ಮುಗಿಯುವ ಹೊತ್ತಿಗೊಂದು ಹಾಯ್ಕು ಕಂತೆ 😊

(೦೧)
ರಾಮನ ಸೀತೆ
ಅಯ್ಯೋ ಪಾಪ ವನಿತೆ
– ಕಲಿಗಾಲದೆ!

(೦೨)
ರಾಮ ಪಾದುಕೆ
ಹೊತ್ತ ಭರತ ಘನ
– ಮುಟ್ಠಾಳತನ !

(೦೩)
ಪೆದ್ದ ಲಕ್ಷ್ಮಣ
ಬಿಟ್ಟು ಹೋದ ಊರ್ಮಿಳೆ
– ಸೀತೆಯಾಗಳು !

(೦೪)
ರಾವಣ ಕೆಟ್ಟ
ಶೂರ್ಪಿಣಿ ನಂಟು ಗಂಟು
– ಅಪಹರಿಸಿ !

(೦೫)
ಸೀತೆಯಿಂದಲ್ಲ
ರಾವಣ ಹತನಾಗಿದ್ದು
– ಶೂರ್ಪಿಣಿಯಿಂದ !

(೦೬)
ಮಾರುತಿ ರಾಯ
ರಾಮನ ಬಲವಾದ
– ಜೈವಿಕಾಯುಧ !

(೦೭)
ಸುರಸೆ ಸ್ವಾಹ
ನೆರಳನ್ನೇ ಸೆಳೆದು
– ಹನುಮ ಭಲಾ !

(೦೮)
ಲಂಕಿಣಿ ಕಾದ
ಲಂಕಾಪುರಾ ಸಮೃದ್ಧ
– ಲಂಕೇಶ ಬಿದ್ದ !

(೦೯)
ಜಯವಿಜಯ
ರಾವಣ ಕುಂಭಕರ್ಣ
– ಎಲ್ಲಿಂದೆಲ್ಲಿಗೆ !

(೧೦)
ಮಂಥರೆ ಕಥೆ
ಇರದಿದ್ದರೆ ವ್ಯಥೆ
– ನಿಕೃಷ್ಟ ನಾರಿ !

– ನಾಗೇಶ ಮೈಸೂರು

ನರಮಾನವನಾಗಿ ರಾಮನ ಜನುಮ 2/5


ನರಮಾನವನಾಗಿ ರಾಮನ ಜನುಮ 2 of 5 published in readoo Kannada on 15.04.2014..😊

ನರಮಾನವನಾಗಿ ರಾಮನ ಜನುಮ – 2

ನರಮಾನವನಾಗಿ ರಾಮನ ಜನುಮ (1/5)


ನರಮಾನವನಾಗಿ ರಾಮನ ಜನುಮ 1 of 5 published in readoo Kannada on 14.04.2016 

 ನರಮಾನವನಾಗಿ ರಾಮನ ಜನುಮ – 1 

ನೂರು ಸಾಲಿನ ಸರಳ (ಮಿನಿ) ರಾಮಾಯಣ ಕಾವ್ಯ…


(Published in nilume on 15.04.2016 – Shri Rama Navami day)

– ನಾಗೇಶ ಮೈಸೂರು ಶ್ರೀ ರಾಮ ಸೀತೆಯ ಕಥೆ ನಮಗೇನು ಹೊಸದಲ್ಲ ಬಿಡಿ.. ಎಲ್ಲಾ ಭಾಷೆಗಳಲ್ಲಿ ಖಂಡುಗಗಟ್ಟಲೆ ಕಥೆ, ಕಾವ್ಯಗಳು ಸಿಕ್ಕುತ್ತವೆ. ಆದರಿದು ಆಧುನಿಕ ವೇಗದ ಜಗ.. ಎಲ್ಲಾ ಸಂಕ್ಷಿಪ್ತದಲ್ಲಿ, ಫಾಸ್ಟ್ ಪುಡ್ಡಿನ ಹಾಗೆ ಶೀಘ್ರಗತಿಯಲ್ಲಿ…

Source: ನೂರು ಸಾಲಿನ ಸರಳ (ಮಿನಿ) ರಾಮಾಯಣ ಕಾವ್ಯ…